
ಜಿಲ್ಲಾ ಸುದ್ದಿಗಳು
ಪೋಷಕರೇ ಮಕ್ಕಳ ಜವಾಬ್ದಾರಿ ಯಾರ ಹೊಣೆ
ಸಾರ್ವಜನಿಕರೇ ಹಾಗೂ ಪೋಷಕರೇ ತಮ್ಮ ಮಕ್ಕಳಿಗೆ ಶಾಲಾ ಕಾಲೇಜು ಗಳಿಗೆ ಕಳುಹಿಸುವಾಗ ಎಚ್ಚರವಹಿಸಬೇಕಿದೆ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನೋಡಿದಾಗ , ಪೋಷಕರು ತಮ್ಮ ಮಕ್ಕಳಿಗೆ ಶಾಲಾ ಕಾಲೇಜು ಗಳಿಗೆ ಕಳುಹಿಸಲು ಆತಂಕ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ಅಭದ್ರತೆ ಕಾಡುತ್ತಿದೆ. ಇದಕ್ಕೆ ಕಾರಣ ಯಾರು ? ಪೋಲಿಸರ ವೈಫಲ್ಯವೇ ? ಆಡಳಿತ ಸರ್ಕಾರದ ವೈಫಲ್ಯವೇ ? ಪೋಷಕರ ವೈಫಲ್ಯವೇ ? ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮುಖ್ಯಸ್ಥರ ಬೇಜವಾಬ್ದಾರಿತನವೇ ?…
ಪೂಜ್ಯ ವೀರೇಂದ್ರ ಹೆಗ್ಗಡೆಯವರಿಂದ ರೂ. 50,000/- ಮೊತ್ತದ ಪ್ರಸಾದ ರೂಪದ ಡಿಡಿ ಮಂಜೂರಾತಿ
ಗುಬ್ಬಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಪ್ಪ ವಲಯದ ಕೋಣೆ ಮಾದೇನಹಳ್ಳಿ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀ ಆದಿಶಕ್ತಿ ಮಾರಮ್ಮ ದೇವಾಲಯ ಜೇಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ರೂ. 50,000/- ಮೊತ್ತದ ಪ್ರಸಾದ ರೂಪದ ಡಿಡಿ ಮಂಜೂರಾತಿ ನೀಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರಾಜೇಶ್. ಎಸ್ ರವರು ದೇವಾಲಯ ಸಮಿತಿಯ ಪದಾಧಿಕಾರಿಗಳಿಗೆ ಡಿಡಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಪಾತಯ್ಯ, ಹಾಗೂ ಎಲ್ಲ…
ಜ್ಞಾನ ವಿಕಾಸ ಸಂಯೋಜಕರಿಗೆ ಕ್ರೀಯಾ ಯೋಜನೆ ಸಭೆ
ಗುಬ್ಬಿ : ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ 1991-1992ರಲ್ಲಿ ಪ್ರಾರಂಭವಾಗಿದ್ದು ಈ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ತಿಳಿಸಿದರು. ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ತಾಲೂಕಿನ ಜ್ಞಾನ ವಿಕಾಸ ಸಂಯೋಜಕರಿಗೆ ಕ್ರೀಯಾ ಯೋಜನೆ ಸಭೆ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜ್ಞಾನ ವಿಕಾಸ ಸಂಯೋಜಕೀಯರಿಗೆ ತಮ್ಮ ತಮ್ಮ…
ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗುಬ್ಬಿ ಸುದ್ದಿ 2024-25 ನೇ ಸಾಲಿಗೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿನ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿ ಗೆ ಪ್ರವೇಶ ಕಲ್ಪಿಸಲು ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಮೇ 09 ರಿಂದ ಮೇ 21 ರ ವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ತುಮಕೂರು ಜಿಲ್ಲೆ ಇವರ ಕಚೇರಿಗೆ (*ವಿದ್ಯಾರ್ಥಿಯ ಆಧಾರ್ ಕಾರ್ಡ್, ವಿದ್ಯಾರ್ಥಿಯ ಜಾತಿ ಮತ್ತು…
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಟೆಸ್ಟ್ -2024: ಡಾ.ಎಂ.ಆರ್.ಹುಲಿನಾಯ್ಕರ್
ತುಮಕೂರು: ಉತ್ತಮ ಇಂಜಿನಿಯರಿಂಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿಂದ ಸ್ಕಾಲರ್ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಅತ್ಯುತ್ತಮವಾದ ಶೈಕ್ಷಣಿಕ ಅನುಭವದ ಅರ್ಪಣಾ ಮನೋಭಾವದ ವಿದ್ಯಾರ್ಹತೆಯ ಉಪನ್ಯಾಸಕರ ತಂಡವು ಸಂಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಬೋಧನಾ ವಿಧಾನಗಳ ಮೂಲಕ ತರಗತಿಗಳನ್ನು ನಡೆಸಿ ಉತ್ತಮ ಫಲಿತಾಂಶ ಮತ್ತು ಉದ್ಯೋಗ ಲಭ್ಯತೆಗೆ ಹುರಿದುಂಬಿಸಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ “ಸ್ಕಿಲ್ ಲ್ಯಾಬ್ ತರಬೇತಿ”ಗೆಂದು ವಿಶೇಷ ಅನುಮತಿ ಹೊಂದಿರುವ ವಿದ್ಯಾಲಯವು ಪ್ರತಿ ಸೆಮಿಸ್ಟರ್ನಲ್ಲಿ ಸ್ಕಿಲ್ ಲ್ಯಾಬ್ ತರಬೇತಿ…
ಪ್ರತಿ ೨೦ ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್ಗಳ ಸಂಚಾರ ಶುಭ ಕಲ್ಯಾಣ್ ಸೂಚನೆ:
ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಬಸ್ ನಿಲ್ದಾಣದಿಂದ ಗುಬ್ಬಿ ಗೇಟ್ ಮಾರ್ಗವಾಗಿ ರಾಷ್ಟೀಯ ಹೆದ್ದಾರಿ ಮೂಲಕ ಶಿರಾಗೇಟ್ವರೆಗೂ ಪ್ರತಿ ೨೦ ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್ಗಳ ವ್ಯವಸ್ಥೆಯನ್ನು ಇಂದಿನಿಂದ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ತುಮಕೂರು ನಗರದ ರಾಷ್ಟೀಯ ಹೆದ್ದಾರಿ-೪ರಲ್ಲಿ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಕಾಮಗಾರಿ ಪ್ರಗತಿ ಕುರಿತ…
ಎತ್ತಿನಹೊಳೆ ಯೋಜನೆ : ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ
ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ, ತಿಪಟೂರು ತಾಲ್ಲೂಕು ರಜತಾದ್ರಿಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇದುವರೆಗೂ ಪೂರ್ಣಗೊಂಡಿಲ್ಲ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ,…
ಪ್ರಾಣವನ್ನು ಬಿಟ್ಟೆವು ನೀರು ಮಾತ್ರ ಬಿಡುವುದಿಲ್ಲ : ಶಾಸಕ ಎಂ ಟಿ ಕೃಷ್ಣಪ್ಪ.
ಗುಬ್ಬಿ ತಾಲೂಕು ಡಿ ರಾಂಪುರ ಮಜುರೆ ಸುಂಕಾಪುರ ಗ್ರಾಮದ ಬಳಿ ನೆಡೆಯುತ್ತಿರುವ ಹೇಮಾವತಿ ಲಿಂಕ್ ಕ್ಯಾನಲ್ ಕಾಮಗಾರಿಯನ್ನು ಸ್ಥಗಿತಗೋಳಿ ನಮ್ಮ ನೀರು ನಮಗೆ ಉಳಿಸಿ ಎಂದು ನೆಡೆಯುತ್ತಿರುವ ಬೃಹತ್ ರೈತರ ಪ್ರತಿಭಟನೆಯಲ್ಲಿ ತುರುವೆಕೇರೆ ಶಾಸಕ ಎಂ ಟಿ ಕೃಷ್ಣಪ್ಫ ಮಾತನಾಡಿ ನಮ್ಮ ನೀರು ನಮ್ಮ ಹಕ್ಕು ನಮ್ಮ ಪಾಲನ್ನು ಕೇಳುವ ಅಧಿಕಾರ ನಮಗೆ ಇದೆ ಅದರೆ ನಮ್ಮ ರೈತರ ಅನುಮತಿ ಇಲ್ಲದೆ ಮಾಹಿತಿ ನೀಡದೆ ರೈತರ ಜಮೀನಿನಲ್ಲಿ ಹೇಮವತಿ ನೀರನ್ನು ಎಕ್ಸ್ಪ್ರೆಸ್ ಲಿಂಕ್ ಕ್ಯಾನಾಲ್ ಮೂಲಕ ಬೇರೆ…
ಚಿನ್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷರಾಗಿ ಎ,ವಿಜಯ ಅವಿರೋದ ಆಯ್ಕೆ*
ಕೊರಟಗೆರೆ :- ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನೂತನ ಅಧ್ಯಕ್ಷರನ್ನಾಗಿ ತಾಲೂಕಿನ ದಂಡಾಧಿಕಾರಿ ಮಂಜುನಾಥ್ ರವರು ಚುನಾವಣಾ ವೀಕ್ಷಕರಾಗಿ ಚುನಾವಣೆ ನೆಡೆಸಿದರು. ಚುನಾವಣೆಯಲ್ಲಿ ಓಟ್ಟು 14 ಸದಸ್ಯರ ಪೈಕಿ ತಿಮ್ಮಸಂದ್ರ ಗ್ರಾಮದ ಪಂಚಾಯ್ತಿ ಸದಸ್ಯರಾದ ಎ.ವಿಜಯ ರವರು ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ರು. ಇವರನ್ನು ಬಿಟ್ಟು ಯಾರೂ ಕೂಡ ನಾಮಪತ್ರವನ್ನು ಸಲ್ಲಿಸದೆ ಇರುವುದರಿಂದ. ತಿಮ್ಮಸಂದ್ರ ಗ್ರಾಮದ ಎ. ವಿಜಯ ರವರನ್ನು ತಾಲೂಕಿನ ದಂಡಾಧಿಕಾರಿ ಮಂಜುನಾಥ್…
ಕೆರೆ ಹೂಳು ತೆಗೆಯಲು ಮಾಹಿತಿ ಪತ್ರ ಕಡ್ಡಾಯ. ಸಿ ಇ ಓ ಜಿ ಪ್ರಭು
ತುಮಕೂರು: ರೈತರು ತಮ್ಮ ಜಮೀನುಗಳಿಗೆ ಕೆರೆಯಿಂದ ಮಣ್ಣು ತೆಗೆಯುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಕಡ್ಡಾಯವಾಗಿ ಮಾಹಿತಿ ಪತ್ರವನ್ನು ಸಲ್ಲಿಸಿರಬೇಕು. ಮಾಹಿತಿ ಪತ್ರ ಸಲ್ಲಿಸಿದವರಿಗೆ ಮಾತ್ರ ಕೆರೆ ಮಣ್ಣು ತೆಗೆಯಲು ಅನುಮತಿ ನೀಡಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧ ಕೆರೆಗಳ ಹೂಳು ತೆಗೆಯುವ ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಎಲ್ಲ ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್…