ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಗ್ರಾಮೀಣ ಭಾಗದ ಬಡ ಜನತೆಗೆ ಅನುಕೂಲ ಪಿ ಎಸ್ ಐ ಶಿವಕುಮಾರ್

ಗ್ರಾಮಾಂತರದ ಭಾಗದ ಜನರಿಗೆ ಇಂತಹ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಸಿ ಎಸ್ ಪುರ ಪೊಲೀಸ್ ಠಾಣೆಯ ಪಿ. ಎಸ್ ಐ ಶಿವಕುಮಾರ್ ತಿಳಿಸಿದರು. ಗುಬ್ಬಿ ತಾಲೂಕಿನ ಸಿ ಎಸ್ ಪುರ ಗ್ರಾಮದಲ್ಲಿ ಚಾಲುಕ್ಯ ಆಸ್ಪತ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಾಲುಕ್ಯ ಆಸ್ಪತ್ರೆಯು ಇದುವರೆಗೂ ನೂರಾರು ಉಚಿತ ಆರೋಗ್ಯ…

Read More

ಎಸ್.ಎಸ್.ಎಲ್.ಸಿ. ಪರೀಕ್ಷೆ: ಸೇಂಟ್ ಮೇರಿಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ

ತುರುವೇಕೆರೆ: ತಾಲ್ಲೂಕಿನ ದೊಡ್ಡೇನಹಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 100 ರಷ್ಟು ಪಲಿತಾಂಶ ಪಡೆದಿದೆ ಎಂದು ಶಾಲೆಯ ನೂತನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎಂ.ಎಸ್. ಗಂಗಾಧರ ದೇವರಮನೆ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಹೊಸ ತೀರ್ಮಾನ ಕೈಗೊಂಡಿದ್ದು, ಪರೀಕ್ಷಾ ಫಲಿತಾಂಶ ಎಲ್ಲರ ಗಮನ ಸೆಳೆದಿತ್ತು. ಮೊದಲ ಬಾರಿ ಸಿಸಿ ಕ್ಯಾಮೆರಾ ಕಣ್ಣಿನ ಕಣ್ಗಾವಲಿನಲ್ಲಿ ಪರೀಕ್ಷೆ…

Read More

ಗುಬ್ಬಿ ಬ್ಲಾಕ್ ಕಾಂಗ್ರೇಸ್ ನ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನರಸಿಂಹಮೂರ್ತಿ.ಎ ನೇಮಕ

ಗುಬ್ಬಿ : ತಾಲ್ಲೂಕು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನರಸಿಂಹಮೂರ್ತಿ.ಎ ರವರನ್ನು ಗುಬ್ಬಿ ಬ್ಲಾಕ್ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಪಟ್ಟಣದ ನಾಯಕ ಸಮುದಾಯದವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹಮೂರ್ತಿ ಯವರು ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವರಾದ ಎಸ್. ಆರ್ ಶ್ರೀನಿವಾಸ್ ರವರು ಸಂಘಟನಾ ಶಕ್ತಿಯನ್ನು ಗುರುತಿಸಿ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಅಗತ್ಯವಿರುವ ಸೌಕರ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವೆ ಎಂದ ಅವರು ಮುಂದಿನ…

Read More

ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಗುಬ್ಬಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಗುಡುಗು ,ಮಿಂಚು ,ಗಾಳಿಯಿಂದ ಕೂಡಿದ ಹದವಾದ ಮಳೆ ಬಿದ್ದಿರುವುದು ರೈತರಲ್ಲಿ ಹರ್ಷವನ್ನು ಉಂಟುಮಾಡಿದೆ. ಮುಂಗಾರು ಪ್ರಾರಂಭವಾಗಿ ಹಲವಾರು ತಿಂಗಳುಗಳಿಂದ ಮಳೆಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ತಾಲೂಕಿನಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು ರೈತರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೂ ಕಷ್ಟ ಎದುರಾಗಿತ್ತು.   ಭರಣಿ ಮಳೆಯ ಕೊನೆಯ ದಿನವಾದ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ಬೀಸಿದ ಮಳೆ ಗಾಳಿಯಿಂದಾಗಿ…

Read More

ಸರ್ಕಾರದ ಸುತ್ತೋಲೆಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಲೋಕೇಶ್ ತಾಳಿಕಟ್ಟೆ

ತುಮಕೂರು : ಇತ್ತೀಚಿಗೆ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಯಾಕೆಂದರೆ ಮೆಡಿಕಲ್ ಸೀಟ್ ಪಡೆಯಲು ನೀಟ್ ಪರೀಕ್ಷೆ ಸಹ ಅತ್ಯವಶ್ಯಕವಾಗಿದ್ದು ಯಾವ ವಿದ್ಯಾರ್ಥಿ ಸಿಇಟಿ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳದೇ ಏಕಾಏಕಿ ನೀಟ್ ಪರೀಕ್ಷೆಯನ್ನು ಎದುರಿಸಿರುತ್ತಾರೋ ಅವರಿಗೆ ಮೆಡಿಕಲ್ ಸೀಟ್ ಹಂಚಿಕೆಯನ್ನು ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ, ಇದರಿಂದ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆಂದು ರೂಪ್ಸಾ ಅಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಲೋಕೇಶ್…

Read More

ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರ

ಗುಬ್ಬಿ ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ 40 ದಿನಗಳ ಕಾಲ ಯಶಸ್ವಿಯಾಗಿ ನೆರವೇರಿದ ಮಕ್ಕಳ ಬೇಸಿಗೆ ಶಿಬಿರಕ್ಕೆ ಪ್ರಗತಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಹಾಗೂ ಸಂಗೀತಗಾರ್ತಿ ಮತ್ತು ಮಕ್ಕಳ ತಜ್ಞೆ ಡಾ. ಶ್ರಾವ್ಯ ರಾವ್ ಚಾಲನೆ ನೀಡಿದರು. ಖಾಸಗಿ ವಾಹಿನಿಯ ಸಿಇಓ ಟಿ ಎನ್ ಶಿಲ್ಪಾಶ್ರೀ ಮಾತನಾಡಿ ನಮ್ಮ ಊರಿನಲ್ಲಿಯೇ ನಮ್ಮ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರುವ ಪ್ರಯತ್ನಕ್ಕೆ ಬೇಸಿಗೆ ಶಿಬಿರ ಮೂಲಕ ಸದಾವಕಾಶವನ್ನು ಮಾಡಿಕೊಟ್ಟಿರುವುದು…

Read More

ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆ: ಮಹೇಶ್ ಪದವಿ ಪೂರ್ವ ಕಾಲೇಜು

ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ಶೈಕ್ಷಣಿಕ ಸುಧಾರಣೆಯಿಂದ ತುಮಕೂರು ಜಿಲ್ಲೆಯಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಇತಿಹಾಸ ಸೃಷ್ಟಿಸಿದ ಮಹೇಶ್ ಪಿಯು ಕಾಲೇಜು ಮತ್ತೆ ಇತಿಹಾಸದ ಮರು ಸೃಷ್ಟಿಯತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. 2012 ರಲ್ಲಿ ಕೇವಲ 173 ವಿದ್ಯಾರ್ಥಿಗಳ ಮೂಲಕ ಪ್ರಾರಂಭವಾದ ಮಹೇಶ್ ಪಿಯು ಕಾಲೇಜು 2019ರಲ್ಲಿ ತುಮಕೂರು ಜಿಲ್ಲೆಯಲ್ಲಿಯೇ 1200 ವಿದ್ಯಾರ್ಥಿಗಳನ್ನೊಳಗೊಂಡ ಎರಡು ಶಾಖೆಗಳು ಶೈಕ್ಷಣಿಕ ಕ್ರಾಂತಿಯನ್ನು ಮಾಡಿತು. ತದನಂತರದಲ್ಲಿ ಗುಪ್ತಗಾಮಿನಿಯಂತೆ ತನ್ನ ಸೇವೆಯನ್ನು ಮಾಡುತ್ತಾ…

Read More

ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯ :: ಡಾ.ಶಶಿಧರ್*

ತುರುವೇಕೆರೆ: ಕಾಯಕವೇ ಕೈಲಾಸ ಎಂದು ಕಾಯಕದಲ್ಲಿ ಭಗವಂತನ ಕಂಡ ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯವಾದು ಎಂದು ವೈದ್ಯ ಡಾ. ಎಂ.ಶಶಿಧರ್ ತಿಳಿಸಿದರು. ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿನ ಬೆಂಗಳೂರು ಕ್ಲಿನಿಕ್ ನಲ್ಲಿ ಆಯೋಜಿಸಿದ್ದ 891ನೇ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ಭಾರತದ 12ನೇ ಶತಮಾನದ ಕನ್ನಡದ ಮಹಾ ತತ್ವಜ್ಞಾನಿಗಳು. ವಚನಗಳ ಮೂಲಕ ಜಾತಿ, ಮತ, ಪಂಥ, ಧರ್ಮಗಳ‌ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಾಮಾಜಿಕ ಸುಧಾರಕರು….

Read More

ಡಾ ಅಂಬೇಡ್ಕರ್ ಪ್ರಚಾರ ಸಮಿತಿವತಿಯಿಂದ ಬಸವ ಜಯಂತಿಆಚರಣೆ

ತುಮಕೂರು : ಬಸವ ಜಯಂತಿ ಪ್ರಯುಕ್ತ ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಅಖಿಲ ಭಾರತ ಡಾ. ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಶಾಖೆ, ದಲಿತಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ಮಾತನಾಡುತ್ತಾ ೧೨ನೇ ಶತಮಾನದ ಮಹಾನಾಯಕ, ವಿಶ್ವ ಗುರು, ಕ್ರಾಂತಿಕಾರಕ, ಹಲವಾರು…

Read More

ತಾಲೂಕು ಆಡಳಿತದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಗುಬ್ಬಿ ತಾಲೂಕು ಆಡಳಿತ, ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ ಮತ್ತು ಅಂಗ ಸಂಸ್ಥೆಗಳಿಂದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ಗ್ರೇಡ್ 02 ತಹಶೀಲ್ದಾರ್ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ. ಮಲ್ಲಮ್ಮ ಅವರ ಸುತ್ತ ಸಾಕಷ್ಟು ಪವಾಡಗಳಿದ್ದರೂ ಅವರು ನಡೆದುಕೊಂಡ ಜೀವನ…

Read More