ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಪೊಲೀಸ್ ಇಲಾಖೆಯ ಪೌರಾಣಿಕ ನಾಟಕ
ತುಮಕೂರು ಜಿಲ್ಲೆ ಹಲವಾರು ಕ್ಷೇತ್ರದಲ್ಲಿ ಹೆಸರು ವಾಸಿಯದ ಜಿಲ್ಲೆ ಅದರಲ್ಲು ರಂಗಭೂಮಿಯ ತವರು ಎಂದು ಪ್ರಖ್ಯಾತವಾಗಿದೆ ವಿಶೇಷವಾಗಿ ತುಮಕೂರಿನ ಪೋಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ರಾತ್ರಿ ಪೋಲೀಸರೇ ಅಭಿನಯಿಸಿದ ಕುರುಕ್ಷೇತ್ರ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಲವಾರು ಒತ್ತಡಗಳ ನಡುವೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಮ್ಮಲ್ಲಿಯೂ ಸಹ ಕಲೆ ಇದೆ ಎಂಬುದನ್ನು ಬಹಳ ಅದ್ಭುತವಾಗಿ ಅಭಿನಯ ಮಾಡುವ ಮೂಲಕ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಿದ್ದು ವಿಶೇಷವಾಗಿತ್ತು. ಈ ನಾಟಕದಲ್ಲಿ ಅಭಿಯಿಸಿದ ತುಮಕೂರು…