ಎಲ್ಲಾ ಆಡಳಿತ ಇಲಾಖೆಗಳ ತಾಯಿ ಕಂದಾಯ ಇಲಾಖೆ ತಹಶೀಲ್ದಾರ್ ಆರತಿ ಬಿ
ಗುಬ್ಬಿ ಸುದ್ದಿ ಕಂದಾಯ ಇಲಾಖೆಯು ರಾಜ್ಯದ ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಇಲಾಖೆಯನ್ನು ಸಾಮಾನ್ಯವಾಗಿ ಎಲ್ಲಾ ಆಡಳಿತ ಇಲಾಖೆಗಳ ತಾಯಿ ಎಂದು ಕರೆಯಲಾಗುತ್ತದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು. ಕಂದಾಯ ಇಲಾಖೆಯು ನಾಗರಿಕರ ಜೀವನದ ಬಹುತೇಕ ಎಲ್ಲಾ ಅಂಶಗಳನ್ನು ಸ್ಪರ್ಶಿಸುವ ಮೂಲಕ ವ್ಯಾಪಕವಾಗಿದ್ದು, ಸಾಮಾಜಿಕ ಅಭಿವೃದ್ಧಿಗೆ ಇಲಾಖೆಯ ಕೊಡುಗೆ ಅಪಾರ. ಶ್ರೀಸಾಮಾನ್ಯನ ಬದುಕಿನ ಪ್ರತಿಯೊಂದು ರಂಗದಲ್ಲೂ ಕಂದಾಯ ಇಲಾಖೆಯ ಪಾತ್ರ ಬಹುಮುಖ್ಯ ಎಂದು ತಿಳಿಸಿದರು. …