ನಾಲೆಯಲ್ಲಿ ನೀರು ಬಿಟ್ಟೆವಾದರೂ ಪೈಪ್ ಲೈನ್ ನಲ್ಲಿ ನೀರು ಬಿಡಲು ಒಲ್ಲೆವು – ಮಾಜಿ ಸಚಿವ ಸೊಗಡು ಶಿವಣ್ಣ*
ರಾಮನಗರ ಜಿಲ್ಲೆಯ ಮಾಗಡಿಯ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಂಡು ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ ಲಿಂಕ್ ಕೆನಾಲ್ ಮೂಲಕ ಪೈಪ್ ಲೈನ್ ನಲ್ಲಿ ನೀರು ಬಿಡಲು ಸುತಾರಾಮ್ ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಇಂದು ತುರುವೇಕೆರೆ ತಾಲ್ಲೂಕು ಸಿ ಎಸ್ ಪುರ ಹೋಬಳಿ ಚೆನ್ನೇನಹಳ್ಳಿ ಗ್ರಾಮದಲ್ಲಿ ರಾಮನಗರ ಜಿಲ್ಲೆಗೆ ಹೇಮಾವತಿ ನೀರು ಕೊಂಡೊಯ್ಯಲು ಪೈಪ್ ಲೈನ್ ಕಾಮಗಾರಿಗಾಗಿ ನಿರ್ಮಾಣ ಮಾಡಿರುವ ನಾಲೆಯನ್ನು ಜೆಸಿಬಿಗಳ ಮೂಲಕ…