ಪ್ರಮುಖ ಸುದ್ದಿಗಳು
ಭೂಸ್ವಾಧೀನ ಪರಿಹಾರಕ್ಕಾಗಿ ರೈತರಿಂದ ಅರ್ಜಿ ಸ್ವೀಕರಿಸಲು ಪ್ರತ್ಯೇಕ ಕೌಂಟರ್
ತುಮಕೂರು, : ತಾಲ್ಲೂಕಿನ ಬೆಳ್ಳಾವಿ ಹೋಬಳಿ ವ್ಯಾಪ್ತಿಯ ಸೋರೆಕುಂಟೆ, ಪಿ.ಗೊಲ್ಲಹಳ್ಳಿ, ಪುರದಕುಂಟೆ, ಗೌಡನಹಳ್ಳಿ, ಲಿಂಗನಹಳ್ಳಿ, ಗಿರಿಯನಹಳ್ಳಿ ಸೇರಿದಂತೆ 6 ಗ್ರಾಮಗಳ ಸುಮಾರು 1,722 ಎಕರೆ ವಿಸ್ತೀರ್ಣದಲ್ಲಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಯೋಜನೆ ಅಭಿವೃದ್ಧಿಗಾಗಿ ಭೂಮಿ ನೀಡಿರುವ ರೈತರ ಅಹವಾಲು ಅರ್ಜಿಗಳನ್ನು ಸ್ವೀಕರಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ವಿಶೇಷ ಭೂಸ್ವಾಧೀನ ಅಧಿಕಾರಿ ಸೋಮಪ್ಪ ಕಡಕೋಳ ಅವರ ನೇತೃತ್ವದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಅನ್ನು ಸ್ಥಾಪಿಸಲಾಗಿತ್ತು. ಯಲ್ಲದಡ್ಲು ಗ್ರಾಮದ 1, ಸೋರೆಕುಂಟೆ-5, ಪುರದಕುಂಟೆ-1,…
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ 24-25 ರ ಶೈಕ್ಷಣಿಕ ಸಭೆ
ಮಧುಗಿರಿ : ಜಿಲ್ಲಾ ಉಪನಿರ್ದೇಶಕ ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮುಂದಿನ 24-25 ರ ಶೈಕ್ಷಣಿಕ ಸಭೆಯನ್ನು ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯನ್ನು ಉದ್ದೇಶಿಸಿ ಉಪನಿರ್ದೇಶಕರಾದ ಗಂಗಾಧರ್ ಮಾತನಾಡಿ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ತರುವಲ್ಲಿ ಜಿಲ್ಲೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಶ್ರಮಿಸಿದ್ದಾರೆ, ಹಾಗೆಯೇ ಮುಂದಿನ ಶೈಕ್ಷಣಿಕ ವರ್ಷವೂ ಇನ್ನಷ್ಟು ಹೆಚ್ಚಿನ ಫಲಿತಾಂಶಕ್ಕೆ ಶ್ರಮಿಸಬೇಕು ಎಂದು…
ಸಾಹೇ ವಿಶ್ವವಿದ್ಯಾಲಯಕ್ಕೆ ಇಂದು ‘ಅವಲಾನ್ ವಿಶ್ವವಿದ್ಯಾಲಯದ ನಿಯೋಗ ಭೇಟಿ:
ಸಿದ್ದಾರ್ಥ ವೈದ್ಯಕೀಯ –ಇಂಜಿನಿಯರಿಂಗ್ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಅಧ್ಯಯನ-ವಿಚಾರ ವಿನಿಮಯ ತುಮಕೂರು: ಉನ್ನತ ಶಿಕ್ಷಣದ ಅಧ್ಯಯನ ಮತ್ತು ಸಾಂಸ್ಕøತಿಕ ವಿಷಯಗಳ ವಿನಿಮಯ ಮಾಡಿಕೊಳ್ಳಲು ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವವಿದ್ಯಾಲಯಕ್ಕೆ ಇಂದು (ಸೋಮವಾರ) ಭೇಟಿ ನೀಡಿದ ಉತ್ತರ ಅಮೇರಿಕಾದ ಕೆರಿಬಿಯನ್ ದ್ವೀಪರಾಷ್ಟ್ರ ಕುರಾಕೋವದ ‘ಅವಲಾನ್ ವಿಶ್ವವಿದ್ಯಾಲಯದ ನಿಯೋಗ’ವೂ ಸಿದ್ದಾರ್ಥ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ, ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿತು. ನಗರದ…
ಡಾ. ಜಿ. ಪರಮೇಶ್ವರ್ ಅವರ ಗೃಹ ಕಛೇರಿ ಮುಂದೆ ಪ್ರತಿಭಟನೆ ಮತ್ತು ಧರಣಿ – ಸೊಗಡು ಶಿವಣ್ಣ
ದಿನಾಂಕ 30.05.2024 ರಂದು ಬೆಳಗ್ಗೆ 11 ಗಂಟೆಗೆ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅವರ ಮನೆ ಮುಂದೆ ತುಮಕೂರು ಜಿಲ್ಲಾ ಹೇಮಾವತಿ ನೀರಾವರಿ ಹೋರಾಟ ಸಮಿತಿಯು ಧರಣಿ ನಡೆಸಲು ನಿಶ್ಚಯಿಸಿರುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಇಂದು ತುಮಕೂರು ನಗರದ ಸುಧಾ ಟಿ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಹೇಮಾವತಿ ನೀರು ನಮ್ಮದು ನಮ್ಮ ನೀರು ನಮ್ಮ ಹಕ್ಕು ವಿಚಾರವಾಗಿ ರಾಮನಗರ ಜಿಲ್ಲೆಯ ಮಾಗಡಿಗೆ ಎಕ್ಸಪ್ರೆಸ್…
ಎಂ.ಸಿ.ವೇಣುಗೋಪಾಲ್ ರವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಎಸ್.ಟಿ.ಶ್ರೀನಿವಾಸ್ ಮನವಿ
ತುಮಕೂರು ಗ್ರಾಮಾಂತರ ಕ್ಷೇತ್ರದ ಮುಖಂಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಅವರು ಎಂ.ಸಿ.ವೇಣುಗೋಪಾಲ್ ರವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನಿಡುವಂತೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಎಸ್.ಟಿ.ಶ್ರೀನಿವಾಸ್ ರವರು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ, ಸರ್ವರಿಗೂ ಸಮಾನ ಅಧಿಕಾರದ ಅವಕಾಶ ನೀಡುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಹಿಂದುಳಿದ ಸಮಾಜದವರು, ಸಾಮಾನ್ಯ ಕಾರ್ಯಕರ್ತರೂ ರಾಜಕೀಯ…
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಜನಸಂಪರ್ಕ ಸಭೆ
ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಲ್ಲೂರು ಕ್ರಾಸ್, ಕಡಬ, ರಂಗನಾಥಪುರ, ಹಾಗೂ ಮಾದಪುರ ಗ್ರಾಮಗಳಲ್ಲಿ ಗುಬ್ಬಿ ತಾಲೂಕಿನ ವೃತ್ತ ನಿರಿಕ್ಷಕರು ಹಾಗೂ ಸಬ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು. ಜನಸಂಪರ್ಕ ಸಭೆಯಲ್ಲಿ ನೆರದಿದ್ದ ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಜಾಲತಾಣದ ಅಪರಾಧಗಳು ಹೆಚ್ಚುತ್ತಿದ್ದು ಜನರು ಜಾಗರುಕತೆಯಿಂದ ಇರಬೇಕು ಅಂತಹ ಅಪರಾದಗಳು ಕಂಡು ಬಂದರೆ ಕೂಡಲೇ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಜನರಲ್ಲಿ ಜಾಗೃತಿ…
ಮೇ 30 : ಸಚಿವ ಡಾ.ಪರಮೇಶ್ವರ್ ಮನೆ ಮುಂಭಾಗ ಪ್ರತಿಭಟನೆ
ಹೇಮಾವತಿ ನಾಲಾ ವಲಯ ಗೊರೂರು ಜಲಾಶಯದಿಂದ ತುಮಕೂರಿಗೆ ಹಂಚಿಕೆಯಾದ ನೀರಿನಲ್ಲೇ , ಮಾಗಡಿ ಹಾಗೂ ರಾಮನಗರಕ್ಕೆ ಶ್ರೀರಂಗ ಯೋಜನೆ ಅಡಿ , ನೀರು ಸೆಳೆಯುವ ಹೇಮಾವತಿ ಎಕ್ಸ್‌ಪ್ರೆಸ್ ಚ್ಯಾಲನ್ ವಿರೋಧಿಸಿ , ನಡೆಯುತ್ತಿರುವ ಹೋರಾಟದ ಮುಂದಿನ ಹೆಜ್ಜೆಯ ಬಗ್ಗೆ ತುಮಕೂರು ನಗರದಲ್ಲಿಂದು ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗೆ ಬಗ್ಗೆ ಇದೇ ಮೇ 30 ರ…
ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ ಪ್ರಕರಣ ದಾಖಲು
ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ ಕೊರಟಗೆರೆ ಆಸ್ಪತ್ರೆಯಲ್ಲಿ ಸೈನಿಕನಿಗೆ ಚಿಕಿತ್ಸೆ.. ೫ಜನರ ಯುವಕರ ಮೇಲೆ ಪ್ರಕರಣ ದಾಖಲು. ಕೊರಟಗೆರೆ:- ಯೋಧನೋರ್ವ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಕ್ಕೆ ಸಿಟ್ಟಿಗೆದ್ದ ೫ ಜನ ಪುಡಿರೌಡಿಗಳ ತಂಡವೊಂದು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಮೇ.೨೧ರ ಮಂಗಳವಾರ ತಡರಾತ್ರಿ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ಬಾರ್ ಅಂಡ್…
ವಿಜೃಂಭಣೆಯಿಂದ ನಡೆದ ಎಲೇರಾಂಪುರ ಜಾತ್ರಾ ಮಹೋತ್ಸವ
ತಾಲೂಕಿನ ಕೋಳಾಲ ಹೋಬಳಿಯ ಎಲೇರಾಂಪುರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಹಗಲು ಮತ್ತು ರಾತ್ರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು .ಹಾಗೂ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಗಳನ್ನು ವಿಶೇಷವಾಗಿ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು ಜಾತ್ರೆಯಲ್ಲಿ ವಿಶೇಷವಾಗಿ ವೀರಭದ್ರ ಕುಣಿತ. ಕರಡಿ ವಾದ್ಯ. ಕಿಲುಕುದುರೆ. ತಮಟೆ. ವಾದ್ಯ. ಡೋಲು. ಹರೇ. ಸಿಡಿಮದ್ದು. ಹೆಣ್ಣು ಮಕ್ಕಳ ತ್ರಿಶೂಲ ಕುಣಿತ. ಜಾನಪದ ಕಲಾತಂಡ. ಆರ್ಕೆಸ್ಟ್ರಾ. ಮುಂತಾದ ಕಾರ್ಯಕ್ರಮಗಳು ಗಮನ…
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ,ವತಿಯಿಂದ ಭಗವನ್ ಬುದ್ದ ಜಯಂತಿ ಆಚರಣೆ
ತುಮಕೂರು:ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಶಾಖೆವತಿಯಿಂದ ಶಾಂತಿ ಮತ್ತು ಕರುಣೆಯನ್ನು ಜಗತ್ತಿಗೆ ಬೋಧಿಸಿದ ಭಗವಾನ್ ಬುದ್ದನ ೨೫೬೮ನೇ ಜನ್ಮ ಜಯಂತಿಯನ್ನು ಅಮಾನಿಕೆರೆಯ ಅರಳಿ ವೃಕ್ಷದ ಬಳಿ ಸರಳವಾಗಿ ಆಚರಿಸಲಾಯಿತು. ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಬುದ್ದದೇವನ ೨೫೬೮ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅಖಿಲ ಭಾರತ…