ಕೆಎನ್‍ ರಾಜಣ್ಣನವರನ್ನು ಮತ್ತೆ ಮಂತ್ರಿ ಸ್ಥಾನಕ್ಕೆ ನೆಮಿಸುವಂತೆ ಆಗ್ರಹಿಸಿ ಸಹಸ್ರಾರು ಬೆಂಬಲಿಗರ ಬೃಹತ್ ಪ್ರತಿಭಟನೆ

ತುಮಕೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಆಗಮಿಸಿದ್ದ ಸಹಸ್ರಾರು ಅಭಿಮಾನಿಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಕ್ಷದ ಹೈಕಮಾಂಡ್‍ಗೆ ತಪ್ಪು ಮಾಹಿತಿ ನೀಡಿದ ಕಾಣದ ಕೈಗಳ ಪಿತೂರಿಯಿಂದ ಕೆ.ಎನ್.ಆರ್ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆ.ಎನ್.ಆರ್, ಆರ್.ಆರ್ ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ…

Read More

ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಸಮ್ಮತಿ

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು ನಾನ್ ಯುಜಿಸಿ ಎನ್ನದೆ, ಮಾನವೀಯತೆ ದೃಷ್ಟಿಯಿಂದ ಎಲ್ಲ ಅತಿಥಿ ಉಪನ್ಯಾಸಕರ ಒಳಿತಿಗಾಗಿ ಒಂದು ಬಾರಿ ಸೇವಾ ಸಕ್ರಮಾತಿಮಾಡಲು ಕಾನೂನು ಸಚಿವಾರದ ಡಾ.ಎಚ್.ಕೆ.ಪಾಟೀಲ್ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಭೆಯಲ್ಲಿ ಚರ್ಚೆಸಲಾಯಿತು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಧರ್ಮವೀರ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ರಾಜ್ಯ ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…

Read More

ಪ್ರೌಢಶಾಲಾ ವಿದ್ಯಾರ್ಥಿಗಳ ಖೋ ಖೋ ಪಂದ್ಯಾವಳಿ ಯಂಗ್ ಚಾಲೆಂಜರ್ಸ್ ಸಂಸ್ಥೆ ಆಯೋಜನೆಯ ಪಂದ್ಯಾವಳಿ

ತುಮಕೂರು: ಯಂಗ್ ಚಾಲೆಂಜರ್ಸ್ ಸಂಸ್ಥೆ ಭಾನುವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಿರಿಯ ಕ್ರೀಡಾಪಟು ದಿ.ಕೆ.ಎಸ್.ಶಂಕರ್ ಸ್ಮರಣಾರ್ಥ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಏರ್ಪಡಿಸಿತ್ತು. ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಬಾಲಕರ 12 ಹಾಗೂ ಬಾಲಕಿಯರ 9 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಕ್ರೀಡೆ ಪ್ರೋತ್ಸಾಹಿಸಲು ಸರ್ಕಾರದ ಉದ್ಯೋಗ ನೇಮಕಾತಿಗಳಲ್ಲಿ ಕ್ರೀಡಾ ಕೋಟಾದ ಪ್ರಮಾಣ ಹೆಚ್ಚು ಮಾಡಬೇಕು. ಶಿಕ್ಷಣದ ಪ್ರಮುಖ…

Read More

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರವರ ಪುಣ್ಯಸ್ಮರಣೆ

ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರವರ ಪುಣ್ಯಸ್ಮರಣೆಯನ್ನು ಪುಷ್ಪನಮನ ಸಲ್ಲಿಸುವುದರ ಮುಖೇನ ಆಚರಿಸಲಾಯಿತು. ಎ.ಪಿ.ಜೆ.ಅಬ್ದುಲ್ ಕಲಾಂರವರ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು ಎನ್.ಕೆ.ನಿಧಿಕುಮಾರ್ ಮಾತನಾಡಿ ಕಲಾಂ ರವರನ್ನು ನಮ್ಮ ದೇಶವು ಮರೆಯದಂತ ಆಣಿಮುತ್ತು ಅವರಾಗಿದ್ದು, ನಮ್ಮ ದೇಶದ ರಕ್ಷಣಾವ್ಯವಸ್ಥೆಗೆ…

Read More

ನಗರದಲ್ಲಿ 39ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ: ಆ.3ರಿಂದ ಮಕ್ಕಳು, ಹಿರಿಯರಿಗೆ ವಿವಿಧ ಸ್ಪರ್ಧೆ ಆಯೋಜನೆ

ತುಮಕೂರು: ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಬರುವ ಆಗಸ್ಟ್ 17ರಂದು ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ 39ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ಆಗಸ್ಟ್ 3ರಿಂದ ವಿವಿಧ ವಯೋಮಾನದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ಜಿ.ಎಸ್.ಬಸವರಾಜು ಹೇಳಿದರು. ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಸಂಸ್ಕøತಿ, ಆಚಾರವಿಚಾರಗಳ ಮಹತ್ವವನ್ನು ಮುಂದಿನ ತಲೆಮಾರಿನವರಿಗೆ ಪರಿಚಯಿಸಿ ಆಸಕ್ತಿ ಮೂಡಿಸಲು ಕಳೆದ 38 ವರ್ಷಗಳಿಂದ ಶ್ರೀ ಕೃಷ್ಣ…

Read More

ಗೃಹ ಸಚಿವ ಡಾ: ಜಿ. ಪರಮೇಶ್ವರ್ ರವರ ಕಾರ್ಯಕ್ರಮದ ಪೂರ್ವಭಾವಿ ಸಭೆ

ಸೋಮಶೇಖರ್ ರವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಕಂಟೇನರ್ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ ಇರಕಸಂದ್ರ ಕಾಲೋನಿಯಲ್ಲಿ 30-07-2025ರಂದು ತಾಲೂಕಿನ ಆದ್ಯಂತ 70 ಶಾಲೆಗಳಲ್ಲಿ ಕಂಟೇನರ್ ಶೌಚಾಲಯವನ್ನು ನಿರ್ಮಾಣ ಮಾಡಿದ್ದು. ಇರಕಸಂದ್ರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಗೃಹ ಸಚಿವರಾದ. ಡಾ: ಜಿ. ಪರಮೇಶ್ವರ್ ರವರು ಉದ್ಘಾಟನೆ ಮಾಡುವವರು ಎಂದು ಪೂರ್ವಭಾವಿ ಸಭೆ ಮಾಡಲಾಗಿತ್ತು. ಮುಖಂಡರಾದ ಸೋಮಶೇಖರ್ ರವರು ಮಾತನಾಡಿ: 30-07-2025ರಂದು…

Read More

ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ನೂತನ ವೆಬ್ ಸೈಟ್ ಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಚಾಲನೆ.

ಗುಬ್ಬಿ ಸುದ್ದಿ ಇತ್ತೀಚಿನ ದಿನ ಮಾನಗಳಲ್ಲಿ ಆನ್ಲೈನ್ ಸೇವೆಗೆ ಮಾರು ಹೋಗಿರುವ ಭಕ್ತರು ತಾವು ಇರುವಲ್ಲಿಯೇ ಎಲ್ಲಾ ಸೇವೆಯ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಹಿನ್ನೆಲೆ ಮುಜರಾಯಿ ಇಲಾಖೆಗೆ ಒಳಪಡುವ ಗುಬ್ಬಿ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ದರ್ಶನ ರಾಜ್ಯ ಹೊರ ರಾಜ್ಯಗಳಲ್ಲಿ ಭಕ್ತ ಸಮೂಹ ಇರುವ ಹಿನ್ನೆಲೆ ಸುಲಭ ಮಾರ್ಗದಲ್ಲಿ ಸೇವೆಗಳ ಸೌಲಭ್ಯಗಳ ಮಾಹಿತಿ ಪಡೆಯಲು ಅವಶ್ಯಕತೆ ಇರುವ ಹಿನ್ನೆಲೆ ನೂತನ ವೆಬ್ ಸೈಟ್ ಕಲ್ಪಿಸುವ ನಿಟ್ಟಿನಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಇಂದು ಆನ್ಲೈನ್…

Read More

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

ತಿಪಟೂರು :*ಸುಭದ್ರ, ಸುಭಿಕ್ಷ, ಸುಶಿಕ್ಷ, ಸುರಕ್ಷವಾದ ರಾಷ್ಟ್ರ ನಮ್ಮದಾಗಲು ಶ್ರಮಿಸುತ್ತಿರುವ ಗುರುಗಳು, ವೈದ್ಯರು, ಪತ್ರಕರ್ತರು, ಸೈನಿಕರೆಲ್ಲರನ್ನೂ ಸ್ಮರಿಸುವ ವಿಶೇಷ ದಿನಗಳನ್ನೊಳಗೊಂಡಿರುವ ಈ ಮಾಸದಲ್ಲಿ ಅನ್ನದಾತನಾದ ರೈತನನ್ನೂ ಸ್ಮರಿಸುತ್ತಾ ಈ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸೋಣ, ಹುತಾತ್ಮ ಯೋಧರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ. ಹಾಗೂ ಇಂದಿನ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಪ್ರಯತ್ನ ಮಾಡೋಣ: ಲತಾಮಣಿ ಎಂ ಕೆ ತುರುವೇಕೆರೆ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಾಲ್ಲೂಕು ಘಟಕ ತಿಪಟೂರು.* ಜುಲೈ ತಿಂಗಳಲ್ಲಿ ಬರುವ ಪತ್ರಿಕೋದ್ಯಮ ದಿನಾಚರಣೆ, ಗುರು ಪೂರ್ಣಿಮಾ,…

Read More

ಖಜಾನೆ ತುಂಬಲು ಸರ್ಕಾರದಿಂದ ಜನರ ಶೋಷಣೆ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಚಿವ ಸೋಮಣ್ಣ ಖಂಡನೆ

ತುಮಕೂರು: ರಾಜ್ಯದ ಖಜಾನೆ ಖಾಲಿಯಾಗಿದೆ, ಹಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ, ಯಾವ ರೀತಿಯಲ್ಲಿ ಜನರನ್ನು ಶೋಷಣೆ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ತೆರಿಗೆ ಹಣ ವಸೂಲಿ ಮಾಡುತ್ತಾ ಬಡ ವ್ಯಾಪಾರಿಗಳನ್ನು ಶೋಷಣೆ ಮಾಡುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದರು. ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳ 63ನೇ ಜನ್ಮದಿನದ ಅಂಗವಾಗಿ ಸಚಿವ ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ ಅವರು ಮಂಗಳವಾರ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ…

Read More

ಕುಣಿಗಲ್ ರಸ್ತೆ ಸೇತುವೆಗೆ ತಡೆಗೋಡೆ ನಿರ್ಮಿಸಿ ಅಪಾಯ ತಡೆಯಲು ಆಯುಕ್ತರಿಗೆ ಇಕ್ಬಲ್ ಅಹ್ಮದ್ ಮನವಿ

  ತುಮಕೂರು: ನಗರದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಮೇಲೆ ಎರಡೂ ಬದಿ ತಡೆಗೋಡೆಗಳಿಲ್ಲದೆ ಪ್ರಾಣಾಪಾಯ ಎದುರಾಗುವ ಸಾಧ್ಯತೆಗಳಿವೆ. ಕೂಡಲೇ ತಡೆಗೋಡೆಗಳನ್ನು ನಿರ್ಮಾಣ ಮಾಡಿ ನಾಗರೀಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರಿಗೆ ಮನವಿ ಮಾಡಿದ್ದಾರೆ. ಹಾಳಾಗಿದ್ದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಕೆಳ ರಸ್ತೆಯನ್ನು ಇತ್ತೀಚೆಗೆ ದುರಸ್ಥಿ ಮಾಡಲಾಗಿದೆ. ಆದರೆ ಸೇತುವೆ ಮೇಲ್ಭಾಗ ಎರಡೂ ಬದಿಯಲ್ಲಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ. ಸೇತುವೆ…

Read More
error: Content is protected !!