ಮಾಧ್ಯಮ ಜ್ಞಾನ ಕುರಿತು ಹೊಸ ಕೋರ್ಸ್ ಸೇರ್ಪಡೆಗೆ ಕ್ರಮ: ಪ್ರೊ.ಎಸ್.ಆರ್.ನಿರಂಜನ ಅಭಿಮತ
ಬೆಂಗಳೂರು: ಇಂದಿನ ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮಾಧ್ಯಮ ಸಾಕ್ಷರತೆ, ಸಂವಹನ ಪ್ರಾಮುಖ್ಯತೆ ಕುರಿತಾದ ನವೀನವಾದ ನಾನಾ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕುರಿತು ಗಂಭೀರವಾಗಿ ಚಿಂತಿಸಲಿದೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ (1973-2023) ಪ್ರಯುಕ್ತ ‘ಮೀಡಿಯಾ ಸ್ಪಿಯರ್- 2024, “ಭಾರತೀಯ ಮಾಧ್ಯಮ ಉದ್ಯಮದ’ ರೂಪಾಂತರ” ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರು…