ಶ್ರೀ ಗುರು ರುದ್ರಮುನಿ ಸ್ವಾಮಿ ದೇವಾಂಗ ಮಠ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಪೂಜ್ಯ ವೀರೇಂದ್ರ ಹೆಗ್ಗಡಿಯವರಿಗೆ ಗ್ರಾಮಸ್ಥರ ಅಭಿನಂದನೆ
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಗುರು ರುದ್ರಮುನಿ ಸ್ವಾಮಿ ದೇವಾಂಗ ಮಠದ ಜೀರ್ಣೋದ್ಧಾರಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ರೂ 2,00,000 ಮೊತ್ತದ ಪ್ರಸಾದ ರೂಪದ ಡಿಡಿ ಮಂಜೂರು ಮಾಡಿದ್ದು, ಗುಬ್ಬಿ ತಾಲೂಕಿನ ಯೋಜನಾಧಿಕಾರಿ ರಾಜೇಶ್ ಎಸ್ ರವರು ದೇವಸ್ಥಾನ ಸಮಿತಿಯ ಪದಾಧಿಕಾರಿಗಳಿಗೆ, ರೂ.200000 ಮೊತ್ತದ ಡಿ ಡಿ ಚೆಕ್ ಅನ್ನು ಹಸ್ತಾಂತರ ಮಾಡಿದರು, ಈ ಸಂದರ್ಭ ಡಿ ಡಿ ವಿತರಣೆ ಮಾಡಿ…