ಪ್ರಮುಖ ಸುದ್ದಿಗಳು
ಯುವಜನರು ಸ್ವಯಂ ಉದ್ಯೋಗಿಗಳಾಗಲು ಸುವರ್ಣಾವಕಾಶ ಜೂ.9ರಂದು ಪತ್ರಿಕಾ ಭವನದಲ್ಲಿ ವಿಶೇಷ ಕಾರ್ಯಾಗಾರ
ತುಮಕೂರು: ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಹೊರ ಹೊಮುತ್ತಲಿದ್ದಾರೆ ಇದರ ಜೊತೆಗೆ ನಿರುದ್ಯೋಗವು ಕೂಡಾ ಕಾಡುತ್ತಲೇ ಇದೆ ಸರ್ಕಾರ ಸಂಘ ಸಂಸ್ಥೆಗಳು ಕೇವಲ ಸ್ಪರ್ಧಾತ್ಮಕ ಮತ್ತು ಕೌಶಲ್ಯಾಧಾರಿತ ಪರಿಣಿತಿ ಹೊಂದಿದವರಿಗೆ ಮಾತ್ರ ಉದ್ಯೋಗಗಳನ್ನು ನೀಡುತ್ತಿದೆ ಈ ನಿಟ್ಟಿನಲ್ಲಿ ಇಂದಿನ ಯುವಜನರು ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗಿಗಳಾಗಿ ಪರಿವರ್ತನೆಗೊಂಡು ಇತರರಿಗೂ ಉದ್ಯೋಗ ನೀಡಲು ಬೆಂಬಲಿಸುವ ಸಲುವಾಗಿ ಉದ್ಯಮಿ ಪರಿವಾರ ಸೇವಾ ಫೌಂಡೇಶನ್ ಅರನ್ ವಿಕ್ ಇಂಡಸ್ತ್ರೀಯಲ್ ಸಿಸ್ಟಮ್ಸ್ ಪ್ರೈ.ಲಿ. ಸಹಯೋಗದೊಂದಿಗೆ ಸುವರ್ಣ…
ಪರೀಕ್ಷಾ ಕೇಂದ್ರಗಳಿಗೆ ಸಾನಿಟೈಸರ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ– ಅಪರ ಜಿಲ್ಲಾಧಿಕಾರಿ
ತುಮಕೂರು: ಜಿಲ್ಲೆಯಲ್ಲಿ ಜೂನ್ 9 ರಿಂದ 20ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಸಾನಿಟೈಸರ್ ಮಾಡಿ ಯಾವುದೇ ಲೋಪದೋಷಗಳಿಲ್ಲದಂತೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-3ಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ- 1 ಮತ್ತು 2 ರ ಪರೀಕ್ಷೆಯನ್ನು ಯಾಶಸ್ವಿಯಾಗಿ ನಡೆಸಿದಂತೆ ಈ ಪರೀಕ್ಷೆಯನ್ನೂ ಪಾರದರ್ಶಕವಾಗಿ ನಡೆಸಬೇಕು…
ಪ್ಲಾಸ್ಟಿಕ್ಗೆ ಪರ್ಯಾಯವಾದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ’ ಡಾ ಸಂಜೀವ್ ಕುಮಾರ್
ತುಮಕೂರು: ಅಪಾರ ಅಣ್ಯಗಳ ನಾಶದಿಂದ ಇಂದು ಭೂಮಿಯ ಉಷ್ಣಾಂಶ ಹೆಚ್ಚಾಗಿದ್ದು ಜೀವಜಂತುಗಳು ನಲುಗುತ್ತಿದೆ ಇದರಿಂದ ಮುಕ್ತಿ ದೊರೆಯಬೇಕೆಂದರೆ ಹೆಚ್ಚಾಗಿ ಗಿಡಗಳನ್ನು ನೆಟ್ಟಾಗ ಮಾತ್ರ ಜೀವ ಸಂಕುಲ ಉಳಿಯುತ್ತದೆ ಎಂದು ಶ್ರೀ ಸಿದ್ಧಾರ್ಥ ಸ್ಕೂಲ್ ಆಪ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜೀವ್ ಕುಮಾರ್ ತಿಳಿಸಿದರು. ನಗರದ ಹೊರವಲಯದ ಕ್ಯಾತ್ಸಂದ್ರದಲ್ಲಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಗಿಡನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದ ಅವರು ಇಂದು ನಾವು…
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಜಲಜಾ ಜೈನ್
ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಅತ್ತಿಮಬ್ಬೆ ವಿದ್ಯಾ ಮಂದಿರ ಶಾಲೆಯ ಅಧ್ಯಕ್ಷರಾದ ಜಲಜಾ ಜೈನ್ ತಿಳಿಸಿದರು. ಅವರು ನಗರದ ಚಿಕ್ಕಪೇಟೆಯ ಅತ್ತಿಮಬ್ಬೆ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪ್ರಕೃತಿಯಿಂದ ಎಲ್ಲವನ್ನು ಹೊಡೆಯುವ ಮನುಷ್ಯ ಅದರ ವಿನಾಶಕ್ಕೆ ಕೈ ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ. ಎಲ್ಲಡೆಯಲ್ಲಿಯೂ ಅರಣ್ಯ ನಾಶ, ವಿಪರೀತವಾದ ಪ್ಲಾಸ್ಟಿಕ್ ಬಳಕೆ, ಹಾಗೂ ನಗರೀಕರಣದ ಪ್ರಭಾವದಿಂದಾಗಿ ಇಂದು ಪರಿಸರ ವಿನಾಶದತ್ತ ಸಾಗಿದ್ದು…
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಸಂವಾದ
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೆಲನ್ ಕೆಲರ್ ಶಾಲೆಯಲ್ಲಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಹಾಗೂ ಅವರ ತಾಯಂದಿರೊಂದಿಗೆ ಸಂವಾದ ನಡೆಸಿದರು. ನಗರದ ಜಯನಗರ ಪೂರ್ವ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ನಡೆಯುತ್ತಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಮತ್ತು ತಾಯಂದಿರ ತರಬೇತಿ ಕೇಂದ್ರಕ್ಕೆ ಅವರು ಬುಧವಾರ ಭೇಟಿ ನೀಡಿ ಕೇಂದ್ರದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿರುವ ವಿಶೇಷ ತರಬೇತಿ ಕುರಿತು ಸಂವಾದ ನಡೆಸಿದರು. ನಂತರ ಮಾತನಾಡಿದ ಅವರು,…
ರೈತರ ವಿರುದ್ಧ ಹಠಮಾರಿತನ ಮಾಡಿದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಬಿ ವೈ ವಿಜಯೇಂದ್ರ
ಗುಬ್ಬಿ : ಸರಕಾರದ ಹಠ ಮಾರಿತನ ಹಾಗೂ ಅಹಂಕಾರ ದಿಂದ ಅಧಿಕಾರದ ದರ್ಪದಿಂದ ರೈತರ ವಿರುದ್ದ ಸರಕಾರ ಹೋದರೆ ನೀವೇ ಅನುಭವಿಸಬೇಕಾಗುತ್ತದೆ ಎಂದು ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗುಡುಗಿದರು. ಗುಬ್ಬಿ ತಾಲೂಕಿನ ಸುಂಕಾಪುರದ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾಧ್ಯಮದ ಜೊತೆಯಲ್ಲಿ ಮಾತನಾಡಿದ ಅವರು ಇಲ್ಲಿ ನಡೆಯುತ್ತಿರುವಂತಹ ಕಾಮಗಾರಿಯೇ ಅವ್ಯ ಜ್ಞಾನಿಕವಾಗಿದ್ದು ಅದರ ಸ್ಥಿತಿಗತಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ ಯಾರೋ ಒಬ್ಬರಿಗಾಗಿ ತುಮಕೂರು ಜಿಲ್ಲೆಯ ನೀರನ್ನ…
2027ರ ವೇಳೆಗೆ 25,0000 ನವೋದ್ಯಮಗಳು ಆರಂಭದ ಗುರಿ: ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಎಸ್ಎಸ್ಐಟಿಯಲ್ಲಿ‘ಟೆಕ್ನೋಡಿಯ–2025’ ಕಾರ್ಯಕ್ರಮ ಉದ್ಘಾಟನೆ
ತುಮಕೂರು: ಕೃಷಿ, ಆರೋಗ್ಯ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಇಂದು ಇಡೀ ವಿಶ್ವದಾದ್ಯಂತ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಆವಿಷ್ಕಾರವಾಗುತ್ತಿದೆ. ಪ್ರತಿನಿತ್ಯ ತಂತ್ರಜಾÐನ ಗಣನೀಯವಾಗಿ ಬದಲಾಗುತ್ತಿವೆ. ಅದರಂತೆ ಕರ್ನಾಟಕದಲ್ಲೂ ಸಾಕಷ್ಟು ನವೋದ್ಯಮಗಳು ಆರಂಭವಾಗುತ್ತಿದ್ದು 2027ರಲ್ಲಿ ಇಪ್ಪತ್ತೈದುಸಾವಿರ ನವೋದ್ಯಮಗಳು ಆರಂಭವಾಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ತಿಳಿಸಿದರು. ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ(ಜೂನ್-2 & 3) ಆಯೋಜಿಸಲಾಗಿದ್ದ ಎರಡು ದಿನದ ವಿಜ್ನಾನ ಮತ್ತು…
ರೈತರ ಉಗ್ರ ಹೋರಾಟಕ್ಕೆ ಬೆಚ್ಚಿದ ಪೊಲೀಸ್ ಇಲಾಖೆ
ಗುಬ್ಬಿ: ತಾಲ್ಲೂಕಿನ ನಿಟ್ಟೂರು ಬಳಿ ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನಾ ನಿರತ ರೈತರನ್ನು ತಡೆಯುವ ಎಲ್ಲಾ ತಯಾರಿ ನಡೆಸಿದ್ದರು. ಅದರೆ ಅಲ್ಲಲ್ಲೇ ಗುಂಪಾಗಿ ಕಾಣಿಸಿಕೊಂಡ ರೈತರ ಗುಂಪು ನಿಟ್ಟೂರು ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾಗರೋಪಾದಿಯಲ್ಲಿ ಜಮಾಯಿಸ ತೊಡಗಿದರು. ನೂರರ ಸಂಖ್ಯೆ ಸಾವಿರ ಆಗುತ್ತಿದ್ದಂತೆ ರೈತರು ರಸ್ತೆಗಿಳಿಯ ತೊಡಗಿದರು. ರೈತ ಸಂಘದ ಮುಖಂಡರು, ಬಿಜೆಪಿ ಜೆಡಿಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ ತಕ್ಷಣ ಪ್ರತಿಭಟನೆ ತೀವ್ರ ಸ್ವರೂಪ ಕಂಡಿತು. ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆಯಲ್ಲಿ ಕೆನಾಲ್ ಕಾಮಗಾರಿ ನಡೆಯುತ್ತಿರುವ…
ಜಿಲ್ಲಾಧಿಕಾರಿಗಳಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ
ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ಮಧುಗಿರಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಪುರಸಭೆ ವ್ಯಾಪ್ತಿ ವಾರ್ಡ್ ನಂಬರ್ 11 ಹಾಗೂ 15ನೇ ವಾರ್ಡಿನಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ವೀಕ್ಷಿಸಿದ ಅವರು, 11ನೇ ವಾರ್ಡಿನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ಯಾವೊಬ್ಬ ಗುತ್ತಿಗೆದಾರರು, ಅಧಿಕಾರಿಗಳೂ ಗಮನಿಸದೇ ಇರುವುದು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ಎದ್ದು ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾಮಗಾರಿ…
ಮಠದ ಮೂಲಕ ಸಮಾಜ ಕಟ್ಟಲು ಬದುಕು ಮುಡಿಪಾಗಿಟ್ಟ ಮಾದಾರಚೆನ್ನಯ್ಯ ಸ್ವಾಮೀಜಿಯವರಿಗೆ ಸಾಮರಸ್ಯ ಪುರಸ್ಕಾರ…
ಡಾ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಯವರು ನಾಡಿನ ಪ್ರಖ್ಯಾತ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಮಠಾಧೀಶರು. ಶಿವಶರಣ ಮಾದಾರಚೆನ್ನಯ್ಯ ವಚನಕಾರರಾಗಿ , ಸಮಾಜ ಸುಧಾರಕರಾಗಿ ದಕ್ಷಿಣ ಭಾರತದ ಹಲವೆಡೆ ಸಂಚರಿಸಿ 12 ನೇ ಶತಮಾನದಲ್ಲಿ ಬಸವೇಶ್ವರ ನೇತೃತ್ವದಲ್ಲಿ ನೆಡೆದ ಸಾಮಾಜಿಕ ಪರಿವರ್ತನೆಯ ಅಂದೋಲನದಲ್ಲಿ ಹೆಗಲುಕೊಟ್ಟವರು. ಎರಡು ದಶಕಗಳ ಹಿಂದೆ ದಕ್ಷಿಣ ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೆಲೆಸಿರುವ ಮಾದಿಗ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಜಾಗೃತಿ ತರಲು ಶಿವಶರಣ ಮಾದಾರಚೆನ್ನಯ್ಯ ಗುರುಪೀಠ ಸ್ಥಾಪಿಸಲು ಯೋಚಿಸಲಾಯಿತು. ಈ ಯೋಚನೆಗೆ ಕಾರ್ಯರೂಪ ಕೊಟ್ಟವರು ಚಿತ್ರದುರ್ಗದ ಮುರುಘ…