ಜಿಲ್ಲಾ ಸುದ್ದಿಗಳು
ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲ-ಜಿಲ್ಲಾಧಿಕಾರಿ ಸೂಚನೆ
ತುಮಕೂರು: ಬರಪರಿಸ್ಥಿತಿಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳವರೆಗೂ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿ, ಖಾಸಗಿ ಲೇವಾದೇವಿಗಾರರು ಹಾಗೂ ಸಾಲದಾತರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ರಾತ್ರಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ವಿಡಿಯೋಕಾರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು ಮಳೆ ಬಾರದೆ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಿಂದ ಹೊರಬರಲು ಮಾಡಿರುವ ಸಾಲ…
ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ.
ಗುಬ್ಬಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದ ಹಿನ್ನೆಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಹಾಗೂ ಚೇಳೂರು ಹೋಬಳಿಯ ರೈತರಿಗೆ ಚೇಳೂರು ಎಪಿಎಂಸಿ ಗೋಡನ್ ನಲ್ಲಿ ಜಾನುವಾರುಗಳಿಗೆ ಮೇವನ್ನು ವಿತರಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ. ಈಗಾಗಲೇ ಗುಬ್ಬಿ ತಾಲೂಕಿನಲ್ಲಿ ಬರ ನಿರ್ವಹಣೆ ಹಿನ್ನೆಲೆ ಕುಡಿಯುವ ನೀರಿಗೆ ತಾಲೂಕು ಆಡಳಿತ ಮೊದಲ ಆದ್ಯತೆಯನ್ನು ನೀಡಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇದೀಗ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಭವಿಸದ ರೀತಿಯಲ್ಲಿ ಮೇವಿನ ಬ್ಯಾಂಕ್ ತೆರೆದು ರೈತರ…
ಜೆ ಡಿ ಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಡಿ ದೇವೇಗೌಡರ ಕುಟುಂಕ್ಕೆ ಕಳಂಕ ತರಲು ಹಾಗೂ ರಾಜ್ಯದ ಹೆಣ್ಣುಮಕ್ಕಳ ಮಾನವನ್ನು ಹರಾಜು ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಘಟಕದಿಂದ ಪ್ರತಿಭಟನೆ
ತುಮಕೂರು : ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ತುಮಕೂರು ನಗರದ ಜೆ ಡಿ ಎಸ್ ಪಕ್ಷದ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಮೆರವಣಿಗೆಯನ್ನು ನಡೆಸಿದ ಜಿಲ್ಲಾ ಜೆ ಡಿ ಎಸ್ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು, ಜಿಲ್ಲೆಯ ಎಲ್ಲಾ ಜೆ ಡಿ ಎಸ್ ಕಾರ್ಯಕರ್ತರು ಸೇರಿ ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಮತ್ತು ಅಶ್ಲೀಲ ವಿಡಿಯೋ ಚಿತ್ರಣಗಳ ಮೂಲಕ ಹೆಣ್ಣು ಮಕ್ಕಳ ಮಾನವನ್ನು ಹರಾಜು ಹಾಕುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೖಗೋಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ…
ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯ ಹೆಸರಿನಲ್ಲಿ ಸರ್ಕಾರ ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ನಮ್ಮ ನೀರು-ನಮ್ಮ ಹಕ್ಕು ಹೋರಾಟ ಸಮತಿ ಆರೋಪ:
ತುಮಕೂರು : ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯಲ್ಲಿ 35.4 ಕಿ.ಮೀ ಉದ್ದದ ಪೈಪ್‍ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಪಕ್ಷತೀತವಾಗಿ ಹಮ್ಮಿಕೊಳ್ಳಲಾಗುವುದು ಎಂದು ನಮ್ಮ ನೀರು-ನಮ್ಮ ಹಕ್ಕು ಹೋರಾಟ ಸಮತಿ ತಿಳಿಸಿತು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಲೋಕೇಶ್ ತಾಳಿಕಟ್ಟೆ ಸ್ಪರ್ದೆ ಎಂಆರ್ ಭೂತರಾಜು
ತುಮಕೂರು:ರಾಜ್ಯ ಶಿಕ್ಷಣ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ನಿವಾರಣೆಯ ನಿಟ್ಟಿನಲ್ಲಿ ಶಿಕ್ಷಕರಾಗಿ, ಶಿಕ್ಷಕರಿಗೋಸ್ಕರವೇ ಹಗಲಿರುಳು ದುಡಿಯುತ್ತಿರುವ ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷರಾಗಿರುವ ಲೋಕೇಶ್ ತಾಳಿಕಟ್ಟೆ ಅವರು ಜೂನ್ ೦೩ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತುಮಕೂರು ಜಿಲ್ಲಾ ಖಾಸಗೀ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್.ಭೂತರಾಜು ತಿಳಿಸಿದ್ದಾರೆ. ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿ,ಕಳೆದ ೧೮ ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರು,ಅದರಲ್ಲಿಯೂ ಖಾಸಗಿ ಶಾಲೆಗಳ…
ಚೇಳೂರು ಎಪಿಎಂಸಿ ಅವರಣದಲ್ಲಿ ಮೇವು ಬ್ಯಾಂಕ್ ಅನ್ನು ಪ್ರಾರಂಭಿಸಲಾಗುವುದು ತಹಶೀಲ್ದಾರ್ ಆರತಿ ಬಿ :
ಗುಬ್ಬಿ ತಾಲೂಕು ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರದ ಘೋಷಣೆ ಹಿನ್ನೆಲೆ ನಾಳೆ ಬೆಳಗ್ಗೆ ಚೇಳೂರು ಎಪಿಎಂಸಿ ಅವಣದಲ್ಲಿ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯಲು ತಾಲೂಕು ಆಡಳಿತ ಸಜ್ಜಾಗಿದೆ ಎಂದು ತಹಶೀಲ್ದಾರ್ ಆರತಿ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಗುಬ್ಬಿ ತಾಲೂಕು ಅನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ ಹಿನ್ನೆಲೆ ತಾಲೂಕಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಚೇಳೂರು ಗ್ರಾಮದ ಎಪಿಎಂಸಿ ಅವರಣದಲ್ಲಿ ಮೇವು ಬ್ಯಾಂಕ್ ಅನ್ನು ತೆರೆಯಲು…
ಸಾಲದ ಬಾದೆಗೆ ಹೆದರಿ ಮನನೊಂದ ರೈತ ಆತ್ಮಹತ್ಯೆ ಶರಣು…
ಸಾಲದ ಬಾದೆಗೆ ಹೆದರಿ ಮನನೊಂದ ರೈತ ಆತ್ಮಹತ್ಯೆ ಶರಣು… ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ38 ವರ್ಷ ನೇಣಿಗೆ ಶರಣಾಗಿರುವ ರೈತ ಹಲವು ಫೈನಾನ್ಸ್ ಗಳಲ್ಲಿ 12 ಲಕ್ಷಕ್ಕೂ ಅಧಿಕ ಸಾಲ ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ಸಾಲ ಮಾಡಿದ್ದ ರೈತ ರಾಜಣ್ಣ ಜಮೀನಿನಲ್ಲಿ 5ಕ್ಕೂ ಹೆಚ್ಚು ಬೋರ್ವೆಲ್ ಕೊರೆಸಿದರು ನೀರು ಸಿಗದ ಕಾರಣ ಆತ್ಮಹತ್ಯೆ ತನ್ನ ಮನೆಯ ಮೇಲು ಸಾಲ ಮಾಡಿ ಬೋರ್ ವೆಲ್ ಕೊರೆಸಿದ್ದ ರೈತ ಅಷ್ಟೇ…
ತಿಪಟೂರು ಕೋಡಿ ಸರ್ಕಲ್ ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕರಿಂದ ಪ್ರತಿಭಟನೆ
ತಿಪಟೂರು ಕೋಡಿ ಸರ್ಕಲ್ ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಒತ್ತಿಯಿಸಿ ಪ್ರತಿಭಟನೆ ಅಪಾರ ಸಂಖ್ಯೆಯಲ್ಲಿ ಬಸವೇಶ್ವರ ಅಭಿಮಾನಿಗಳು ಬಸವೇಶ್ವರ ಪ್ರತಿಮೆ ತೆರವುಗೊಳಿಸಿದಂತೆ ಪ್ರತಿಭಟನೆ ಬಸವಣ್ಣನವರ ಪುತ್ತಳಿಯನ್ನು ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತ ಮತ್ತು ನಗರಸಭಾ ಸಿಬ್ಬಂದಿ ಪುತ್ತಳಿಕೆ ತೆರವುಗೊಳಿಸದಂತೆ ವೀರಶೈವ ಲಿಂಗಾಯತ ಸಮುದಾಯದ ಒತ್ತಾಯ ಸಾವಿರಾರು ಸಂಖ್ಯೆಯಲ್ಲಿ ತಿಪಟೂರಿನ ಕೂಡಿ ಸರ್ಕಲ್ ಗೆ ಆಗಮಿಸುತ್ತಿರುವ ಲಿಂಗಾಯತ ಸಮುದಾಯ. ಬಹಳಷ್ಟು ವಿವಾದಾತ್ಮಕ ಜಾಗವಾಗಿ ಪರಿವರ್ತನೆಗೊಂಡಿರುವ ತಿಪಟೂರಿನ ಕೋಡಿ ಸರ್ಕಲ್. ಪ್ರಾಣ ಬೇಕಾದರೂ ಬಿಟ್ಟೆವು ಪ್ರತಿಮೆ ತೆರವುಗೊಳಿಸಲು ಬಿಡುವುದಿಲ್ಲ…
ತೊರೆಹಳ್ಳಿ ಗ್ರಾಮದಲ್ಲಿ ರಾಮಪ್ಪನ ಮುಳ್ಳಿನ ಹಾಸಿಗೆ ಜಾತ್ರ ಮಹೋತ್ಸವ
ಗುಬ್ಬಿ:ತಾಲ್ಲೂಕಿನ ಕಸಬಾ ಹೋಬಳಿ ತೊರೆಹಳ್ಳಿಯಲ್ಲಿ ಭಾನುವಾರ ರಾಮಪ್ಪದೇವರ ಜಾತ್ರೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿ ಯಾಗಿ ನೆರವೇರಿತು. ಸಂಪ್ರದಾಯದಂತೆ ದೇವಾಲಯದ ಅರ್ಚಕರು ರಾಮಪ್ಪಸ್ವಾಮಿಯ ಮುಖವಾಡವನ್ನು ಹೊತ್ತು,ಅರೇವಾದ್ಯ,ಚಿಟ್ಟೆಮೇಳ, ಕೊಂಬು,ಕಹಳೆಗಳೊಂದಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಅಪಾರ ಭಕ್ತಾದಿಗಳೊಂದಿಗೆ ಊರ ಮುಂದೆ ಜಾಲಿ ಮುಳ್ಳನ್ನು ಸುರಿದು ಸಿದ್ಧಪಡಿಸಿದ್ದ ಮುಳ್ಳಿನ ಹಾಸಿಗೆಯ ಬಳಿ ಬಂದು ಕುಣಿಸಲಾಯಿತು.ಮುಳ್ಳಿನ ಹಾಸಿಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮಪ್ಪಸ್ವಾಮಿಯ ಮುಖವಾಡ ವನ್ನು ಹೊತ್ತಿದ್ದ ಅರ್ಚಕರು ಕುಣಿದು ಕೊಪ್ಪಳಿಸುತ್ತಾ ಮುಳ್ಳಿನ ಹಾಸಿಗೆಯ ಮೇಲೆ ಚಾಟಿ ಬೀಸುತ್ತಾ ಬೀಳುವ…
ಬೇವಿ ಲೇಪಿತ ಯೂರಿಯಾ ರಸಗೊಬ್ಬರ ಅಕ್ರಮ ಸಾಗಾಣಿಕೆ ಜಪ್ತಿ :
ದಿನಾಂಕ : 04.04.2024ರ ಬೆಳಿಗ್ಗೆ.6.10ರ ಸಮಯದಲ್ಲಿ ಲಾರಿ ಸಂಖ್ಯೆ: KA010AL4437ರಲ್ಲಿ ಅನುಮಾನಸ್ಪದ ಸರಕು ಸಾಗಿಸುತ್ತಿರುವಾಗ ಶ್ರೀ.T.R.ಕೃಷ್ಣಕುಮಾರ್ , ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು ಇವರ ನಿರ್ದೇಶನದ ಮೇರಿಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ತುಮಕೂರಿನ ಶ್ರೀ.ನಾಗರಾಜ.C.ಗಂಗನಗೌಡರ್ & ಅವರ ತಂಡ (ನಾಗರಾಜು.S., CTO., & ಹರ್ಷಿತ.CTI.,) ರಂಗಾಪುರ-ಅಂತರಸಹಳ್ಳಿ ಸರ್ವೀಸ್ ರಸ್ತೆ ಹತ್ತಿರ ತಡೆ ಹಿಡಿದು ದಾಖಲಾತಿ ಪರಿಶೀಲಿಸಿದಾಗ ದಾಖಲಾತಿ ಸರಕಾದ Calcium Carbonate ಮತ್ತು ವಾಸ್ತವ ಸರಕಾದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು…