
ಜಿಲ್ಲಾ ಸುದ್ದಿಗಳು
ಸಾಲದ ಬಾದೆಗೆ ಹೆದರಿ ಮನನೊಂದ ರೈತ ಆತ್ಮಹತ್ಯೆ ಶರಣು…
ಸಾಲದ ಬಾದೆಗೆ ಹೆದರಿ ಮನನೊಂದ ರೈತ ಆತ್ಮಹತ್ಯೆ ಶರಣು… ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ38 ವರ್ಷ ನೇಣಿಗೆ ಶರಣಾಗಿರುವ ರೈತ ಹಲವು ಫೈನಾನ್ಸ್ ಗಳಲ್ಲಿ 12 ಲಕ್ಷಕ್ಕೂ ಅಧಿಕ ಸಾಲ ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ಸಾಲ ಮಾಡಿದ್ದ ರೈತ ರಾಜಣ್ಣ ಜಮೀನಿನಲ್ಲಿ 5ಕ್ಕೂ ಹೆಚ್ಚು ಬೋರ್ವೆಲ್ ಕೊರೆಸಿದರು ನೀರು ಸಿಗದ ಕಾರಣ ಆತ್ಮಹತ್ಯೆ ತನ್ನ ಮನೆಯ ಮೇಲು ಸಾಲ ಮಾಡಿ ಬೋರ್ ವೆಲ್ ಕೊರೆಸಿದ್ದ ರೈತ ಅಷ್ಟೇ…
ತಿಪಟೂರು ಕೋಡಿ ಸರ್ಕಲ್ ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕರಿಂದ ಪ್ರತಿಭಟನೆ
ತಿಪಟೂರು ಕೋಡಿ ಸರ್ಕಲ್ ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಒತ್ತಿಯಿಸಿ ಪ್ರತಿಭಟನೆ ಅಪಾರ ಸಂಖ್ಯೆಯಲ್ಲಿ ಬಸವೇಶ್ವರ ಅಭಿಮಾನಿಗಳು ಬಸವೇಶ್ವರ ಪ್ರತಿಮೆ ತೆರವುಗೊಳಿಸಿದಂತೆ ಪ್ರತಿಭಟನೆ ಬಸವಣ್ಣನವರ ಪುತ್ತಳಿಯನ್ನು ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತ ಮತ್ತು ನಗರಸಭಾ ಸಿಬ್ಬಂದಿ ಪುತ್ತಳಿಕೆ ತೆರವುಗೊಳಿಸದಂತೆ ವೀರಶೈವ ಲಿಂಗಾಯತ ಸಮುದಾಯದ ಒತ್ತಾಯ ಸಾವಿರಾರು ಸಂಖ್ಯೆಯಲ್ಲಿ ತಿಪಟೂರಿನ ಕೂಡಿ ಸರ್ಕಲ್ ಗೆ ಆಗಮಿಸುತ್ತಿರುವ ಲಿಂಗಾಯತ ಸಮುದಾಯ. ಬಹಳಷ್ಟು ವಿವಾದಾತ್ಮಕ ಜಾಗವಾಗಿ ಪರಿವರ್ತನೆಗೊಂಡಿರುವ ತಿಪಟೂರಿನ ಕೋಡಿ ಸರ್ಕಲ್. ಪ್ರಾಣ ಬೇಕಾದರೂ ಬಿಟ್ಟೆವು ಪ್ರತಿಮೆ ತೆರವುಗೊಳಿಸಲು ಬಿಡುವುದಿಲ್ಲ…
ತೊರೆಹಳ್ಳಿ ಗ್ರಾಮದಲ್ಲಿ ರಾಮಪ್ಪನ ಮುಳ್ಳಿನ ಹಾಸಿಗೆ ಜಾತ್ರ ಮಹೋತ್ಸವ
ಗುಬ್ಬಿ:ತಾಲ್ಲೂಕಿನ ಕಸಬಾ ಹೋಬಳಿ ತೊರೆಹಳ್ಳಿಯಲ್ಲಿ ಭಾನುವಾರ ರಾಮಪ್ಪದೇವರ ಜಾತ್ರೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿ ಯಾಗಿ ನೆರವೇರಿತು. ಸಂಪ್ರದಾಯದಂತೆ ದೇವಾಲಯದ ಅರ್ಚಕರು ರಾಮಪ್ಪಸ್ವಾಮಿಯ ಮುಖವಾಡವನ್ನು ಹೊತ್ತು,ಅರೇವಾದ್ಯ,ಚಿಟ್ಟೆಮೇಳ, ಕೊಂಬು,ಕಹಳೆಗಳೊಂದಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಅಪಾರ ಭಕ್ತಾದಿಗಳೊಂದಿಗೆ ಊರ ಮುಂದೆ ಜಾಲಿ ಮುಳ್ಳನ್ನು ಸುರಿದು ಸಿದ್ಧಪಡಿಸಿದ್ದ ಮುಳ್ಳಿನ ಹಾಸಿಗೆಯ ಬಳಿ ಬಂದು ಕುಣಿಸಲಾಯಿತು.ಮುಳ್ಳಿನ ಹಾಸಿಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮಪ್ಪಸ್ವಾಮಿಯ ಮುಖವಾಡ ವನ್ನು ಹೊತ್ತಿದ್ದ ಅರ್ಚಕರು ಕುಣಿದು ಕೊಪ್ಪಳಿಸುತ್ತಾ ಮುಳ್ಳಿನ ಹಾಸಿಗೆಯ ಮೇಲೆ ಚಾಟಿ ಬೀಸುತ್ತಾ ಬೀಳುವ…
ಬೇವಿ ಲೇಪಿತ ಯೂರಿಯಾ ರಸಗೊಬ್ಬರ ಅಕ್ರಮ ಸಾಗಾಣಿಕೆ ಜಪ್ತಿ :
ದಿನಾಂಕ : 04.04.2024ರ ಬೆಳಿಗ್ಗೆ.6.10ರ ಸಮಯದಲ್ಲಿ ಲಾರಿ ಸಂಖ್ಯೆ: KA010AL4437ರಲ್ಲಿ ಅನುಮಾನಸ್ಪದ ಸರಕು ಸಾಗಿಸುತ್ತಿರುವಾಗ ಶ್ರೀ.T.R.ಕೃಷ್ಣಕುಮಾರ್ , ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು ಇವರ ನಿರ್ದೇಶನದ ಮೇರಿಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ತುಮಕೂರಿನ ಶ್ರೀ.ನಾಗರಾಜ.C.ಗಂಗನಗೌಡರ್ & ಅವರ ತಂಡ (ನಾಗರಾಜು.S., CTO., & ಹರ್ಷಿತ.CTI.,) ರಂಗಾಪುರ-ಅಂತರಸಹಳ್ಳಿ ಸರ್ವೀಸ್ ರಸ್ತೆ ಹತ್ತಿರ ತಡೆ ಹಿಡಿದು ದಾಖಲಾತಿ ಪರಿಶೀಲಿಸಿದಾಗ ದಾಖಲಾತಿ ಸರಕಾದ Calcium Carbonate ಮತ್ತು ವಾಸ್ತವ ಸರಕಾದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು…
ವರ್ತುಲ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶುಭ ಕಲ್ಯಾಣ್ ಸೂಚನೆ
ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ಶಿರಾ ಗೇಟ್-ಗುಬ್ಬಿ ಗೇಟ್‍ವರೆಗೂ ಸಂಪರ್ಕಿಸುವ ವರ್ತುಲ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ವರ್ತುಲ ರಸ್ತೆ ಕಾಮಗಾರಿ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ನಗರದ ಎಸ್ ಮಾಲ್ ಬಳಿ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕೋಡಿ ಬಸವಣ್ಣ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಶಿರಾಗೇಟ್-ಗುಬ್ಬಿಗೇಟ್ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಯಾವುದೇ ಅಪಘಾತಗಳು…
ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ಕೂಡಲೇ ನೂತನ ಬೋರ್ವೆಲ್ ಕೊರೆಸಿದ ಗುಬ್ಬಿ ತಾಲೂಕು ಆಡಳಿತ
ಗುಬ್ಬಿ ತಾಲೊಕು ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರೆಹಳ್ಳ ಕಾವಲ್ ನಲ್ಲಿ ಕಳೆದ 01 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಕೊಳವೆ ಬಾವಿಯಲ್ಲಿ ನೀರು ಬರದೇ ಇದ್ದ ವೇಳೆ ರೀ ಬೋರ್ವೆಲ್ ಕೊರೆಸಿದರೂ ಸಹ ನೀರು ಬರುತ್ತಿರಲಿಲ್ಲ. ಕೊರೆದಿದ್ದ ಕೊಳವೆ ಬಾವಿಯಲ್ಲಿ ಯಂತ್ರೋಪಕರಣಗಳು ಕಳಚ ಬಿದ್ದ ಕಾರಣ ಕುಡಿಯುವ ನೀರಿಗೆ ಬಿದರೆಹಳ್ಳ…
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆ
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆ ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ‘ಹೊರರೋಗಿಗಳ ವಿಸ್ತರಣಾ ಘಟಕದಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆಯನ್ನು ಇದೇ ಮೇ…
ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ :
ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ : ತುಮಕೂರು: ನಗರದಲ್ಲಿ ನಿರ್ಮಾಣವಾಗಿರುವ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಮೇ ಮಾಹೆ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶುಕ್ರವಾರ ಸಂಜೆ ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕೆ…
ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು
ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಭಾಗ್ಯಮ್ಮ(50) w/o ಲೇಟ್.ರಾಮಚಂದ್ರಯ್ಯ ಎಂಬ ರೈತ ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು,ಮೃತ ಮಹಿಳೆ ತಿಪಟೂರಿನ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ಸಾಲ ಪಡೆದು ಸಾಲ ಹಿಂದಿರುಗಿಸಲಾಗದೆ, ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು,ಗಂಡ ನಿಧನರಾಗಿದ್ದು,ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದಲ್ಲಿ…
ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆ
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆಯು ಮೇ ತಿಂಗಳ 5 ಮತ್ತು 6 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದಿನಾಂಕ 5 ರಂದು ಬೆಳಿಗ್ಗೆ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆಯಲ್ಲಿ ತಂದು ಊರಮುಂದೆ ಮುಳ್ಳಿನ ಹಾಸಿಗೆಯ ಮೇಲೆ ಕುಣಿಸಲಾಗುವುದು. ಅದೇ ದಿನ ಸಂಜೆ ಪಕ್ಕದ ಗ್ರಾಮ ಮತ್ತಿಘಟ್ಟ ದಲ್ಲಿರುವ ಮೂಲ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದ ನಂತರ ರಾತ್ರಿ ಮೆರವಣಿಗೆ ಮಾಡಲಾಗುವುದು. ದಿನಾಂಕ 6 ರಂದು…