ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಟೆಸ್ಟ್ -2024: ಡಾ.ಎಂ.ಆರ್.ಹುಲಿನಾಯ್ಕರ್

ತುಮಕೂರು: ಉತ್ತಮ ಇಂಜಿನಿಯರಿಂಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿಂದ ಸ್ಕಾಲರ್‌ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಅತ್ಯುತ್ತಮವಾದ ಶೈಕ್ಷಣಿಕ ಅನುಭವದ ಅರ್ಪಣಾ ಮನೋಭಾವದ ವಿದ್ಯಾರ್ಹತೆಯ ಉಪನ್ಯಾಸಕರ ತಂಡವು ಸಂಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಬೋಧನಾ ವಿಧಾನಗಳ ಮೂಲಕ ತರಗತಿಗಳನ್ನು ನಡೆಸಿ ಉತ್ತಮ ಫಲಿತಾಂಶ ಮತ್ತು ಉದ್ಯೋಗ ಲಭ್ಯತೆಗೆ ಹುರಿದುಂಬಿಸಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ “ಸ್ಕಿಲ್ ಲ್ಯಾಬ್ ತರಬೇತಿ”ಗೆಂದು ವಿಶೇಷ ಅನುಮತಿ ಹೊಂದಿರುವ ವಿದ್ಯಾಲಯವು ಪ್ರತಿ ಸೆಮಿಸ್ಟರ್‌ನಲ್ಲಿ ಸ್ಕಿಲ್ ಲ್ಯಾಬ್ ತರಬೇತಿ…

Read More

ಪ್ರತಿ ೨೦ ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‌ಗಳ ಸಂಚಾರ ಶುಭ ಕಲ್ಯಾಣ್ ಸೂಚನೆ:

ತುಮಕೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಬಸ್ ನಿಲ್ದಾಣದಿಂದ ಗುಬ್ಬಿ ಗೇಟ್ ಮಾರ್ಗವಾಗಿ ರಾಷ್ಟೀಯ ಹೆದ್ದಾರಿ ಮೂಲಕ ಶಿರಾಗೇಟ್‌ವರೆಗೂ ಪ್ರತಿ ೨೦ ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಇಂದಿನಿಂದ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ತುಮಕೂರು ನಗರದ ರಾಷ್ಟೀಯ ಹೆದ್ದಾರಿ-೪ರಲ್ಲಿ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಕಾಮಗಾರಿ ಪ್ರಗತಿ ಕುರಿತ…

Read More

ಎತ್ತಿನಹೊಳೆ ಯೋಜನೆ : ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಇಂಜಿನಿಯರ್‍ ಗಳಿಗೆ ಸೂಚನೆ ನೀಡಿದರು. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ, ತಿಪಟೂರು ತಾಲ್ಲೂಕು ರಜತಾದ್ರಿಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇದುವರೆಗೂ ಪೂರ್ಣಗೊಂಡಿಲ್ಲ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ,…

Read More

ಪ್ರಾಣವನ್ನು ಬಿಟ್ಟೆವು ನೀರು ಮಾತ್ರ ಬಿಡುವುದಿಲ್ಲ : ಶಾಸಕ ಎಂ ಟಿ ಕೃಷ್ಣಪ್ಪ.

ಗುಬ್ಬಿ ತಾಲೂಕು ಡಿ ರಾಂಪುರ ಮಜುರೆ ಸುಂಕಾಪುರ ಗ್ರಾಮದ ಬಳಿ ನೆಡೆಯುತ್ತಿರುವ ಹೇಮಾವತಿ ಲಿಂಕ್ ಕ್ಯಾನಲ್ ಕಾಮಗಾರಿಯನ್ನು ಸ್ಥಗಿತಗೋಳಿ ನಮ್ಮ ನೀರು ನಮಗೆ ಉಳಿಸಿ ಎಂದು ನೆಡೆಯುತ್ತಿರುವ ಬೃಹತ್ ರೈತರ ಪ್ರತಿಭಟನೆಯಲ್ಲಿ ತುರುವೆಕೇರೆ ಶಾಸಕ ಎಂ ಟಿ ಕೃಷ್ಣಪ್ಫ ಮಾತನಾಡಿ ನಮ್ಮ ನೀರು ನಮ್ಮ ಹಕ್ಕು ನಮ್ಮ ಪಾಲನ್ನು ಕೇಳುವ ಅಧಿಕಾರ ನಮಗೆ ಇದೆ ಅದರೆ ನಮ್ಮ ರೈತರ ಅನುಮತಿ ಇಲ್ಲದೆ ಮಾಹಿತಿ ನೀಡದೆ ರೈತರ ಜಮೀನಿನಲ್ಲಿ ಹೇಮವತಿ ನೀರನ್ನು ಎಕ್ಸ್ಪ್ರೆಸ್ ಲಿಂಕ್ ಕ್ಯಾನಾಲ್ ಮೂಲಕ ಬೇರೆ…

Read More

ಚಿನ್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷರಾಗಿ ಎ,ವಿಜಯ ಅವಿರೋದ ಆಯ್ಕೆ*

ಕೊರಟಗೆರೆ :- ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನೂತನ ಅಧ್ಯಕ್ಷರನ್ನಾಗಿ ತಾಲೂಕಿನ ದಂಡಾಧಿಕಾರಿ ಮಂಜುನಾಥ್ ರವರು ಚುನಾವಣಾ ವೀಕ್ಷಕರಾಗಿ ಚುನಾವಣೆ ನೆಡೆಸಿದರು. ಚುನಾವಣೆಯಲ್ಲಿ ಓಟ್ಟು 14 ಸದಸ್ಯರ ಪೈಕಿ ತಿಮ್ಮಸಂದ್ರ ಗ್ರಾಮದ ಪಂಚಾಯ್ತಿ ಸದಸ್ಯರಾದ ಎ.ವಿಜಯ ರವರು ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ರು. ಇವರನ್ನು ಬಿಟ್ಟು ಯಾರೂ ಕೂಡ ನಾಮಪತ್ರವನ್ನು ಸಲ್ಲಿಸದೆ ಇರುವುದರಿಂದ. ತಿಮ್ಮಸಂದ್ರ ಗ್ರಾಮದ ಎ. ವಿಜಯ ರವರನ್ನು ತಾಲೂಕಿನ ದಂಡಾಧಿಕಾರಿ ಮಂಜುನಾಥ್…

Read More

ಕೆರೆ ಹೂಳು ತೆಗೆಯಲು ಮಾಹಿತಿ ಪತ್ರ ಕಡ್ಡಾಯ. ಸಿ ಇ ಓ ಜಿ ಪ್ರಭು

ತುಮಕೂರು: ರೈತರು ತಮ್ಮ ಜಮೀನುಗಳಿಗೆ ಕೆರೆಯಿಂದ ಮಣ್ಣು ತೆಗೆಯುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಕಡ್ಡಾಯವಾಗಿ ಮಾಹಿತಿ ಪತ್ರವನ್ನು ಸಲ್ಲಿಸಿರಬೇಕು. ಮಾಹಿತಿ ಪತ್ರ ಸಲ್ಲಿಸಿದವರಿಗೆ ಮಾತ್ರ ಕೆರೆ ಮಣ್ಣು ತೆಗೆಯಲು ಅನುಮತಿ ನೀಡಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧ ಕೆರೆಗಳ ಹೂಳು ತೆಗೆಯುವ ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಎಲ್ಲ ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್…

Read More

ಎರಡನೇ ಬಾರಿಗೆ ಲೋಕಾಯುಕ್ತರಿಗೆ ಬಲಿಯಾದ ಕಂದಾಯ ನಿರೀಕ್ಷಕ

ಗುಬ್ಬಿ ಸುದ್ದಿ ಸಿ ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ ಎಸ್ ಪುರ ನಾಡ ಕಚೇರಿಯಲ್ಲಿ ರೈತ ನಾಗರಾಜ್ ಬಳಿ 10ಸಾವಿರ ಹಣವನ್ನು ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರಾಪ್ ಮಾಡಲಾಗಿದೆ. 2023 ರಲ್ಲಿ ತುಮಕೂರು ಟೂಡದಲ್ಲಿ ಕಂದಾಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದ್ದ ಅಧಿಕಾರಿ ಇಂದು ತಾಲೂಕಿನ ಸಿ ಎಸ್ ಪುರ ನಾಡ ಕಚೇರಿಯಲ್ಲಿ ಗದ್ದೆಹಳ್ಳಿ ರೈತ ನಾಗರಾಜ್ ಅವರ ಬಳಿ 10 ಸಾವಿರ ಹಣವನ್ನು…

Read More

ಕಾಂಗ್ರೇಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ ಹಾಲನೂರು ಲೇಪಾಕ್ಷ್ ರಘು ಕುಮಾರ್‌ ಆರೋಪ

ತುಮಕೂರು : ಕಾಂಗ್ರೆಸ್ ಪಕ್ಷವು ನಮ್ಮ ಭಾರತ ದೇಶದಲ್ಲಿ ಅತ್ಯಂತ ಪುರಾತನ ಪಕ್ಷವಾಗಿದ್ದು ಅದಕ್ಕೇ ತನ್ನದೇ ಆದಂತಹ ಸಿದ್ಧಾಂತ, ಶಿಸ್ತು, ಸಾಮಾಜಿಕ ಕಳಕಳಿ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವಂತಹ ಪಕ್ಷವಾಗಿದೆ ಅದನ್ನು ಇತ್ತೀಚೆಗೆ ಹಾಳು ಮಾಡುವಂತಹ ಕಾರ್ಯ ನಡೆಯುತ್ತಿರುವುದು ನಮಗೆ ಬೇಸರ ತಂದಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಘು ಕುಮಾರ್‌ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್‌ರವರ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ…

Read More

ಸಾಂಕ್ರಾಮಿಕ ರೋಗ ಹರಡಲು ಸಾಕ್ಷಿಯಾಗುವುದೇ ? ಸರಕಾರಿ ಬಸ್ ನಿಲ್ದಾಣ

ತಿಪಟೂರು ತಾಲೂಕಿನ ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ಮಳೆಗಾಲ ಬಂತೆಂದರೆ, ಸುದ್ದಿ ಪತ್ರಿಕೆಗಳ ಮತ್ತು ನ್ಯೂಸ್ ಚಾನಲ್ ಗಳ ಬಾಯಿಗೆ ತುತ್ತಾಗುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನವೀಕರಣಗೊಳಿಸಲಾಗಿರುವ ತಿಪಟೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕೆಲವೊಂದಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಅರಸೀಕೆರೆ,ಚನ್ನರಾಯಪಟ್ಟಣ, ತುರುವೇಕೆರೆ,ಹುಳಿಯಾರು ಹಾಸನ ಹೀಗೆ ಹಲವಾರು ನಗರ ಪ್ರದೇಶದ ಜನ,ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ತಿಪಟೂರು…

Read More

ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತೋತ್ಸವ ಹಾಗೂ ಹುಟ್ಟುಹಬ್ಬ ಆಚರಣೆ

ತಿಪಟೂರು: ಬಸವ ಜಯಂತಿ ಅಂಗವಾಗಿ,ತಿಪಟೂರು ತಾಲೂಕು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಬಿ.ಟಿ. ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಇವರ,ಸೇವಾರ್ಥದಲ್ಲಿ ಕ ಲಾಕೃತಿ (ರಿ,) ತಿಪಟೂರು ಇವರ ವತಿಯಿಂದ ನಿತ್ಯ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ತಿಪಟೂರು ನಗರದ ಕೆ.ಆರ್. ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮ ಮತ್ತು ಕೋಟೆಯ ಶ್ರೀ ಶಾರದಾಂಬ ಹಿರಿಯರ ಮನೆ (ವೃದ್ಧಾಶ್ರಮಕ್ಕೆ) ಊಟದ ವ್ಯವಸ್ಥೆ ಮಾಡಿ,ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ವಿಶೇಷವಾಗಿ…

Read More