ಜಿಲ್ಲಾ ಸುದ್ದಿಗಳು
ವರ್ತುಲ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶುಭ ಕಲ್ಯಾಣ್ ಸೂಚನೆ
ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ಶಿರಾ ಗೇಟ್-ಗುಬ್ಬಿ ಗೇಟ್‍ವರೆಗೂ ಸಂಪರ್ಕಿಸುವ ವರ್ತುಲ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ವರ್ತುಲ ರಸ್ತೆ ಕಾಮಗಾರಿ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ನಗರದ ಎಸ್ ಮಾಲ್ ಬಳಿ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕೋಡಿ ಬಸವಣ್ಣ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಶಿರಾಗೇಟ್-ಗುಬ್ಬಿಗೇಟ್ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಯಾವುದೇ ಅಪಘಾತಗಳು…
ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ಕೂಡಲೇ ನೂತನ ಬೋರ್ವೆಲ್ ಕೊರೆಸಿದ ಗುಬ್ಬಿ ತಾಲೂಕು ಆಡಳಿತ
ಗುಬ್ಬಿ ತಾಲೊಕು ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರೆಹಳ್ಳ ಕಾವಲ್ ನಲ್ಲಿ ಕಳೆದ 01 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಕೊಳವೆ ಬಾವಿಯಲ್ಲಿ ನೀರು ಬರದೇ ಇದ್ದ ವೇಳೆ ರೀ ಬೋರ್ವೆಲ್ ಕೊರೆಸಿದರೂ ಸಹ ನೀರು ಬರುತ್ತಿರಲಿಲ್ಲ. ಕೊರೆದಿದ್ದ ಕೊಳವೆ ಬಾವಿಯಲ್ಲಿ ಯಂತ್ರೋಪಕರಣಗಳು ಕಳಚ ಬಿದ್ದ ಕಾರಣ ಕುಡಿಯುವ ನೀರಿಗೆ ಬಿದರೆಹಳ್ಳ…
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆ
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆ ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ‘ಹೊರರೋಗಿಗಳ ವಿಸ್ತರಣಾ ಘಟಕದಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್‍ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆಯನ್ನು ಇದೇ ಮೇ…
ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ :
ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ : ತುಮಕೂರು: ನಗರದಲ್ಲಿ ನಿರ್ಮಾಣವಾಗಿರುವ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಮೇ ಮಾಹೆ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶುಕ್ರವಾರ ಸಂಜೆ ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕೆ…
ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು
ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಭಾಗ್ಯಮ್ಮ(50) w/o ಲೇಟ್.ರಾಮಚಂದ್ರಯ್ಯ ಎಂಬ ರೈತ ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು,ಮೃತ ಮಹಿಳೆ ತಿಪಟೂರಿನ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ಸಾಲ ಪಡೆದು ಸಾಲ ಹಿಂದಿರುಗಿಸಲಾಗದೆ, ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು,ಗಂಡ ನಿಧನರಾಗಿದ್ದು,ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದಲ್ಲಿ…
ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆ
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆಯು ಮೇ ತಿಂಗಳ 5 ಮತ್ತು 6 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದಿನಾಂಕ 5 ರಂದು ಬೆಳಿಗ್ಗೆ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆಯಲ್ಲಿ ತಂದು ಊರಮುಂದೆ ಮುಳ್ಳಿನ ಹಾಸಿಗೆಯ ಮೇಲೆ ಕುಣಿಸಲಾಗುವುದು. ಅದೇ ದಿನ ಸಂಜೆ ಪಕ್ಕದ ಗ್ರಾಮ ಮತ್ತಿಘಟ್ಟ ದಲ್ಲಿರುವ ಮೂಲ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದ ನಂತರ ರಾತ್ರಿ ಮೆರವಣಿಗೆ ಮಾಡಲಾಗುವುದು. ದಿನಾಂಕ 6 ರಂದು…
*ಅನುದಾನಿತ ಪಿ.ಯು. ಕಾಲೇಜು ಉಪನ್ಯಾಸಕರ ವೇತನ ಬಿಡುಗಡೆಗೆ ಲೋಕೇಶ್ ತಾಳಿಕಟ್ಟೆ ಆಗ್ರಹ*
ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು. ಅವರು ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದು ತರಗತಿಗೆ ಕನಿಷ್ಠ 40 ವಿದ್ಯಾರ್ಥಿಗಳಿರಬೇಕೆಂಬ ನಿಯಮವನ್ನು ಮಾಡಿ 40ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳನ್ನೊಳಗೊಂಡ ಕಾಲೇಜುಗಳ ಮಾನ್ಯತೆ ನವೀಕರಣ ತಿರಸ್ಕರಿಸಿ ನೋಟಿಸ್ ಜಾರಿ ಮಾಡಿದೆ….
ಶ್ರೀ ಸತ್ಯ ಕೀರ್ತಿ ಕಲಾಸಂಘದಿಂದ ಕುರುಕ್ಷೇತ್ರ ನಾಟಕ ಆಯೋಜನೆ
ಶ್ರೀ ಸತ್ಯ ಕೀರ್ತಿ ಕಲಾಸಂಘದಿಂದ ಕುರುಕ್ಷೇತ್ರ ನಾಟಕ ಆಯೋಜನೆ ಕಲೆಯ ತವರೂರು ಕಲ್ಪತರನಾಡು ಎಂದು ಪ್ರಖ್ಯಾತಿ ಪಡೆದಿರುವ ನಡೆದಾಡುವ ದೇವರು ಪರಮಪೂಜ್ಯಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಕ್ಷೇತ್ರವಾದ ಹಾಗೂ ರಂಗಭೂಮಿಯ ತವರೂರಾದ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದಿನಾಂಕ 5.05.2024ರ ಭಾನುವಾರದಂದು ಶ್ರೀ ಸತ್ಯ ಕೀರ್ತಿ ಕಲಾ ಸಂಘದ ವತಿಯಿಂದ ಹಾರ್ಮೋನಿಯಂ ಮಾಸ್ಟರ್ ಶ್ರೀ ರುದ್ರೇಶ್ ಹೈ.ವಿ ರವರ ನಿರ್ದೇಶನದಲ್ಲಿ ಕುರುಕ್ಷೇತ್ರ ಅಥವಾ ಭಗವದ್ಗೀತೆ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಿರಿಯ ಹಾಗೂ ಕಿರಿಯ…
ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿಗ್ರಾಮಸ್ಥರ ಪ್ರತಿಭಟನೆ
ಗುಬ್ಬಿ, : ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಬುಧವಾರ ತಡರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು. ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರೆಹಳ್ಳ ಕಾವಲ್ ನಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ ಎಂದು ರೀ ಬೋರ್ವೆಲ್ ಮಾಡಿಸಲಾಯಿತು. ಆದರೆ ಕೊಳವೆಬಾವಿಯಲ್ಲಿ ಬೋರ್ ವೆಲ್ ನ ಯಂತ್ರೋಪಕರಣಗಳು ಕಳಚಿ ಬಿದ್ದ ಪರಿಣಾಮ ನೂತನ ಯಂತ್ರೋಪಕರಣಗಳನ್ನು ಬಿಡಲು ಆಗದೆ ಕುಡಿಯುವ ನೀರಿಗೆ ವಿಪರಿತ ಆಹಾಕಾರ ಉಂಟಾದ…
Karnataka ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮದನಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಮಾರಮ್ಮದೇವಿಯರ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀ ಮಾರಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಶ್ರೀ ಮಾರಮ್ಮದೇವಿಯರ ರಥೋತ್ಸವ ನೇರವೇರಿತು. ಮಂಗಳವಾರ ರಾತ್ರಿ ಶ್ರೀ ಮಾರಮ್ಮ ದೇವಿಯ ಉತ್ಸವ ಮೆರವಣಿಗೆ, ಪೂಜಾರರ ಕುಣಿತ, ಕತ್ತಿ ವರಸೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಮಾರಮ್ಮ ದೇವಿಯ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಂಗಸ್ವಾಮಯ್ಯ ಮಾತನಾಡಿ ಮದನಘಟ್ಟ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಾರಮ್ಮ ದೇವಿಗೆ ಸುಮಾರು 700 ವರ್ಷಗಳ ಇತಿಹಾಸವಿದೆ. ಶಿವಮೊಗ್ಗ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಪ್ರತಿ ವರ್ಷವೂ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದರು. ದೇವಸ್ಥಾನದ ಅರ್ಚಕ ಕಿರಣ್ ಮಾತನಾಡಿ ಪ್ರತಿ ವರ್ಷವೂ ಶ್ರೀ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ರಥೋತ್ಸವ ಸೇರಿದಂತೆ ಶ್ರೀ ಮಾರಮ್ಮ ದೇವಿಯ ಉತ್ಸವ ಹಾಗೂ ಬುಧವಾರ ರಾತ್ರಿ ಪೆಟ್ಟಿಗೆ ಮಾರಮ್ಮನ ಉತ್ಸವ ನಡೆಯಲಿದೆ ಎಂದರು. ಒಟ್ಟಾರೆಯಾಗಿ ಶ್ರೀ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮದನಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಮಾರಮ್ಮದೇವಿಯರ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀ ಮಾರಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಶ್ರೀ ಮಾರಮ್ಮದೇವಿಯರ ರಥೋತ್ಸವ ನೇರವೇರಿತು. ಮಂಗಳವಾರ ರಾತ್ರಿ ಶ್ರೀ ಮಾರಮ್ಮ ದೇವಿಯ ಉತ್ಸವ ಮೆರವಣಿಗೆ, ಪೂಜಾರರ ಕುಣಿತ, ಕತ್ತಿ ವರಸೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ…