
ಜಿಲ್ಲಾ ಸುದ್ದಿಗಳು
ಕೊಲೆ ಪ್ರಕರಣದ ಆರೋಪಿ ಬಂಧನ
ದಿನಾಂಕ:03.05.2024 ರಂದು ಸಂಜೆ 4:30 ರಿಂದ 5:00 ಗಂಟೆ ಸಮಯದಲ್ಲಿ ಕೊಟ್ಟನಹಳ್ಳಿ ಗ್ರಾಮದ ತನ್ನ ವಾಸದ ಮನೆಯಲ್ಲಿ ಇದ್ದ ಸಿದ್ದನಂಜಮ್ಮ ರವರನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿ. ಅವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ:116/2024, ಕಲಂ: 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. ಸದರಿ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿಯನ್ನು ಪತ್ತೆ…
ಮೈಕ್ರೋ ಫೈನಾನ್ಸ್ ಹಾಗೂ ಅನಧಿಕೃತ ಕೆರೆಯ ಮಣ್ಣಿನ ಬಗ್ಗೆ ಸಭೆ
ಗುಬ್ಬಿ ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಅನಧಿಕೃತ ಕೆರೆಯ ಮಣ್ಣಿನ ಬಗ್ಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ವಾರದ ಹಿಂದೆ ಮೈಕ್ರೋ ಫೈನಾನ್ಸ್ ಕಂಪನಿಗಳ ಬಳಿ ಸಾಲ ಪಡೆದು ತೀರಿಸಲು ಸಾಧ್ಯವಾಗದೆ ಇರುವ ಕಾರಣ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕು ಗಳಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳ ಸಭೆಯನ್ನು ಕರೆದು RBI ನ ಯಾವ ನಿಯನದಡಿ ಫೈನಾನ್ಸ್ ಗಳು ಕರ್ತವ್ಯ ನಿರ್ವಹಿಸುತ್ತಿದೆ, ಕಂಪನಿ ಸಿಬ್ಬಂದಿಯೂ…
ಬರಗಾಲದ ಹಿನ್ನೆಲೆ, ಸಾಲ ಮರುಪಾವತಿಗೆ ಒತ್ತಡ ಹೇರಿದರೆ ಅಗತ್ಯ ಕ್ರಮ: ತಹಸೀಲ್ದಾರ್
ತುರುವೇಕೆರೆ: ಬರಗಾಲದ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್, ಮೈಕ್ರೋಫೈನಾನ್ಸ್ ಗಳು ರೈತರಿಂದ ಸಾಲಮರುಪಾವತಿಗೆ ಮುಂದಿನ ಎರಡು ತಿಂಗಳ ಕಾಲ ಒತ್ತಡ ಹೇರಬಾರದು, ಆ ರೀತಿ ಒತ್ತಡ ಹೇರಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ರೇಣುಕುಮಾರ್ ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್, ಮೈಕ್ರೋಫೈನಾನ್ಸ್ ಗಳು ಸಾಲ ಮರುಪಾವತಿ ಮಾಡಲು ಒತ್ತಾಯ ಹೇರದಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಿಪಟೂರಿನಲ್ಲಿ ನಡೆದ ಘಟನೆ…
ಹಲಸಿನಕಾಯಿ ಕೀಳಲು ಮರ ಹತ್ತಿದ ಕೂಲಿ ಕಾರ್ಮಿಕ ಕಾಲು ಜಾರಿ ಕೆಳಗೆ ಬಿದ್ದು ಸಾವು
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಸಂದ್ರ ಗ್ರಾಮದ ಸಮೀಪ ತೋಟದಲ್ಲಿ ನೆಡೆದ ದುರ್ಘಟನೆ. ಹಲಸಿನಕಾಯಿ ಕೀಳಲು ಹೇಳಿದ ತೋಟದ ಮಾಲಿಕ ಬಸವರಾಜು ಕೂಲಿ ಕಾರ್ಮಿಕ ಸತ್ತಿದ್ದಾನೆ ಎಂದ ಕೂಡಲೇ ಸ್ಥಳದಿಂದ ಪರಾರಿಯಾದ ಎಂದು ಗ್ರಾಮಸ್ಥರ ಆರೋಪ ಪ್ರತಿದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರು ಬಲಂತವಾಗಿ ಕರೆದುಕೊಂಡು ಹೋಗಿ ಮಧ್ಯಪಾನ ಮಾಡಿಸಿ ತನ್ನ ತೋಟದ ಕೆಲಸ ಮಾಡಿಸಿಕೊಳ್ಳುತ್ತಿದ್ದ ತೋಟದ ಮಾಲೀಕ ಮರ ಹತ್ತಲು ಬರದಿದ್ದವನಿಗೆ ಮಧ್ಯಪಾನ ಮಾಡಿಸಿ ಮರ ಅತ್ತಲು ಹೇಳಿರುವ ತೋಟದ ಮಾಲೀಕ ಎಂದು ಕುಟುಂಬಸ್ಥರ…
ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು. ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಜೋಗಿಹಳ್ಳಿ ಗ್ರಾಮಸ್ಥರು ಇಂದು…
ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಮಳೆರಾಯ
ರಾಜ್ಯದ ಜನತೆ ಒಂದೆಡೆ ಬಿಸಿಲಿನ ಬೇಗೆಗೆ ಬೆಂದು ಬಸವಳಿದು ಬಿಸಿಲಿನ ಬೇಗೆಯನ್ನು ತಾಳಲಾರದೆ ದಂಡ ತಂಡ ಕೂಲ್ ಕೂಲ್ ಗೆ ಮೊರೆ ಹೋದ ನಿದರ್ಶನಗಳನ್ನು ನಾವು ಇತ್ತೀಚೆಗೆ ಕಾಣುತ್ತಿದ್ದೆವು ರೈತರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಮೋಡದತ್ತ ಮುಖ ಮಾಡಿ ವರುಣನ ಆಗಮನವನ್ನು ಕಾಯುತ್ತಿದ್ದ ದೃಶ್ಯಗಳನ್ನು ನಾವು ಕಂಡಿದ್ದೆವು ಇತ್ತೀಚಿನ ದಿನಗಳಲ್ಲಿ ರೈತನು ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆದಾರಿ ಹಿಡಿದ ನಿದರ್ಶನಗಳನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ ಮೂಕ ಪ್ರಾಣಿಗಳ…
ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲ-ಜಿಲ್ಲಾಧಿಕಾರಿ ಸೂಚನೆ
ತುಮಕೂರು: ಬರಪರಿಸ್ಥಿತಿಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳವರೆಗೂ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿ, ಖಾಸಗಿ ಲೇವಾದೇವಿಗಾರರು ಹಾಗೂ ಸಾಲದಾತರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ರಾತ್ರಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ವಿಡಿಯೋಕಾರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು ಮಳೆ ಬಾರದೆ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಿಂದ ಹೊರಬರಲು ಮಾಡಿರುವ ಸಾಲ…
ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ.
ಗುಬ್ಬಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದ ಹಿನ್ನೆಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಹಾಗೂ ಚೇಳೂರು ಹೋಬಳಿಯ ರೈತರಿಗೆ ಚೇಳೂರು ಎಪಿಎಂಸಿ ಗೋಡನ್ ನಲ್ಲಿ ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ. ಈಗಾಗಲೇ ಗುಬ್ಬಿ ತಾಲೂಕಿನಲ್ಲಿ ಬರ ನಿರ್ವಹಣೆ ಹಿನ್ನೆಲೆ ಕುಡಿಯುವ ನೀರಿಗೆ ತಾಲೂಕು ಆಡಳಿತ ಮೊದಲ ಆದ್ಯತೆಯನ್ನು ನೀಡಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇದೀಗ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಭವಿಸದ ರೀತಿಯಲ್ಲಿ ಮೇವಿನ ಬ್ಯಾಂಕ್ ತೆರೆದು ರೈತರ…
ಜೆ ಡಿ ಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಡಿ ದೇವೇಗೌಡರ ಕುಟುಂಕ್ಕೆ ಕಳಂಕ ತರಲು ಹಾಗೂ ರಾಜ್ಯದ ಹೆಣ್ಣುಮಕ್ಕಳ ಮಾನವನ್ನು ಹರಾಜು ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಘಟಕದಿಂದ ಪ್ರತಿಭಟನೆ
ತುಮಕೂರು : ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ತುಮಕೂರು ನಗರದ ಜೆ ಡಿ ಎಸ್ ಪಕ್ಷದ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಮೆರವಣಿಗೆಯನ್ನು ನಡೆಸಿದ ಜಿಲ್ಲಾ ಜೆ ಡಿ ಎಸ್ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು, ಜಿಲ್ಲೆಯ ಎಲ್ಲಾ ಜೆ ಡಿ ಎಸ್ ಕಾರ್ಯಕರ್ತರು ಸೇರಿ ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಮತ್ತು ಅಶ್ಲೀಲ ವಿಡಿಯೋ ಚಿತ್ರಣಗಳ ಮೂಲಕ ಹೆಣ್ಣು ಮಕ್ಕಳ ಮಾನವನ್ನು ಹರಾಜು ಹಾಕುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೖಗೋಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ…
ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯ ಹೆಸರಿನಲ್ಲಿ ಸರ್ಕಾರ ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ನಮ್ಮ ನೀರು-ನಮ್ಮ ಹಕ್ಕು ಹೋರಾಟ ಸಮತಿ ಆರೋಪ:
ತುಮಕೂರು : ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯಲ್ಲಿ 35.4 ಕಿ.ಮೀ ಉದ್ದದ ಪೈಪ್‍ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಪಕ್ಷತೀತವಾಗಿ ಹಮ್ಮಿಕೊಳ್ಳಲಾಗುವುದು ಎಂದು ನಮ್ಮ ನೀರು-ನಮ್ಮ ಹಕ್ಕು ಹೋರಾಟ ಸಮತಿ ತಿಳಿಸಿತು.