
ಜಿಲ್ಲಾ ಸುದ್ದಿಗಳು
ಎರಡನೇ ಬಾರಿಗೆ ಲೋಕಾಯುಕ್ತರಿಗೆ ಬಲಿಯಾದ ಕಂದಾಯ ನಿರೀಕ್ಷಕ
ಗುಬ್ಬಿ ಸುದ್ದಿ ಸಿ ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ ಎಸ್ ಪುರ ನಾಡ ಕಚೇರಿಯಲ್ಲಿ ರೈತ ನಾಗರಾಜ್ ಬಳಿ 10ಸಾವಿರ ಹಣವನ್ನು ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರಾಪ್ ಮಾಡಲಾಗಿದೆ. 2023 ರಲ್ಲಿ ತುಮಕೂರು ಟೂಡದಲ್ಲಿ ಕಂದಾಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದ್ದ ಅಧಿಕಾರಿ ಇಂದು ತಾಲೂಕಿನ ಸಿ ಎಸ್ ಪುರ ನಾಡ ಕಚೇರಿಯಲ್ಲಿ ಗದ್ದೆಹಳ್ಳಿ ರೈತ ನಾಗರಾಜ್ ಅವರ ಬಳಿ 10 ಸಾವಿರ ಹಣವನ್ನು…
ಕಾಂಗ್ರೇಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ ಹಾಲನೂರು ಲೇಪಾಕ್ಷ್ ರಘು ಕುಮಾರ್ ಆರೋಪ
ತುಮಕೂರು : ಕಾಂಗ್ರೆಸ್ ಪಕ್ಷವು ನಮ್ಮ ಭಾರತ ದೇಶದಲ್ಲಿ ಅತ್ಯಂತ ಪುರಾತನ ಪಕ್ಷವಾಗಿದ್ದು ಅದಕ್ಕೇ ತನ್ನದೇ ಆದಂತಹ ಸಿದ್ಧಾಂತ, ಶಿಸ್ತು, ಸಾಮಾಜಿಕ ಕಳಕಳಿ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವಂತಹ ಪಕ್ಷವಾಗಿದೆ ಅದನ್ನು ಇತ್ತೀಚೆಗೆ ಹಾಳು ಮಾಡುವಂತಹ ಕಾರ್ಯ ನಡೆಯುತ್ತಿರುವುದು ನಮಗೆ ಬೇಸರ ತಂದಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಘು ಕುಮಾರ್‌ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್‌ರವರ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ…
ಸಾಂಕ್ರಾಮಿಕ ರೋಗ ಹರಡಲು ಸಾಕ್ಷಿಯಾಗುವುದೇ ? ಸರಕಾರಿ ಬಸ್ ನಿಲ್ದಾಣ
ತಿಪಟೂರು ತಾಲೂಕಿನ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ಮಳೆಗಾಲ ಬಂತೆಂದರೆ, ಸುದ್ದಿ ಪತ್ರಿಕೆಗಳ ಮತ್ತು ನ್ಯೂಸ್ ಚಾನಲ್ ಗಳ ಬಾಯಿಗೆ ತುತ್ತಾಗುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನವೀಕರಣಗೊಳಿಸಲಾಗಿರುವ ತಿಪಟೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕೆಲವೊಂದಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಅರಸೀಕೆರೆ,ಚನ್ನರಾಯಪಟ್ಟಣ, ತುರುವೇಕೆರೆ,ಹುಳಿಯಾರು ಹಾಸನ ಹೀಗೆ ಹಲವಾರು ನಗರ ಪ್ರದೇಶದ ಜನ,ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ತಿಪಟೂರು…
ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತೋತ್ಸವ ಹಾಗೂ ಹುಟ್ಟುಹಬ್ಬ ಆಚರಣೆ
ತಿಪಟೂರು: ಬಸವ ಜಯಂತಿ ಅಂಗವಾಗಿ,ತಿಪಟೂರು ತಾಲೂಕು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಬಿ.ಟಿ. ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಇವರ,ಸೇವಾರ್ಥದಲ್ಲಿ ಕ ಲಾಕೃತಿ (ರಿ,) ತಿಪಟೂರು ಇವರ ವತಿಯಿಂದ ನಿತ್ಯ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ತಿಪಟೂರು ನಗರದ ಕೆ.ಆರ್. ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮ ಮತ್ತು ಕೋಟೆಯ ಶ್ರೀ ಶಾರದಾಂಬ ಹಿರಿಯರ ಮನೆ (ವೃದ್ಧಾಶ್ರಮಕ್ಕೆ) ಊಟದ ವ್ಯವಸ್ಥೆ ಮಾಡಿ,ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ವಿಶೇಷವಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಗ್ರಾಮೀಣ ಭಾಗದ ಬಡ ಜನತೆಗೆ ಅನುಕೂಲ ಪಿ ಎಸ್ ಐ ಶಿವಕುಮಾರ್
ಗ್ರಾಮಾಂತರದ ಭಾಗದ ಜನರಿಗೆ ಇಂತಹ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಸಿ ಎಸ್ ಪುರ ಪೊಲೀಸ್ ಠಾಣೆಯ ಪಿ. ಎಸ್ ಐ ಶಿವಕುಮಾರ್ ತಿಳಿಸಿದರು. ಗುಬ್ಬಿ ತಾಲೂಕಿನ ಸಿ ಎಸ್ ಪುರ ಗ್ರಾಮದಲ್ಲಿ ಚಾಲುಕ್ಯ ಆಸ್ಪತ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಾಲುಕ್ಯ ಆಸ್ಪತ್ರೆಯು ಇದುವರೆಗೂ ನೂರಾರು ಉಚಿತ ಆರೋಗ್ಯ…
ಎಸ್.ಎಸ್.ಎಲ್.ಸಿ. ಪರೀಕ್ಷೆ: ಸೇಂಟ್ ಮೇರಿಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ
ತುರುವೇಕೆರೆ: ತಾಲ್ಲೂಕಿನ ದೊಡ್ಡೇನಹಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 100 ರಷ್ಟು ಪಲಿತಾಂಶ ಪಡೆದಿದೆ ಎಂದು ಶಾಲೆಯ ನೂತನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎಂ.ಎಸ್. ಗಂಗಾಧರ ದೇವರಮನೆ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಹೊಸ ತೀರ್ಮಾನ ಕೈಗೊಂಡಿದ್ದು, ಪರೀಕ್ಷಾ ಫಲಿತಾಂಶ ಎಲ್ಲರ ಗಮನ ಸೆಳೆದಿತ್ತು. ಮೊದಲ ಬಾರಿ ಸಿಸಿ ಕ್ಯಾಮೆರಾ ಕಣ್ಣಿನ ಕಣ್ಗಾವಲಿನಲ್ಲಿ ಪರೀಕ್ಷೆ…
ಗುಬ್ಬಿ ಬ್ಲಾಕ್ ಕಾಂಗ್ರೇಸ್ ನ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನರಸಿಂಹಮೂರ್ತಿ.ಎ ನೇಮಕ
ಗುಬ್ಬಿ : ತಾಲ್ಲೂಕು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನರಸಿಂಹಮೂರ್ತಿ.ಎ ರವರನ್ನು ಗುಬ್ಬಿ ಬ್ಲಾಕ್ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಪಟ್ಟಣದ ನಾಯಕ ಸಮುದಾಯದವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹಮೂರ್ತಿ ಯವರು ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವರಾದ ಎಸ್. ಆರ್ ಶ್ರೀನಿವಾಸ್ ರವರು ಸಂಘಟನಾ ಶಕ್ತಿಯನ್ನು ಗುರುತಿಸಿ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಅಗತ್ಯವಿರುವ ಸೌಕರ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವೆ ಎಂದ ಅವರು ಮುಂದಿನ…
ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗುಬ್ಬಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಗುಡುಗು ,ಮಿಂಚು ,ಗಾಳಿಯಿಂದ ಕೂಡಿದ ಹದವಾದ ಮಳೆ ಬಿದ್ದಿರುವುದು ರೈತರಲ್ಲಿ ಹರ್ಷವನ್ನು ಉಂಟುಮಾಡಿದೆ. ಮುಂಗಾರು ಪ್ರಾರಂಭವಾಗಿ ಹಲವಾರು ತಿಂಗಳುಗಳಿಂದ ಮಳೆಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ತಾಲೂಕಿನಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು ರೈತರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೂ ಕಷ್ಟ ಎದುರಾಗಿತ್ತು. ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ಬೀಸಿದ ಮಳೆ ಗಾಳಿಯಿಂದಾಗಿ…
ಸರ್ಕಾರದ ಸುತ್ತೋಲೆಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಲೋಕೇಶ್ ತಾಳಿಕಟ್ಟೆ
ತುಮಕೂರು : ಇತ್ತೀಚಿಗೆ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಯಾಕೆಂದರೆ ಮೆಡಿಕಲ್ ಸೀಟ್ ಪಡೆಯಲು ನೀಟ್ ಪರೀಕ್ಷೆ ಸಹ ಅತ್ಯವಶ್ಯಕವಾಗಿದ್ದು ಯಾವ ವಿದ್ಯಾರ್ಥಿ ಸಿಇಟಿ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳದೇ ಏಕಾಏಕಿ ನೀಟ್ ಪರೀಕ್ಷೆಯನ್ನು ಎದುರಿಸಿರುತ್ತಾರೋ ಅವರಿಗೆ ಮೆಡಿಕಲ್ ಸೀಟ್ ಹಂಚಿಕೆಯನ್ನು ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ, ಇದರಿಂದ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆಂದು ರೂಪ್ಸಾ ಅಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಲೋಕೇಶ್…
ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರ
ಗುಬ್ಬಿ ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರಕ್ಕೆ ಪ್ರಗತಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಹಾಗೂ ಸಂಗೀತಗಾರ್ತಿ ಮತ್ತು ಮಕ್ಕಳ ತಜ್ಞೆ ಡಾ. ಶ್ರಾವ್ಯ ರಾವ್ ಚಾಲನೆ ನೀಡಿದರು. ಖಾಸಗಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಮಾತನಾಡಿ ನಮ್ಮ ಊರಿನಲ್ಲಿಯೇ ನಮ್ಮ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರುವ ಪ್ರಯತ್ನಕ್ಕೆ ಬೇಸಿಗೆ ಶಿಬಿರ ಮೂಲಕ ಸದಾವಕಾಶವನ್ನು ಮಾಡಿಕೊಟ್ಟಿರುವುದು…