ಜಿಲ್ಲಾ ಸುದ್ದಿಗಳು
ಗುಬ್ಬಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ 68 ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ
ಗುಬ್ಬಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, BC TRUST ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ವತಿಯಿಂದ ತಾಲೂಕಿನ 68 ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಸತೀಶ್ ಸುವರ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ರೀಜಿನಲ್ ಮ್ಯಾನೇಜರ್ ಬಮ್ ಶಂಕರ್ ಮಿಶ್ರ, ಚೀಫ್ ಮ್ಯಾನೇಜರ್ ಶಾಲಿನಿ ಕುಮಾರಿ ಮೇಡಂ, ಅಸಿಸ್ಟೆಂಟ್ ಮ್ಯಾನೇಜರ್ ಅದ ಚಿನ್ನ ಸರ್ ಹಾಗೂ ಜನಜಾಗೃತಿ ವೇದಿಕೆಯ…
ಮೈಸೂರು ದಸರಾ: ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ
ಮೈಸೂರು. ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಇಂದು ಆಹ್ವಾನ ನೀಡಿದರು. ಕೆ.ಆರ್. ನಗರ ವಿಧಾನ ಸಭಾ ಶಾಸಕ ಡಿ.ರವಿಶಂಕರ್, ಎಚ್.ಡಿ ಕೋಟೆ ಶಾಸಕರಾದ ಅನಿಲ್ ಕುಮಾರ್, ವಿಧಾನ ಪರಿಷತ್ ಶಾಸಕ ಡಾ ಯತೀಂದ್ರ ಎಸ್, ಸಿ.ಎನ್.ಮಂಜೇಗೌಡ, ಡಾ ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಸ್ವಾಗತ ಸಮಿತಿಯ ಅಧಿಕಾರಿಗಳು ಮತ್ತಿತರರೊಂದಿಗೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ…
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಂಬಿಬಿಎಸ್ ವಿದ್ಯಾರ್ಥಿ
ತಿಪಟೂರು ತಾಲೂಕಿನ ಮಾವಿನಹಳ್ಳಿ ಗ್ರಾಮವಾಸಿಯಾದ ವಿರೂಪಾಕ್ಷ ಮೂರ್ತಿಯವರ ಮಗನಾದ 19 ವರ್ಷದ ಕೀರ್ತನ. ವಿ ಎಂಬ ಯುವಕ ಕೃಷಿ ಕೊಂಡಕ್ಕೆ ಬಿದ್ದು ಪ್ರಾಣವನ್ನು ಬಿಟ್ಟ ದುರ್ಘಟನೆ ನಡೆದಿದೆ. ಮೃತ ದುರ್ದೈವಿ ಯುವಕ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಇವರು ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿ ತೋಟದ ಮನೆಯಲ್ಲಿ ವಾಸವಾಗಿದ್ದು ಇಂದು ಸಂಜೆ 4:30ರ ವೇಳೆಯಲ್ಲಿ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಹೊನ್ನವಳ್ಳಿ…
ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ರೈತರ ಜಮೀನಿಗೆ ಪರ್ಯಾಯವಾಗಿ ಜಮೀನು ಗುರುತಿಸಿದ ತಾಲೂಕು ಆಡಳಿತ
ಗುಬ್ಬಿ ಸುದ್ದಿ ಗುಬ್ಬಿ ತಾಲೂಕಿನ ಎಚ್ ಎ ಎಲ್ ಘಟಕಕ್ಕೆ ತೆಗೆದುಕೊಂಡ ರೈತರ ಜಮೀನಿಗೆ ಪರ್ಯಾಯವಾಗಿ ರೈತರಿಗೆ ಸರ್ಕಾರದ ವತಿಯಿಂದ ಮರು ಮಂಜೂರು ಮಾಡಿ ಹದ್ದು ಬಸ್ತ್ ಮಾಡಿ ಜಮೀನನ್ನು ಗುರ್ತಿಸಿ ಕೊಡಲು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ ತಾಲೂಕು ಆಡಳಿತ ಇಂದು ಪೊಲೀಸ್ ಬಂದಬಸ್ತ್ ಮೂಲಕ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ ಬಿ. ನೇತೃತ್ವದಲ್ಲಿ ಡಿ ವೈ ಎಸ್ಪಿ ಶೇಖರ್ ಸಮ್ಮುಖದಲ್ಲಿ ಜಾಗವನ್ನು ಗುರ್ತಿಸಿಕೊಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಬಿದರೆಹಳ್ಳ…
ಧರ್ಮಸ್ಥಳ ಸಂಘಕ್ಕೆ 4500ಕೋಟಿ ವಿತರಣೆ-ಎಸ್.ಬಿ.ಐ.ನಿರ್ದೇಶಕ ಕೆ.ಎನ್.ವಾದಿರಾಜ
ತುಮಕೂರು: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಎಸ್.ಬಿ.ಐ.ತುಮಕೂರು ಜಿಲ್ಲೆಯಲ್ಲಿ ಸುಮಾರು 4500ಕೋಟಿ ಸಾಲವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲಕ ನೀಡಿದ್ದೇವೆ,ಕೇವಲ ಮಹಿಳೆಯರೇ ಇರುವ ಈ ಸಂಘದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಧರ್ಮಸ್ಥಳ ಸಂಘವು ಆಯ್ಕೆ ಮಾಡಿ 1 ಲಕ್ಷದಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ,ಈ ಸಾಲಕ್ಕೆ ಧರ್ಮಸ್ಥಳದ ಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರು ಜಾಮೀನು ನೀಡಿದ್ದಾರೆ ಎಂದು ಎಸ್.ಬಿ.ಐ ಬ್ಯಾಂಕಿನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಕೆ.ಎನ್.ವಾದಿರಾಜ ರವರು ಹೇಳಿದರು. ಅವರು…
80ರ ದಶಕದ ಹೋರಾಟ ಮರೆತು, ಮನುವಾದಿಗಳ ಜೊತೆ ಕೈಜೋಡಿಸಿದ್ದೇವೆ : ಡಾ. ನಾಗಣ್ಣ ಆತಂಕ.
ತುಮಕೂರು : 80ರ ದಶಕದ ಹೋರಾಟಗಳನ್ನ ಮರೆತು ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳಿಗೆ ವಿರುದ್ಧವಾಗಿರುವ ಮನುವಾದಿಗಳ ಜೊತೆ ಕೈಜೋಡಿಸಿರುವುದು ಬೇಸರ ಹಾಗೂ ಭಯ ಆಗ್ತಿರುವ ಸಂಗತಿಯಾಗಿದೆ ಎಂದು ಗೃಹ ಸಚಿವರ ಕರ್ತವ್ಯ ವಿಶೇಷಾಧಿಕಾರಿ ಡಾ. ನಾಗಣ್ಣ ಆತಂಕ ವ್ಯಕ್ತಪಡಿಸಿದರು. ನಗರದ ರವೀಂದ್ರ ಕಲಾಗ್ಯಾಲರಿಯಲ್ಲಿ ಅರುಣೋದಯ ಸಹಕಾರ ಸಂಘ ಆಯೋಜನೆ ಮಾಡಿದ್ದಂತಹ 5ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. 80ರ ದಶಕದಲ್ಲಿ ಅನ್ಯಾಯ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ದೊಡ್ಡ ಹೋರಾಟ…
ಪವಾಗಡ ತಾಲೂಕಿನ ವೈ ಎನ್ ಹೊಸಕೋಟೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೃದಯ ವಿದ್ರಾವಕ ಘಟನೆ ಪಾವಗಡ:-ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ಮೃತಪಟ್ಟಿರುವ ವೃದ್ಧನ ಮೃತದೇಹವನ್ನು ತಮ್ಮೂರಿಗೆ ದ್ವಿಚಕ್ರ ವಾಹನದಲ್ಲಿ ತಮ್ಮ ಮಕ್ಕಳು ತೆಗೆದುಕೊಂಡು ಹೋದ ಹೃದಯವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಜರುಗಿದೆ ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡಗಲ್ ಹೊನ್ನೂರಪ್ಪ ಎನ್ನುವ 80 ವರ್ಷದ ವೃದ್ಧ …
ಮಾನವ ಸರಪಳಿ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿ – ಜಿ. ಪರಮೇಶ್ವರ
ತುಮಕೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಪ್ರಜಾ ಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ ನಿರ್ಮಿಸಲಾಗಿದ್ದ 90 ಕಿ.ಮೀ. ಉದ್ದದ ಮಾನವ ಸರಪಳಿಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ತಿಳಿಸಿದರು. ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಯಶಸ್ವಿಗೆ ಪೂರ್ವಭಾವಿ ಸಭೆ
ಗುಬ್ಬಿ ಸುದ್ದಿ ಸೆ.15 ರ ಭಾನುವಾರದಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದ ಹಿನ್ನೆಲೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ್ ಆರತಿ ಬಿ. ಮಾತನಾಡಿ ಪ್ರಜಾ ಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭದ್ರ ಬುನಾದಿ ಮೇಲೆ ನಿಂತಿದೆ. ಈ ಭದ್ರ ಬುನಾದಿ ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಲಾರದು. ಆದ್ದರಿಂದ ಸಮಾನತೆ, ಸ್ವಾಂತ್ರಂತ್ರ್ಯ ಭ್ರಾತೃತ್ವದ ಆದರ್ಶಗಳು…
ಸಾಲದ ಬಡ್ಡಿಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ವ್ಯಕ್ತಿಯ ಬಂಧನ
ದಿನಾಂಕ:-05/09/2024 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ಸಿ.ಐ.ಟಿ ಕಾಲೇಜಿನ ಮುಂಭಾಗವಿರುವ ಕೇಕ್ ಹೌಸ್ ನಲ್ಲಿ ಬಸವರಾಜು ಬಿನ್ ನಂಜೇಗೌಡ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು. ನಂತರ ಮೃತ ಬಸವರಾಜು ರವರ ಮೊಬೈಲ್ ನ್ನು ಪರಿಶೀಲಿಸಲಾಗಿ ಆತ್ಮಹತ್ಯೆಗೆ ಕಾರಣ ಹೇರೂರು ಗ್ರಾಮದ ವಾಸಿಯಾದ ನಾಗರಾಜು @ ಬಡ್ಡಿ ನಾಗ ಈತನು ತಾನು ಕೊಟ್ಟ ಸಾಲಕ್ಕಾಗಿ ಬಸವರಾಜು ರವರಿಂದ ಚೆಕ್ ಗಳನ್ನು ಪಡೆದುಕೊಂಡಿದ್ದು, ಚೆಕ್ ಗಳನ್ನು ವಾಪಸ್ ಕೊಡುವಂತೆ ಕೇಳಿದಾಗ ಬಸವರಾಜು ರವರನ್ನು ಬೆದರಿಸಿ ಆತ್ಮಹತ್ಯೆ…