ತುಮಕೂರು:ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಶಾಖೆವತಿಯಿಂದ ಶಾಂತಿ ಮತ್ತು ಕರುಣೆಯನ್ನು ಜಗತ್ತಿಗೆ ಬೋಧಿಸಿದ ಭಗವಾನ್ ಬುದ್ದನ ೨೫೬೮ನೇ ಜನ್ಮ ಜಯಂತಿಯನ್ನು ಅಮಾನಿಕೆರೆಯ ಅರಳಿ ವೃಕ್ಷದ ಬಳಿ ಸರಳವಾಗಿ ಆಚರಿಸಲಾಯಿತು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಬುದ್ದದೇವನ ೨೫೬೮ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್,ಮನುಷ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ,ಕೋಶ,ಹೆಂಡತಿ, ಮಕ್ಕಳು ಎಲ್ಲವನ್ನು ತೊರೆದು ದೇವರನ್ನು ಹುಡುಕಾಟದಲ್ಲಿ ತೊಡಗಿದ ಬುದ್ದನಿಗೆ,ಹಲವಾರು ವರ್ಷಗಳ ತಿರುಗಾಟದ ನಂತರ,ಮನುಷ್ಯನ ಸಮಸ್ಯೆಗಳಿಗೆ ಮನುಷ್ಯನೇ ಕಾರಣ ಎಂಬುದನ್ನು ಅರಿತು,ಆಸೆಯೇ ದುಖಃಕ್ಕೆ ಮೂಲ ಎಂಬುದನ್ನು ಅರಿತು,ತಾನು ಕಂಡು ಕೊಂಡ ಸತ್ಯವನ್ನು ಇತರರಿಗೆ ಭೋಧಿಸುತ್ತಾ ಅಪಾರ ಶಿಷ್ಯ ಬಳಗವನ್ನು ಹೊಂದಿದ ವ್ಯಕ್ತಿ.ಆತನ ಪಂಚಶೀಲ ತತ್ವಗಳಿಗೆ ಇಡೀ ಜಗತ್ತಿನಾದ್ಯಂತ ಒಳ್ಳೆಯ ಮೌಲ್ಯವಿದೆ.ಆನಂದ,ನಾಗಾರ್ಜುನನಂತಹ ಪ್ರಬುದ್ದ ಶಿಷ್ಯರ ಬಳಗದ ಮೂಲಕ ಜಗತ್ತಿಗೆ ಬುದ್ದ ಧಮಃವನ್ನು ಪ್ರಸರಿಸಿದರು. ಬೌಧ್ಧ ಧಮಃದ ತತ್ವಗಳಿಗೆ ಮಾರು ಹೋದ ಮೌರ್ಯ ಚಕ್ರವರ್ತಿ ಆಶೋಕ, ಕಳಿಂಗ ಯುದ್ದದಲ್ಲಿ ಆದ ಸಾವು,ನೋವಿನಿಂದ ನೊಂದು ಬೌಧಃ ಸ್ವೀಕರಿಸಿ,ತಮ್ಮ ಮಕ್ಕಳನ್ನು ಸಹ ಬೌದ್ದಧಮಃದ ಅನುಯಾಯಿಗಳಾಗಿ ಮಾಡಿದರು. ಕುರುಣೆ, ಪ್ರೀತಿ,ಅಹಿಂಸೆ ಬೌಧ್ಧ ಧಮಃದ ಮೂಲ ಮಂತ್ರಗಳು ಎಂದರು.
ಬುದ್ದನ ಅನುಯಾಯಿಯಾಗಿ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಡವ,ಬಲ್ಲಿದ,ಮೇಲು,ಕೀಳು ಎಂಬ ಭೇಧಭಾವವಿಲ್ಲದಬೌದ್ಧ ಧಮಃವನ್ನು ಸ್ವೀಕಾರ ಮಾಡಿ,ಅದರಂತೆ ನಡೆದರು. ಯುವಜನರು ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕೆಂದು ಎನ್.ಕೆ.ನಿಧಿಕುಮಾರ್ ತಿಳಿಸಿದರು.
ಸಮಾಜಸೇವಕರಾದ ಕೊಪ್ಪಲ್ ನಾಗರಾಜು ಮಾತನಾಡಿ,ಆಸೆಯೇ ದುಖಃಕ್ಕೆ ಮೂಲಕ, ಅತಿಯಾಸೆ ಒಳ್ಳೆಯದಲ್ಲ ಎಂಬ ತತ್ವಗಳನ್ನು ತನ್ನ ಅನುಯಾಯಿಗಳಿಗೆ ಭೋಧಿಸುವ ಮೂಲಕ ಜನರು ಭೋಗ ಜೀವನಕ್ಕೆ ಮೊರೆ ಹೋಗದಂತೆ ಪ್ರೇರೆಪಿಸಿದರು.ದೇಶದಲ್ಲಿ ಚಾಲ್ತಿಯಲ್ಲಿರುವ ಹಿಂದು,ಭೌದ್ಧ, ಕ್ರೈಸ್ತ ಇಸ್ಲಾಂ ಇವುಗಳು ಧರ್ಮಗಳಲ್ಲ.ಜೀವನ ಶೈಲಿ, ಅತ್ಯಂತ ಸಮಾನತೆ ಇರುವ ಭೌದ್ಧ ಧಮಃವನ್ನು ಅಂಬೇಡ್ಕರ್ ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸ ದಿಕ್ಕೊಂದನ್ನು ಪರಿಚಯಿಸಿದರು.ಇದರ ಹಿಂದೆ ರಾಷ್ಟಿçÃಯತೆ ತತ್ವ ಅಡಕವಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಮಾತನಾಡಿ,ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ದ್ವೇಷ, ಅಸೂಯೆಗಳು ತಾಂಡವವಾಡುತ್ತಿರುವ ಇಂತಹ ಸಂದರ್ಭದಲ್ಲಿ ಬುದ್ದನ ಕರುಣೆ, ಪ್ರೀತಿ ಎಲ್ಲರಲ್ಲೂ ಮೂಡಿ, ದ್ವೇಷದ ವಾತಾವರಣ ಕದಡಿ, ಪ್ರೀತಿಯ ವಾತಾವರಣ ಉದಯಿಸಲಿ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ರಾಮಚಂದ್ರರಾವ್,ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ನಾರಾಯಣ್.ಎಸ್,ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶಪ್ರಸಾದ್,ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಟೈಲರ್ ಜಗದೀಶ್,ತುಮಕೂರು ತಾಲೂಕು ಗೌರವಾಧ್ಯಕ್ಷ ಗಂಗಾಧರ್.ಜಿ.ಆರ್,ಪದಾಧಿಕಾರಿಗಳಾದ ದರ್ಶನ್,ಭರತ್, ಗೋವಿಂದಮೂರ್ತಿ ದಿಬ್ಬೂರು, ಕಿರಣ್ಕುಮಾರ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.