
ಪ್ರಮುಖ ಸುದ್ದಿಗಳು
ರೈತರ ವಿರುದ್ಧ ಹಠಮಾರಿತನ ಮಾಡಿದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಬಿ ವೈ ವಿಜಯೇಂದ್ರ
ಗುಬ್ಬಿ : ಸರಕಾರದ ಹಠ ಮಾರಿತನ ಹಾಗೂ ಅಹಂಕಾರ ದಿಂದ ಅಧಿಕಾರದ ದರ್ಪದಿಂದ ರೈತರ ವಿರುದ್ದ ಸರಕಾರ ಹೋದರೆ ನೀವೇ ಅನುಭವಿಸಬೇಕಾಗುತ್ತದೆ ಎಂದು ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗುಡುಗಿದರು. ಗುಬ್ಬಿ ತಾಲೂಕಿನ ಸುಂಕಾಪುರದ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾಧ್ಯಮದ ಜೊತೆಯಲ್ಲಿ ಮಾತನಾಡಿದ ಅವರು ಇಲ್ಲಿ ನಡೆಯುತ್ತಿರುವಂತಹ ಕಾಮಗಾರಿಯೇ ಅವ್ಯ ಜ್ಞಾನಿಕವಾಗಿದ್ದು ಅದರ ಸ್ಥಿತಿಗತಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ ಯಾರೋ ಒಬ್ಬರಿಗಾಗಿ ತುಮಕೂರು ಜಿಲ್ಲೆಯ ನೀರನ್ನ…
2027ರ ವೇಳೆಗೆ 25,0000 ನವೋದ್ಯಮಗಳು ಆರಂಭದ ಗುರಿ: ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಎಸ್ಎಸ್ಐಟಿಯಲ್ಲಿ‘ಟೆಕ್ನೋಡಿಯ–2025’ ಕಾರ್ಯಕ್ರಮ ಉದ್ಘಾಟನೆ
ತುಮಕೂರು: ಕೃಷಿ, ಆರೋಗ್ಯ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಇಂದು ಇಡೀ ವಿಶ್ವದಾದ್ಯಂತ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಆವಿಷ್ಕಾರವಾಗುತ್ತಿದೆ. ಪ್ರತಿನಿತ್ಯ ತಂತ್ರಜಾÐನ ಗಣನೀಯವಾಗಿ ಬದಲಾಗುತ್ತಿವೆ. ಅದರಂತೆ ಕರ್ನಾಟಕದಲ್ಲೂ ಸಾಕಷ್ಟು ನವೋದ್ಯಮಗಳು ಆರಂಭವಾಗುತ್ತಿದ್ದು 2027ರಲ್ಲಿ ಇಪ್ಪತ್ತೈದುಸಾವಿರ ನವೋದ್ಯಮಗಳು ಆರಂಭವಾಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ತಿಳಿಸಿದರು. ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ(ಜೂನ್-2 & 3) ಆಯೋಜಿಸಲಾಗಿದ್ದ ಎರಡು ದಿನದ ವಿಜ್ನಾನ ಮತ್ತು…
ರೈತರ ಉಗ್ರ ಹೋರಾಟಕ್ಕೆ ಬೆಚ್ಚಿದ ಪೊಲೀಸ್ ಇಲಾಖೆ
ಗುಬ್ಬಿ: ತಾಲ್ಲೂಕಿನ ನಿಟ್ಟೂರು ಬಳಿ ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನಾ ನಿರತ ರೈತರನ್ನು ತಡೆಯುವ ಎಲ್ಲಾ ತಯಾರಿ ನಡೆಸಿದ್ದರು. ಅದರೆ ಅಲ್ಲಲ್ಲೇ ಗುಂಪಾಗಿ ಕಾಣಿಸಿಕೊಂಡ ರೈತರ ಗುಂಪು ನಿಟ್ಟೂರು ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾಗರೋಪಾದಿಯಲ್ಲಿ ಜಮಾಯಿಸ ತೊಡಗಿದರು. ನೂರರ ಸಂಖ್ಯೆ ಸಾವಿರ ಆಗುತ್ತಿದ್ದಂತೆ ರೈತರು ರಸ್ತೆಗಿಳಿಯ ತೊಡಗಿದರು. ರೈತ ಸಂಘದ ಮುಖಂಡರು, ಬಿಜೆಪಿ ಜೆಡಿಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ ತಕ್ಷಣ ಪ್ರತಿಭಟನೆ ತೀವ್ರ ಸ್ವರೂಪ ಕಂಡಿತು. ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆಯಲ್ಲಿ ಕೆನಾಲ್ ಕಾಮಗಾರಿ ನಡೆಯುತ್ತಿರುವ…

ಜಿಲ್ಲಾಧಿಕಾರಿಗಳಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ಮಧುಗಿರಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಪುರಸಭೆ ವ್ಯಾಪ್ತಿ ವಾರ್ಡ್ ನಂಬರ್ 11 ಹಾಗೂ 15ನೇ ವಾರ್ಡಿನಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ವೀಕ್ಷಿಸಿದ ಅವರು, 11ನೇ ವಾರ್ಡಿನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ಯಾವೊಬ್ಬ ಗುತ್ತಿಗೆದಾರರು, ಅಧಿಕಾರಿಗಳೂ ಗಮನಿಸದೇ ಇರುವುದು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ಎದ್ದು ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾಮಗಾರಿ…
ಮಠದ ಮೂಲಕ ಸಮಾಜ ಕಟ್ಟಲು ಬದುಕು ಮುಡಿಪಾಗಿಟ್ಟ ಮಾದಾರಚೆನ್ನಯ್ಯ ಸ್ವಾಮೀಜಿಯವರಿಗೆ ಸಾಮರಸ್ಯ ಪುರಸ್ಕಾರ…
ಡಾ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಯವರು ನಾಡಿನ ಪ್ರಖ್ಯಾತ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಮಠಾಧೀಶರು. ಶಿವಶರಣ ಮಾದಾರಚೆನ್ನಯ್ಯ ವಚನಕಾರರಾಗಿ , ಸಮಾಜ ಸುಧಾರಕರಾಗಿ ದಕ್ಷಿಣ ಭಾರತದ ಹಲವೆಡೆ ಸಂಚರಿಸಿ 12 ನೇ ಶತಮಾನದಲ್ಲಿ ಬಸವೇಶ್ವರ ನೇತೃತ್ವದಲ್ಲಿ ನೆಡೆದ ಸಾಮಾಜಿಕ ಪರಿವರ್ತನೆಯ ಅಂದೋಲನದಲ್ಲಿ ಹೆಗಲುಕೊಟ್ಟವರು. ಎರಡು ದಶಕಗಳ ಹಿಂದೆ ದಕ್ಷಿಣ ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೆಲೆಸಿರುವ ಮಾದಿಗ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿ ತರಲು ಶಿವಶರಣ ಮಾದಾರಚೆನ್ನಯ್ಯ ಗುರುಪೀಠ ಸ್ಥಾಪಿಸಲು ಯೋಚಿಸಲಾಯಿತು. ಈ ಯೋಚನೆಗೆ ಕಾರ್ಯರೂಪ ಕೊಟ್ಟವರು ಚಿತ್ರದುರ್ಗದ ಮುರುಘ…
ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಮಕ್ಕಳು ಹೊರಗುಳಿಯದಂತೆ ಸಮೀಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೂಚನೆ.
ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಮಕ್ಕಳು ಹೊರಗುಳಿಯದಂತೆ ಸಮೀಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಗಣತಿದಾರರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಮೀಕ್ಷೆ ಕುರಿತು ಅಭಿಪ್ರಾಯ ಹಾಗೂ ಸಲಹೆ ಬಗ್ಗೆ ಚರ್ಚಿಸುವ ಸಲುವಾಗಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಪ್ರತಿ ದಿನ ಸರಾಸರಿ 8207 ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದು, ಶೇಕಡಾ 103ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು…
ಗ್ರಾಮ ಆಡಳಿತಾಧಿಕಾರಿಗಳ ಕಾರ್ಯವೈಕರಿಗೆ ಬೇಸತ್ತ ಸಾರ್ವಜನಿಕರು
ತುಮಕೂರು : ತುಮಕೂರು ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ರವರು ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶವನ್ನು ಹೊರ ಹಾಕಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿ ಮಾತನಾಡಿದ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವಂಶವೃಕ್ಷ, ವಿಧವಾವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ, ವಾಸ ಸ್ಥಳ ದೃಢೀಕರಣ…
ಮೇ 18ರಂದು ಖಾತೆದಾರರಿಗೆ ಭೂ ಪರಿಹಾರ ನೀಡಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ
ತುಮಕೂರು: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ತಿಪಟೂರು ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರು ಮೇ 18ರಂದು ಜಂಟಿಯಾಗಿ ಕ್ಯಾಂಪ್ ನಡೆಸಿ ಖಾತೆದಾರರಿಗೆ ಭೂ ಪರಿಹಾರವನ್ನು ಪಾವತಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಗುರುವಾರ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬೆಳ್ಳಾರ, ತಿಮ್ಲಾಪುರ, ಹುಲ್ಲೇನಹಳ್ಳಿ, ಕಲ್ಲಹಳ್ಳಿ, ಡಿಂಕನಹಳ್ಳಿ, ಮೋಟಿಹಳ್ಳಿ ಹಾಗೂ ತಿಮ್ಮನಹಳ್ಳಿ ಗ್ರಾಮಗಳ…
ತಾಂತ್ರಿಕ ದೋಷದಿಂದಾಗಿ ಜಾತಿಗಣತಿ ವಿಳಂಬ ಸಮುದಾಯಕ್ಕೆ ಅನ್ಯಾಯ: ಕಾಲಾವಕಾಶ ಹೆಚ್ಚಿಸಲು ಮುಖಂಡರಿಂದ ಜಿಲ್ಲಾಡಳಿತಕ್ಕೆ ಒತ್ತಾಯ.
ಮಧುಗಿರಿ: ಸರ್ಕಾರ ಮಾಡಿರುವ ಒಳ ಮೀಸಲಾತಿ ವರ್ಗೀಕರಣದ ಮನೆ ಮನೆ ಭೇಟಿ ಗಣತಿ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ ಕಾಟಾಚಾರದ ಜಾತಿ ಗಣತಿಯಾಗಿದೆ ನಿಖರವಾದ ಗಣತಿಯಾಗಿಲ್ಲವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಆರೋಪಿಸಿದ್ದಾರೆ. ಪಟ್ಟಣದ ಪ್ರವಾಸಿಮಂದಿರದಲ್ಲಿ ದಲಿತ ಸಂಘಟನೆ ಹಾಗೂ ಆದಿಜಾಂಭವ ಮಹಾಸಭಾ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಟಾಚಾರಕ್ಕೆ ಒಳಮೀಸಲಾತಿ ಜಾತಿಗಣತಿ ನಡೆಸುತ್ತಿದ್ದು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯವನ್ನು…
ರಾಜಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಪ್ರದರ್ಶನ
ತುಮಕೂರು : ಆತ್ಮೀಯ ಕಲ್ಪತರು ನಾಡಿನ ಕಲಾ ಬಂಧುಗಳೇ ದಿನಾಂಕ 13-04-2025ರ ಭಾನುವಾರದಂದು ಶ್ರೀ ಭೈರವ ಕಲಾ ಸಂಘ, ಸದಾಶಿವನಗರ ತುಮಕೂರು ಇವರ ಸಂಘದ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಸಾಗಸಂದ್ರ ಗ್ರಾಮದ ಶ್ರೀ ಕೆಂಪಮ್ಮ ದೇವಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ತುಮಕೂರಿನ ಹಲವಾರು ಹಿರಿಯ ರಂಗಭೂಮಿ ಕಲಾವಿದರು ಹಾಗೂ ಅನುಭವಿ ಕಲಾವಿದರುಗಳಿಂದ ಗುಬ್ಬಿ ತಾಲ್ಲೂಕಿನ ಶ್ರೀನಿವಾಸ ಡ್ರಾಮ ಸೀನರಿ ಅವರ ಭವ್ಯ ರಂಗ ಸಜ್ಜಿಕೆಯಲ್ಲಿ ತುಮಕೂರಿನ ಹೆಸರಾಂತ…