
ಪ್ರಮುಖ ಸುದ್ದಿಗಳು
ಪರಿಸರ ದಿನ ವೆಂದರೆ ಗಿಡ ನೆಡುವುದು ಮಾತ್ರವಲ್ಲ, ಪರಿಸರದೊಂದಿಗೆ ಪ್ರೀತಿಯಿಂದ ಬದುಕುವುದು ” – ಕೃಷ್ಣಮೂರ್ತಿ ಬಿಳಿಗೆರೆ*
ಪರಿಸರ ದಿನಾಚರಣೆ ಆಚರಿಸುವುದೆಂದರೆ ಗಿಡ ನೆಡುವುದು ಮಾತ್ರವಲ್ಲ ನಮ್ಮ ಸುತ್ತ ಮುತ್ತಲಿನ ಪರಿಸರದೊಂದಿಗೆ ಪ್ರೀತಿಯಿಂದ ಬದುಕುವುದು , ಒಳ್ಳೆಯ ಆರೋಗ್ಯ ಪೂರ್ಣ ಆಹಾರ ಸೇವಿಸುವುದು, ಮಳೆ ನೀರನ್ನು ಹಿಡಿದು ಸಂಗ್ರಹಿಸಿ ಬಳಸುವುದು, ಪ್ರಕೃತಿಯೊಂದಿಗೆ ಬದುಕುವುದು ಎಂದು ಕವಿ , ಜೀವಪರ ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು. ಅವರು ಗುಬ್ಬಿ ತಾಲ್ಲೂಕು ಕಾಡಶೆಟ್ಟಿಹಳ್ಳಿ ಗ್ರಾಮದ ಜ್ಞಾನಮಲ್ಲಿಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪರಿಸರ ದಿನದ ಪ್ರಯುಕ್ತ ನಡೆದ ” “ಭೂಮಿಯೊಂದು ಮಹಾಬೀಜ”- ಕವಿ ಕೃಷ್ಣ ಮೂರ್ತಿ…
ಅಭಿವೃದ್ಧಿಯ ಹೆಸರಿನಲ್ಲಿ, ಧಾರ್ಮಿಕ ಜಾಗಕ್ಕೆ ಕುತ್ತು.
ನಗರದ ಪುರಾತನ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ, ಅಭಿವೃದ್ಧಿಯ ಹೆಸರಿನಲ್ಲಿ ಆವರಣದಲ್ಲಿರುವ ದೈವ ಸ್ವರೂಪಿ ಅರಳಿ ಕಟ್ಟೆ ತೆರವಿಗೆ ಮುಂದಾಗಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಹಳಷ್ಟು ವರ್ಷಗಳಿಂದ ಅರಳಿ, ಬೇವು, ಹತ್ತಿ, ಬಿಲ್ವಪತ್ರೆ ಮತ್ತು ಬನ್ನಿ ಮರಗಳೆಂಬ ಪಂಚವೃಕ್ಷಗಳಿದ್ದು. ಪ್ರತಿ ದಿನಾಲು ದೈವ ಸ್ವರೂಪಿ ಮರಗಳಿಗೆ ನೂರಾರು ಜನ ಮುಂಜಾನೆ ಮತ್ತು ಮುಸ್ಸಂಜೆ ಪೂಜೆ ಸಲ್ಲಿಸುವ ಪದ್ಧತಿ ಬಹಳಷ್ಟು ವರ್ಷಗಳಿಂದ ವಾಡಿಕೆಯಾಗಿ ಬಂದಿದೆ. ಕಲ್ಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ…
ಹಣ್ಣಿನ ಸಸಿ ವಿತರಿಸಿ ಪರಿಸರ ದಿನ ಆಚರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ
ತುರುವೇಕೆರೆ: ತಾಲೂಕಿನ ಗೋಣಿತುಮಕೂರು ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯರಿಗೆ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. | ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಯಶೋಧರ್ ಮಾತನಾಡಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸು ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಪರಿಸರ ಶುದ್ಧವಾಗಿರಬೇಕಾದರೆ ಪರಿಶುದ್ಧವಾದ ಗಾಳಿ ಬೇಕು, ಶುದ್ಧ ಗಾಳಿ ದೊರೆಯಬೇಕಾದರೆ ಮರಗಿಡಗಳ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುಬ್ಬಿ ತಾಲೂಕಿನ ಹಲವು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಬ್ಬಿ ತಾಲೂಕಿನ ಬಿದಿರೆ ವಲಯದ ಪ್ರಭಾವತ್ ಹಳ್ಳಿ ಹಾಗೂ ಕಲ್ಲೂರು ಗ್ರಾಮದಲ್ಲಿ ಸ್ಫೂರ್ತಿ ಹಾಗೂ ನವಭಾರತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಜೀವ ಜಲ ಉಳಿಸಿ ಹಾಗೂ ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಬಗ್ಗೆ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀಯುತ ಸತೀಶ್ ಸುವರ್ಣ ಸರ್ ರವರು ದೀಪಾ ಬೆಳಗಿಸುವುದರ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮ ಮಾತೃಶ್ರೀ ಅಮ್ಮನವರ ಆಶಯ ವಯಕ್ತಿಕ ಹಾಗೂ…
ಕಡಬ ಹೋಬಳಿ ಸಿ.ಕುನ್ನಾಲ ಗ್ರಾಮದ ಗೌಸ್ ಫೀರ್ ಮನೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಗುಬ್ಬಿ: ಭಾನುವಾರ ರಾತ್ರಿ ಗುಡುಗು ಮಿಂಚು ಸಿಡಿಲುಗಳೊಂದಿಗೆ ಸುರಿದ ಬಾರಿಮಳೆಗೆ ಹೊಲ,ಗದ್ದೆ, ತೋಟಗಳಲ್ಲಿ ನೀರು ಹರಿದಿರುವ ಜೊತೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿರುವುದು ಜನತೆಯಲ್ಲಿ ಸಂತೋಷವನ್ನು ಉಂಟು ಮಾಡಿದ್ದರೂ,ಅನೇಕ ಕಡೆ ಮನೆಗಳು,ಅಡಿಕೆ ಮತ್ತು ತೆಂಗಿನ ಮರಗಳು ಉರುಳಿವೆ. ಕಡಬ ಹೋಬಳಿ ಸಿ.ಕುನ್ನಾಲ ಗ್ರಾಮದ ಗೌಸ್ ಫೀರ್ ಮನೆಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಈರುಳ್ಳಿ ವ್ಯಾಪಾರಿಯಾಗಿದ್ದ ಅವರ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 3ಲಕ್ಷ ವೆಚ್ಚದ ಈರುಳ್ಳಿ ಸಂಪೂರ್ಣ ನೀರಿನಲ್ಲಿ ನೆಂದು ಹಾಳಾಗಿವೆ….
ಶಾಲಾ-ಕಾಲೇಜುಗಳ ಆವರಣ ಸ್ವಚ್ಛವಾಗಿಡಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
ತುಮಕೂರು : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಹಗಲು ಹೊತ್ತಿನಲ್ಲಿ ರೋಗಗಳನ್ನು ಹರಡುವಂತಹ ಸೊಳ್ಳೆಗಳ ಕಡಿತದಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ ಕೊಠಡಿಗಳನ್ನು ಪರಿಶೀಲಿಸಿ ಸ್ವಚ್ಛತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ ನಡೆದ ‘ಮುಂಗಾರು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು…
ಶ್ರೀ ಕಾರದೇಶ್ವರ ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳಿಗೆ, ವಿಧ್ಯಾಬ್ಯಾಸಕ್ಕಾಗಿ ದಾಖಲಾತಿ ಪ್ರಾರಂಭ
ಶ್ರೀ ಕಾರದೇಶ್ವರ ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳಿಗೆ, ವಿಧ್ಯಾಬ್ಯಾಸಕ್ಕಾಗಿ ದಾಖಲಾತಿ ಪ್ರಾರಂಭ 2024-25 ನೇ ಸಾಲಿನ ವಿದ್ಯಾಭ್ಯಾಸಕ್ಕಾಗಿ *ಶ್ರೀ ಕಾರದೇಶ್ವರ ಶ್ರೀ ಬೆಳ್ಳಾವಿ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳ, ವಿಧ್ಯಾಬ್ಯಾಸಕ್ಕಾಗಿ *5ನೇ ತರಗತಿಯಿಂದ ಪಿಯುಸಿವರೆಗೆ #ಸರ್ಕಾರಿ ಶಾಲೆ ಕನ್ನಡ ಮಾಧ್ಯಮದಲ್ಲಿ ಉಚಿತ ದಾಖಲಾತಿ ಪ್ರಾರಂಭವಾಗಿದ್ದು ಹಾಗೂ ಶ್ರೀ ಮಠದಲ್ಲಿ ಉಚಿತ ಊಟ,ಉಚಿತ ವಸತಿ ನಿಲಯದ ವ್ಯವಸ್ಥೆ ಇದ್ಧು* ಉಚಿತ ಪೆನ್ನು ಪುಸ್ತಕಗಳ ಸೌಲಭ್ಯದ ಜ್ಯೋತೆಗೆ (ಓದಲು,…
ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಲೋಕೇಶ್ವರ್
ಗುಬ್ಬಿ: ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗಲು ಸಾಧ್ಯವಾಗುವುದು ಎಂದು ಖೋ ಖೋ ಫೆಡರೇಶನ್ ರಾಜ್ಯಘಟಕದ ಅಧ್ಯಕ್ಷರಾದ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾದ ಲೋಕೇಶ್ವರ್ ತಿಳಿಸಿದರು. ಭಾನುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಮಕ್ಕಳ ಖೋಖೋ ಮತ್ತು ವಾಲಿಬಾಲ್ ಆಟಗಳ ತರಬೇತಿ ಹಾಗೂ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು ಖೋ ಖೋ ಆಟವು ಅಂತರಾಷ್ಟ್ರೀಯ ಕ್ರೀಡೆಯಾಗಿ ರೂಪಗೊಂಡಿದೆ. ಖೋ…
ಸುಗಮ ಮತ ಎಣಿಕಾ ಕಾರ್ಯಕ್ಕೆ ಸಕಲ ಸಿದ್ಧತೆ-ಜಿಲ್ಲಾಧಿಕಾರಿ
ತುಮಕೂರು: ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 26ರಂದು ಜರುಗಿದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4ರಂದು ಸುಗಮವಾಗಿ ಮತ ಎಣಿಕಾ ಕಾರ್ಯ ನಡೆಸಲು ಎಣಿಕಾ ಕೊಠಡಿ, ಎಣಿಕಾ ಟೇಬಲ್, ಅಗತ್ಯ ಅಧಿಕಾರಿ/ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು ಜಿಲ್ಲೆಯ ಲೋಕಸಭಾ…
ನ್ಯಾಯಾಧೀಶರಿಂದ ಕಾನೂನು ಅರಿವು ಕಾರ್ಯಕ್ರಮ
ತಿಪಟೂರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಿಪಟೂರು(ರಿ), ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಬಾಲಕಾರ್ಮಿಕ ನಿರ್ಮೂಲನ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಸಮಿತಿಯ ವಿ.ದೀಪಾ ರವರು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಾ,ಬಾಲ ಕಾರ್ಮಿಕ ನಿರ್ಮೂಲನೆಯ ಬಗ್ಗೆ ಒಂದಷ್ಟು ಕಾನೂನು ಅರಿವು…