ರಸ್ತೆ ಅಪಘಾತ ತಾಯಿ ಮಗಳ ಸಾವು.
ತಿಪಟೂರು. ಪದೇ ಪದೇ ಹೆಚ್ಚುತ್ತಿರುವ ಅಪಘಾತಗಳಿಂದ ರೋಸಿ ಹೋದ ಗ್ರಾಮಸ್ಥರಿಂದ ಶವ ತೆಗೆಯಲು ಬಿಡದೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ವರದಿಯಾಗಿದೆ. ಬೈಪಾಸ್ ಗೆ ಹೊಂದಿಕೊಂಡಂತಿರುವ ರಾಮಶೆಟ್ಟಿ ಹಳ್ಳಿ ಗ್ರಾಮದ ಕಮಲಮ್ಮ (35) ವೀಣಾ (14) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಇಂದು ಬೆಳಗ್ಗೆ 8:50 ರ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ,ತಾಯಿ ಮಗಳ ಹಿಂಬದಿಯಿಂದ ಬಂದ ಗಾರ್ಮೆಂಟ್ ನಾ ಮಿನಿ ಬಸ್ (kA-05 AD-4275) ನಂಬರ್ ನ ಗಾಡಿಯು ಅತಿ ವೇಗವಾಗಿ…