ಪ್ರಮುಖ ಸುದ್ದಿಗಳು
ಪೊಲೀಸರ ಹತ್ಯೆಯ ನಂತರ ತಲೆ ಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
ಪಾವಗಡ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನು ಹತ್ಯೆಗೈದಿದ್ದ ಮಾಜಿ ನಕ್ಸಲೈಟ್ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2005ರ ಫೆಬ್ರವರಿ 10ರಂದು ಪಾವಗಡ ತಾಲ್ಲೂಕು ತಿರುಮಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ವೆಂಕಟಮ್ಮನಹಳ್ಳಿಯ ಶಾಲೆಯಲ್ಲಿ ಭದ್ರತೆಗೆ ನೇಮಕವಾಗಿದ್ದ 9ಜನ ಪೊಲೀಸರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆಂಧ್ರಪ್ರದೇಶದ ಮಾಜಿ ನಕ್ಸಲ್ ಬಂದೆಲ ಬಾಯನ್ನನ ಮಗನಾದ ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲುನನ್ನು ಪಾವಗಡ ಗ್ರಾಮಾಂತರ ವೃತ್ತದ ಸಿ ಗಿರೀಶ್, ಎಎಸ್ಐ ಗೋವಿಂದರಾಜು ಮತ್ತು ಸಿಬ್ಬಂದಿಗಳಾದ ಧರ್ಮಪಾಲನಾಯ್ಕ,…
ಕಾರ್ಗಿಲ್ 25 ನೇ ವಿಜಯೋತ್ಸವ ಆಚರಣೆ ಸಿದ್ದತೆಗೆ ಸ್ಥಳ ಪರಿಶೀಲಿಸಿದ ಮುರುಳಿಧರ ಹಾಲಪ್ಪ
ತುಮಕೂರು: ಕಾರ್ಗಿಲ್ ೨೫ನೇ ವಿಜಯೋತ್ಸವ ಆಚರಣೆ ಸಂಬಂಧಪಟ್ಟಂತೆ ನಗರದ ಅಮಾನಿಕೆರೆಯಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸುವ ಕಾರ್ಯಕ್ರಮದ ಸಂಬಂಧ ಇಂದು ಮುರುಳೀಧರ ಹಾಲಪ್ಪ ಮತ್ತು ಟೂಡಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ತುಮಕೂರು ಅಮಾನಿಕೆರೆಯ ಧ್ವಜ ಸ್ತಂಭ ಮತ್ತು ಹುತಾತ್ಮರ ಸ್ಮಾರಕದ ಬಳಿ ಜುಲೈ ೨೫ ರಂದು ವಿವಿಧ ಕಾರ್ಯಕ್ರಮಗಳನ್ನು ಎನ್.ಸಿ.ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ಟೂಡಾ ಆಯುಕ್ತರಾದ ಡಾ.ಬಸಂತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮುರುಳೀಧರ ಹಾಲಪ್ಪ ಸ್ಥಳ…
ಎಲ್ಲಾ ಆಡಳಿತ ಇಲಾಖೆಗಳ ತಾಯಿ ಕಂದಾಯ ಇಲಾಖೆ ತಹಶೀಲ್ದಾರ್ ಆರತಿ ಬಿ
ಗುಬ್ಬಿ ಸುದ್ದಿ ಕಂದಾಯ ಇಲಾಖೆಯು ರಾಜ್ಯದ ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಇಲಾಖೆಯನ್ನು ಸಾಮಾನ್ಯವಾಗಿ ಎಲ್ಲಾ ಆಡಳಿತ ಇಲಾಖೆಗಳ ತಾಯಿ ಎಂದು ಕರೆಯಲಾಗುತ್ತದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು. ಕಂದಾಯ ಇಲಾಖೆಯು ನಾಗರಿಕರ ಜೀವನದ ಬಹುತೇಕ ಎಲ್ಲಾ ಅಂಶಗಳನ್ನು ಸ್ಪರ್ಶಿಸುವ ಮೂಲಕ ವ್ಯಾಪಕವಾಗಿದ್ದು, ಸಾಮಾಜಿಕ ಅಭಿವೃದ್ಧಿಗೆ ಇಲಾಖೆಯ ಕೊಡುಗೆ ಅಪಾರ. ಶ್ರೀಸಾಮಾನ್ಯನ ಬದುಕಿನ ಪ್ರತಿಯೊಂದು ರಂಗದಲ್ಲೂ ಕಂದಾಯ ಇಲಾಖೆಯ ಪಾತ್ರ ಬಹುಮುಖ್ಯ ಎಂದು ತಿಳಿಸಿದರು. …
ಗುಬ್ಬಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಗುಬ್ಬಿ ಸುದ್ದಿ ಗುಬ್ಬಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಗುಬ್ಬಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತುಮಕೂರು ಅಭಿಯಾನದಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಜಿಲ್ಲಾ ಅಧಿಕಾರಿ ರವೀಂದ್ರ ನಾಯಕ್ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಮಾತನಾಡಿ ವಯಸ್ಸು ಹೆಚ್ಚಾದಂತೆ ಕಣ್ಣಿಗೆ ಪೊರೆ…
ಸರ್ಕಾರಿ ದಾಖಲೆಗಳನ್ನು ಮನೆಗಳಲ್ಲಿ ಇಟ್ಟುಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ :ಟಿ.ಬಿ.ಜಯಚಂದ್ರ
ತುಮಕೂರು: ಅಧಿಕಾರಿಗಳು ನಿವೃತ್ತಿಯಾದ ನಂತರವೂ ಸರ್ಕಾರಿ ದಾಖಲೆಗಳನ್ನು ಮನೆಗಳಲ್ಲಿ ಇಟ್ಟುಕೊಂಡರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಸಿರಾ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕು ಕಚೇರಿ ಮಾಹಿತಿಯನ್ವಯ ಶಿರಾ ತಾಲೂಕಿನಲ್ಲಿ ಜೂನ್ 24ರಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ 347 ಅರ್ಜಿಗಳು ಸಲ್ಲಿಕೆಯಾಗಿದ್ದು, 47…
2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿದ್ಯುತ್ ಉಪಸ್ಥಾವರಗಳ ಲೋಕಾರ್ಪಣೆ
ತುಮಕೂರು: ಸುಮಾರು 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಕೊರಟಗೆರೆ ತಾಲ್ಲೂಕು ಐ.ಕೆ.ಕಾಲೋನಿ ಹಾಗೂ ತುಂಬಾಡಿ ಗ್ರಾಮಗಳ ವಿದ್ಯುತ್ ಉಪಸ್ಥಾವರಗಳನ್ನು ಸೋಮವಾರ ಸಚಿವತ್ರಯರು ಲೋಕಾರ್ಪಣೆಗೊಳಿಸಿದರು. ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿಂದು ಸಂಕೇನಹಳ್ಳಿ(ಐ.ಕೆ.ಕಾಲೋನಿ) ಹಾಗೂ ಭೈರೇನಹಳ್ಳಿ(ತುಂಬಾಡಿ) ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ 2*8 ಎಂ.ವಿ.ಎ., 66/11 ಕೆ.ವಿ. ಉಪಸ್ಥಾವರಗಳನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ಮಾತನಾಡಿದ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಾಲ್ಲೂಕಿನ ಸಂಕೇನಹಳ್ಳಿ ಹಾಗೂ ಭೈರೇನಹಳ್ಳಿ ಭಾಗದ ರೈತರಿಗೆ…
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಂಕರನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ
ತಿಪಟೂರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನುಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ, ನಗರದಲ್ಲಿ ಅತಿ ಹೆಚ್ಚು ಸರಕಾರಿ ಶಿಕ್ಷಕರೇ ವಾಸವಿರುವ ಶಂಕರನಗರದಲ್ಲಿ ಶಂಕರನಗರ ಹಿತರಕ್ಷಣಾ ವೇದಿಕೆ ಮತ್ತು ಶಂಕರನಗರ ಹಿತಾಸಕ್ತಿ ಮತ್ತು ಕುಂದು ಕೊರತೆಗಳ ಚಾವಡಿ ಸಹಯೋಗದೊಂದಿಗೆ ಬಡಾವಣೆಯ ದಕ್ಷಿಣ ಭಾಗದ 40 ಅಡಿ ರಸ್ತೆಗೆ ಹೊಂದಿಕೊಂಡತೆ ಇರುವ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಗೌರವನ್ವಿತ ನ್ಯಾಯಧೀಶರದ ವಿ.ದೀಪಾ ರವರು, ತಿಪಟೂರು ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜ್, ನಗರಸಭೆ…
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಂಕರನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ
ತಿಪಟೂರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನುಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ, ನಗರದಲ್ಲಿ ಅತಿ ಹೆಚ್ಚು ಸರಕಾರಿ ಶಿಕ್ಷಕರೇ ವಾಸವಿರುವ ಶಂಕರನಗರದಲ್ಲಿ ಶಂಕರನಗರ ಹಿತರಕ್ಷಣಾ ವೇದಿಕೆ ಮತ್ತು ಶಂಕರನಗರ ಹಿತಾಸಕ್ತಿ ಮತ್ತು ಕುಂದು ಕೊರತೆಗಳ ಚಾವಡಿ ಸಹಯೋಗದೊಂದಿಗೆ ಬಡಾವಣೆಯ ದಕ್ಷಿಣ ಭಾಗದ 40 ಅಡಿ ರಸ್ತೆಗೆ ಹೊಂದಿಕೊಂಡತೆ ಇರುವ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಗೌರವನ್ವಿತ ನ್ಯಾಯಧೀಶರದ ವಿ.ದೀಪಾ ರವರು, ತಿಪಟೂರು ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜ್, ನಗರಸಭೆ…
ಸರಕಾರಿ ಶಾಲಾ ಮಕ್ಕಳಿಗೆ ಟ್ರಾಕ್ ಸೂಟ್ ವಿತರಣೆ.
ತಿಪಟೂರು ನ್ಯೂಸ್ ತಿಪಟೂರು ನಗರದ ಗಾಯತ್ರಿನಗರ ಸರಕಾರಿ ಶಾಲಾ ಮಕ್ಕಳಿಗೆ ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಶಾಲೆಯ ಪುಟ್ಟ ಪುಟ್ಟ ಮಕ್ಕಳಿಗೆ ಟಾಕ್ ಸೂಟ್, ಪೆನ್ನು ಮತ್ತು ಪೆನ್ಸಿಲ್ ವಿತರಿಸಿದರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಜೀವನ ಹಾಗೂ ವಿದ್ಯಾರ್ಥಿ ಜೀವನವನ್ನು ನೆನೆದು ಶಾಲಾ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಓದಿದಂತಹ ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದಾರೆ, ಸರಕಾರಿ ಶಾಲೆಯು ಸಕಲ ಸೌಲತ್ತುಗಳನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದು ಖಾಸಗಿ ಶಾಲೆಗಳ…
ಆರೋಗ್ಯವೇ ಭಾಗ್ಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ
ಗುಬ್ಬಿ : ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ ಹಣವನ್ನು ಎಷ್ಟು ಬೇಕಾದರೂ ದುಡಿಯಬಹುದು ಆದರೆ ಆರೋಗ್ಯ ಪಡೆಯುವುದು ಕಷ್ಟ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು. ಗುಬ್ಬಿ ಪಟ್ಟಣದ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಚಾಲುಕ್ಯ ಆಸ್ಪತ್ರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಮಾರು 40 ವರ್ಷಗಳಿಂದಲೂ ಕೂಡ ರಾಜ್ಯದ…