
ಜಿಲ್ಲಾ ಸುದ್ದಿಗಳು
ಕೊಬ್ಬರಿ ನಾಡಿಗೆ ಸಚಿವ ವಿ.ಸೋಮಣ್ಣ ಬೇಟಿ
ತಿಪಟೂರು. ಕಲ್ಪತರು ನಾಡುಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿ.ಸೋಮಣ್ಣ ಭೇಟಿ ನೀಡಿದರು. ನಗರದ ತುಂಬೆಲ್ಲ ಸಚಿವರಿಗೆ ಅದ್ದೂರಿ ಸ್ವಾಗತ ಮಾಡಲಾಯಿತು, ನಗರದ ಗ್ರಾಮ ದೇವತೆ ಕೆಂಪಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು. ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಮತ್ತು ಬೃಹತ್ ಕೊಬ್ಬರಿ ಹಾರವನ್ನು ಹಾಕಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ…
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೆಳಧರ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಂದ ಪ್ರತಿಭಟನೆ
ತುಮಕೂರು : ಬೆಳಧರ ಸರ್ಕಾರಿ ಶಾಲಾ ಮಕ್ಕಳು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು. ಕಳೆದ ಹಲವಾರು ತಿಂಗಳುಗಳಿಂದ ಶಾಲಾ ಕಾಂಪೌಂಡ್ ವಿವಾದ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳಲು ವಿಫಲವಾಗಿರುವ ಹಿನ್ನಲೆ ಶಾಲಾ ಮಕ್ಕಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆದರು. ಬೆಳೆಧರ ಸರ್ಕಾರಿ ಶಾಲೆಯ ಸಮೀಪ ಕಲ್ಯಾಣ ಮಂಟಪವಿದ್ದು, ಮದುವೆ ಮುಂತಾದ ಸಮಾರಂಭಗಳು / ಕಾರ್ಯಕ್ರಮಗಳು ನಡೆಯುತ್ತಿರುತ್ತವೆ,…
ಚಿನ್ನೇನಹಳ್ಳಿ ವಾಂತಿ-ಭೇದಿ ಪ್ರಕರಣ ರೋಗಿಗಳು ಗುಣಮುಖರಾಗುವವರೆಗೆ ಚಿಕಿತ್ಸೆ ನೀಡಲು ಗೃಹ ಸಚಿವರ ಸೂಚನೆ
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಉತ್ತಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿನ್ನೇನಹಳ್ಳಿ ಗ್ರಾಮದ ಜನರು ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ ಧೈರ್ಯ…
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಪುಡಿದೆದ್ದ ಹೋರಾಟ ಸಮಿತಿ ಜೂ.25ಕ್ಕೆ ಜಿಲ್ಲಾ ಬಂದ್ ಗೆ ಕರೆ
: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಪುಡಿದೆದ್ದ ಹೋರಾಟ ಸಮಿತಿ ಜೂ.25ಕ್ಕೆ ಜಿಲ್ಲಾ ಬಂದ್ ಗೆ ಕರೆ ಹಿನ್ನೆಲೆ ಗುಬ್ಬಿ ಪ್ರವಾಸ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಮಾಗಡಿಯ ಶ್ರೀರಂಗ ಏತ ಯೋಜನೆಗೆ ಕುಣಿಗಲ್‌ನಿಂದ ಹೇಮಾವತಿ ನೀರು ಹರಿಸಲು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ಕೊಟ್ಟಿದ್ರು. ಯೋಜನೆ ಜಾರಿಯಾದಾಗಿನಿಂದ ರೈತರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತುಮಕೂರು ಜನರ ಆತಂಕಕ್ಕೂ ಕಾರಣವಾಗಿದೆ. ಹಾಸನದಿಂದ ಹರಿದು…
ಜಿಲ್ಲಾಧಿಕಾರಿಗಳಿಗೆ ಸವಿತಾ ಸಮಾಜದ ಮುಖಂಡರಿಂದ ಮನವಿ
ತುಮಕೂರು : ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ವತಿಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಕ್ಷೌರಿಕರಿಗೆ ಆಗುತ್ತಿರುವ ಕುಂದುಕೊರತೆ ಮತ್ತು ತರಬೇತಿ ಶಿಬಿರಗಳನ್ನು ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರದಲ್ಲಿ ನಡೆಸುವಂತೆ ಕೋರಿ ಮನವಿಯನ್ನು ಅಧ್ಯಕ್ಷರಾದ ಕಟ್‍ವೆಲ್ ರಂಗನಾಥ್‍ರವರು ಇಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್‍ರವರಿಗೆ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್‍ವೆಲ್ ರಂಗನಾಥ್ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಕ್ಷೌರಿಕ ವೃತ್ತಿಗೆ ಸಂಬಂಧಿಸಿದಂತೆ…
ರೈತಕವಿ ಡಾ.ಶಂಕರಪ್ಪ ಬಳ್ಳೆ ಕಟ್ಟೆರವರಿಗೆ ಡಾ.ಬಿ.ಆರ್ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ಪ್ರಧಾನ*
ತಿಪಟೂರು: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ “ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ”ದ ವತಿಯಿಂದ ನಡೆದ “ಕನ್ನಡ ಸಾಹಿತ್ಯ ಸಂಭ್ರಮ ” ಕಾರ್ಯಕ್ರಮವನ್ನು ರಾಮೋಹಳ್ಳಿ ಸಿದ್ದಾರೂಢ ಮಿಷನ್ ಆಶ್ರಮದ ಡಾ. ಆರೂಢ ಭಾರತೀಯ ಮಹಾಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವದಿಸಿದರು ನಂತರ ಕವಿಗೋಷ್ಠಿ ,ಕೃತಿ ಬಿಡುಗಡೆ, ಜಾನಪದ ನೃತ್ಯ ಉಪನ್ಯಾಸ , ಅತಿಥಿ ನುಡಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿದವು. ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗೌರವ ಪುರಸ್ಕಾರದಲ್ಲಿ ಕಲ್ಪತರು ನಾಡಿನ ರೈತಕವಿ ಡಾ.ಪಿ.ಶಂಕ್ರಪ್ಪಬಳ್ಳೇ ಕಟ್ಟೆರವರಿಗೆ’ ಸಾಹಿತ್ಯ…
ಬಾಲಕಾರ್ಮಿಕ ನಿರ್ಮೂಲನಾ ಅಭಿಯಾನದ ಕುರಿತು ಕಾನೂನು ಅರಿವು ಕಾರ್ಯಕ್ರಮ
ತಿಪಟೂರು: ನಗರದ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ದಿನಾಂಕ 11/06/ 2024 ರ ಮಂಗಳವಾರದಂದು ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ತಿಪಟೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಾಲಕಾರ್ಮಿಕ ನಿರ್ಮೂಲನೆಯ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ದೀಪಾ.ವಿ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲ್ಲೂಕು ಕಾನೂನು ಸೇವಾ ಸಮಿತಿ,ತಿಪಟೂರು ರವರು ಮಾತನಾಡಿ ಸಂವಿಧಾನವು ನಮಗೆ ಕೊಟ್ಟಿರುವ ಮೂಲಭೂತ…
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರಿದ ಕೊಂಡ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವೀಣಾ ಸತೀಶ್
ಗುಬ್ಬಿ ತಾಲೂಕಿನ ಕೊಂಡ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ವೀಣಾ ಸತೀಶ್ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಇದುವರೆಗೂ ಇದ್ದರು ಈಗ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್‍ಡಿ ದಿಲೀಪ್ ಕುಮಾರ್ ತಿಳಿಸಿದರು. ಪಟ್ಟಣದ ಅವರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಆಯ್ಕೆ ಮತ್ತು ತುಮಕೂರು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಚಿವ…
ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ: ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 8ನೇ ಸ್ಥಾನ ಪಡೆದ ಪ್ರಿಯಾ ಶಾಲೆಯ ಸಿಂಚನ*
ತುರುವೇಕೆರೆ: ಎಸ್.ಎಸ್.ಎಲ್ .ಸಿ ಪರೀಕ್ಷೆಯ ಫಲಿತಾಂಶದಲ್ಲಿ 607 ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದ ಶಾಲೆಯ ವಿದ್ಯಾರ್ಥಿನಿ ಎಂ.ಬಿ.ಸಿಂಚನ ಮರು ಮೌಲ್ಯಮಾಪನದ ನಂತರ 617ಕ್ಕೆ ಅಂಕ ಗಳಿಕೆ ಹೆಚ್ಚಿಸಿಕೊಂಡು ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 8 ನೇ ಸ್ಥಾನವನ್ನು ಪಡೆದಿರುತ್ತಾಳೆ ಎಂದು ಪ್ರಿಯಾ ಆಂಗ್ಲ ಶಾಲೆಯ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆಯಷ್ಟೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿ ನಮ್ಮ ಶಾಲೆಯು ಶೇ.100 ಫಲಿತಾಂಶ ಪಡೆದಿದೆ. ಈ…
ಕೆ ಪಿ ಸಿ ಸಿ ಸದಸ್ಯರಾಗಿ ಡಿ ಸಿ ಗೌರೀಶಂಕರ್ ನೇಮಕ
ಕೆಪಿಸಿಸಿಯ ನೂತನ ಸದಸ್ಯರಾಗಿ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿಸಿ ಗೌರಿಶಂಕರ್ ನೇಮಕವಾಗಿದ್ದಾರೆ. ಕೆಪಿಸಿಸಿಯ ನೂತನ ಸದಸ್ಯರಾಗಿ ಡಿಸಿ ಗೌರಿಶಂಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಿ ಸಿ ಗೌರೀಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಐದೇ ತಿಂಗಳಲ್ಲಿ ಗ್ರಾಮಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸದೃಢಗೊಳಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡರಿಗೆ 71000 ಮತ ಹಾಕಿಸಿ…