
ಜಿಲ್ಲಾ ಸುದ್ದಿಗಳು
ಒಳಮೀಸಲಾತಿ ಜಾರಿಗೊಳಿಸದಿದ್ದರೆ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಸಿಎಂ, ಸಚಿವರಿಗೆ ರಾಜ್ಯದೆಲ್ಲೆಡೆ ಘೇರಾವ್ ಮಾಡುವುದಾಗಿ ಮುಖಂಡರ ಎಚ್ಚರಿಕೆ
ಒಳಮೀಸಲಾತಿ ಜಾರಿಗೊಳಿಸದಿದ್ದರೆ ತುಮಕೂರು: ಸರ್ವೋಚ್ಛ ನ್ಯಾಯಾಲಯದ ಪೀಠದ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಮಾದಿಗ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ತಿಂಗಳ 18ರಂದು ನಡೆಯುವ ಸಚಿ ಸಂಪುಟ ಸಭೆ ಅಧಿವೇಶನದಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿ ಸಂಬಂಧ ತೀರ್ಮಾನ ಮಾಡಬೇಕು, ತಪ್ಪಿದಲ್ಲಿ ರಾಜ್ಯಾದ್ಯಂತ ಮುಖ್ಯಮಂತ್ರಿ, ಮಂತ್ರಿಗಳನ್ನು ಘೇರಾವ್ ಮಾಡಲಾಗುವುದು, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಸರ್ಕಾರಕ್ಕೆ…
ಮೋಜು ಮಸ್ತಿಯ ಕಡೆ ದಿಕ್ಕು ಬದಲಿಸುತ್ತಿದೆಯೇ ದೀಕ್ಷಾ ಭೂಮಿ ಯಾತ್ರೆ
ಮಹಾರಾಷ್ಟ್ರದ ನಾಗಪುರದಲ್ಲಿ ಡಾ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧಮ್ಮದ ದೀಕ್ಷಾ ಪಡೆದ ಭೂಮಿಯನ್ನು ದೀಕ್ಷಾ ಭೂಮಿಯೆಂದು ಗುರುತಿಸಿ ಈ ಪುಣ್ಯ ಭೂಮಿಗೆ ಬೌದ್ಧ ಧರ್ಮದ ಯಾತ್ರಾ ಕೇಂದ್ರವಾಗಿ ಪರಿಗಣಿಸಿ ಸರ್ಕಾರ ಪ್ರತಿ ವರ್ಷವೂ ನಾಗಪುರಕ್ಕೆ ಹಲವು ರಾಜ್ಯಗಳಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ದರ್ಶನ ಪಡೆದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಕಳೆದ ಐದು ವರ್ಷಗಳಿಂದ ಕರ್ನಾಟಕ ರಾಜ್ಯದಿಂದಲೂ ಸಹ ಬಹಳಷ್ಟು ಅಂಬೇಡ್ಕರ್ ಅವರ…
ಜಿಲ್ಲೆಯಲ್ಲಿ ಮುಂದಿನ 03 ದಿನಗಳ ಕಾಲ *ಗುಡುಗು/ಸಿಡುಲು ಸಹಿತ ಭಾರಿ ಮಳೆಯಾಗುವ* ಸಾಧ್ಯತೆ ಹೆಚ್ಚಾಗಿರುವುದರಿಂದ ಜಿಲ್ಲೆಗೆ Orange & Yellow ಅಲರ್ಟ್
ಜಿಲ್ಲೆಯಲ್ಲಿ ಮುಂದಿನ 03 ದಿನಗಳ ಕಾಲ *ಗುಡುಗು/ಸಿಡುಲು ಸಹಿತ ಭಾರಿ ಮಳೆಯಾಗುವ* ಸಾಧ್ಯತೆ ಹೆಚ್ಚಾಗಿರುವುದರಿಂದ ಜಿಲ್ಲೆಗೆ Orange & Yellow ಅಲರ್ಟ್ ನೀಡಲಾಗಿದೆ ಎಂದು ತಹಶೀಲ್ದಾರ್ ಆರತಿ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಸಿಡಲು/ಭಾರಿ ಮಳೆಯಿಂದ ಸುರಕ್ಷಿತರಾಗಿರಲು ಅರಿವು ಮೂಡಿಸುವುದು, ಮಣ್ಣಿನ ಮನೆ/ಕಟ್ಟಡಗಳು, ದುರ್ಬಲ ಮರದ ಕೊಂಬೆಗಳು, ಜಲಕಾಯ/ವಿದ್ಯುತ್ ವಸ್ತುಗಳಿಂದ ದೂರವಿರುವ ಬಗ್ಗೆ ಎಚ್ಚರವಹಿಸಲು ವ್ಯಾಪಕ ಪ್ರಚಾರ ನೀಡುವುದು, ಶಾಲೆ/ಅಂಗನವಾಡಿ ಮೇಲ್ಚಾವಣಿ/ಗೋಡೆಗಳ ಸುಸ್ಥಿತಿ ಪರಿಶೀಲಿಸುವುದು, ನದಿ/ಹಳ್ಳ/ಕೆರೆ/ಕಟ್ಟೆ/ರಸ್ತೆ/ಸೇತುವೆ/ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳ…
ತುಮಕೂರು ದಸರಾ ಉತ್ಸವ ಗಮನ ಸೆಳೆದ ಮಿನಿ ಮ್ಯಾರಥಾನ್
ತುಮಕೂರು ದಸರಾ ಉತ್ಸವ ಃ ಗಮನ ಸೆಳೆದ ಮಿನಿ ಮ್ಯಾರಥಾನ್ ಸದ್ಯದಲ್ಲೇ ಇಂಟರ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಆಯೋಜನೆ: ಸಚಿವ ಪರಮೇಶ್ವರ್ ತುಮಕೂರು: ತುಮಕೂರು ದಸರಾ ಉತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಿನಿ ಮ್ಯಾರಥಾನ್‍ನಲ್ಲಿ ಸಾರ್ವಜನಿಕರು ಉತ್ಸಾಹದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಿನಿ ಮ್ಯಾರಥಾನ್‍ಗೆ ಬಾವುಟ ತೋರುವ ಮೂಲಕ ಚಾಲನೆ ನೀಡಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಯುವ ಸಮುದಾಯ…
ಬೋನಿಗೆ ಬಿದ್ದ ಚಿರತೆ
ತಿಪಟೂರು.ಹೊನ್ನವಳ್ಳಿ ಹೋಬಳಿಯ ಹುರುಳಿ ಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆಯೊಂದು ಸೆರೆ ಸಿಕ್ಕಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಇನ್ನೂ ಮೂರು ನಾಲ್ಕು ಚಿರತೆಗಳು ಗುಂಪು ಗುಂಪಾಗಿ ಓಡಾಡುತ್ತವೆ, ರಾತ್ರಿ ವೇಳೆಯಲ್ಲಿ ತೋಟಕ್ಕೆ ತೆರಳಲು ಚಿರತೆ ಹಾವಳಿಯಿಂದಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಇದೆ. ಇನ್ನು ಸೆರೆಸಿಕ್ಕ ಚಿರತೆಯನ್ನು ದೂರ ಬಿಡದೆ,ಕೇವಲ 6 ಕಿ.ಮೀ ಅಂತರದಲ್ಲಿರುವ ಹಾಲ್ಕುರಿಕೆ ಮೀಸಲು ಅರಣ್ಯಕ್ಕೆ ಬಿಡಲಾಗಿದೆ. ಹತ್ತಿರದಲ್ಲಿ ಬಿಟ್ಟಿರುವುದರಿಂದ ಹುರುಳಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ…
ವೈಭವಯುತ ತುಮಕೂರು ದಸರಾಕ್ಕೆ ಚಾಲನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು : ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ವೈಭವಯುತ ತುಮಕೂರು ದಸರಾ ಉತ್ಸವವು ಗುರುವಾರದಿಂದ ಪ್ರಾರಂಭಗೊಂಡಿದ್ದು, ಅಕ್ಟೋಬರ್ 12ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಂಸ್ಕøತಿ ಹಾಗೂ ಧಾರ್ಮಿಕ ಆಚರಣೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ತುಮಕೂರು ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಶ್ರೀ…
ಗುಬ್ಬಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ 68 ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ
ಗುಬ್ಬಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, BC TRUST ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ವತಿಯಿಂದ ತಾಲೂಕಿನ 68 ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಸತೀಶ್ ಸುವರ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ರೀಜಿನಲ್ ಮ್ಯಾನೇಜರ್ ಬಮ್ ಶಂಕರ್ ಮಿಶ್ರ, ಚೀಫ್ ಮ್ಯಾನೇಜರ್ ಶಾಲಿನಿ ಕುಮಾರಿ ಮೇಡಂ, ಅಸಿಸ್ಟೆಂಟ್ ಮ್ಯಾನೇಜರ್ ಅದ ಚಿನ್ನ ಸರ್ ಹಾಗೂ ಜನಜಾಗೃತಿ ವೇದಿಕೆಯ…
ಮೈಸೂರು ದಸರಾ: ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ
ಮೈಸೂರು. ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಆಹ್ವಾನ ನೀಡಿದರು. ಕೆ.ಆರ್. ನಗರ ವಿಧಾನ ಸಭಾ ಶಾಸಕ ಡಿ.ರವಿಶಂಕರ್, ಎಚ್.ಡಿ ಕೋಟೆ ಶಾಸಕರಾದ ಅನಿಲ್ ಕುಮಾರ್, ವಿಧಾನ ಪರಿಷತ್ ಶಾಸಕ ಡಾ ಯತೀಂದ್ರ ಎಸ್, ಸಿ.ಎನ್.ಮಂಜೇಗೌಡ, ಡಾ ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಸ್ವಾಗತ ಸಮಿತಿಯ ಅಧಿಕಾರಿಗಳು ಮತ್ತಿತರರೊಂದಿಗೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ…
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಂಬಿಬಿಎಸ್ ವಿದ್ಯಾರ್ಥಿ
ತಿಪಟೂರು ತಾಲೂಕಿನ ಮಾವಿನಹಳ್ಳಿ ಗ್ರಾಮವಾಸಿಯಾದ ವಿರೂಪಾಕ್ಷ ಮೂರ್ತಿಯವರ ಮಗನಾದ 19 ವರ್ಷದ ಕೀರ್ತನ. ವಿ ಎಂಬ ಯುವಕ ಕೃಷಿ ಕೊಂಡಕ್ಕೆ ಬಿದ್ದು ಪ್ರಾಣವನ್ನು ಬಿಟ್ಟ ದುರ್ಘಟನೆ ನಡೆದಿದೆ. ಮೃತ ದುರ್ದೈವಿ ಯುವಕ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಇವರು ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿ ತೋಟದ ಮನೆಯಲ್ಲಿ ವಾಸವಾಗಿದ್ದು ಇಂದು ಸಂಜೆ 4:30ರ ವೇಳೆಯಲ್ಲಿ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಹೊನ್ನವಳ್ಳಿ…
ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ರೈತರ ಜಮೀನಿಗೆ ಪರ್ಯಾಯವಾಗಿ ಜಮೀನು ಗುರುತಿಸಿದ ತಾಲೂಕು ಆಡಳಿತ
ಗುಬ್ಬಿ ಸುದ್ದಿ ಗುಬ್ಬಿ ತಾಲೂಕಿನ ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ರೈತರ ಜಮೀನಿಗೆ ಪರ್ಯಾಯವಾಗಿ ರೈತರಿಗೆ ಸರ್ಕಾರದ ವತಿಯಿಂದ ಮರು ಮಂಜೂರು ಮಾಡಿ ಹದ್ದು ಬಸ್ತ್ ಮಾಡಿ ಜಮೀನನ್ನು ಗುರ್ತಿಸಿ ಕೊಡಲು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ ತಾಲೂಕು ಆಡಳಿತ ಇಂದು ಪೊಲೀಸ್ ಬಂದಬಸ್ತ್ ಮೂಲಕ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ ಬಿ. ನೇತೃತ್ವದಲ್ಲಿ ಡಿ ವೈ ಎಸ್ಪಿ ಶೇಖರ್ ಸಮ್ಮುಖದಲ್ಲಿ ಜಾಗವನ್ನು ಗುರ್ತಿಸಿಕೊಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಬಿದರೆಹಳ್ಳ…