ತುಮುಲ್ ವತಿಯಿಂದ ಮಾರ್ಚ್ 28 ರಂದು ಗುಬ್ಬಿ ನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ.ಆಯೋಜನೆ. ಭಾರತಿ ಶ್ರೀನಿವಾಸ್.

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾರ್ಚ್ 28 ರಂದು ಗುಬ್ಬಿ ನಗರದ ನಂದಿನಿ ಕ್ಷೀರ ಭವನದ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದು ಇದರ ಸದುಪಯೋಗವನ್ನು ಹಾಲು ಉತ್ಪಾದಕ ಸಂಘಗಳ ಸದಸ್ಯರುಗಳು. ತಾಲೂಕಿನ ರೈತರು ಪಡೆದುಕೊಳ್ಳುವಂತೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಭಾರತಿ ಶ್ರೀ ನಿವಾಸ್ ತಿಳಿಸಿದರು.
ನಗರದ ನಂದಿನಿ ಕ್ಷೀರ ಭವನದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಲು ಉತ್ಪಾದಕರ ಸಂಘದ ಸದಸ್ಯರ ಆರೋಗ್ಯದ ದೃಷ್ಟಿ ಯಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ. ಗುಬ್ಬಿ ಚಾಲುಕ್ಯ ಆಸ್ಪತ್ರೆ. ಗುಬ್ಬಿ ಸಾರ್ವಜನಿಕ ಆಸ್ಪತ್ರೆ. ಕ್ಯಾನ್ಸರ್ ಆಸ್ಪತ್ರೆ. ಬೆಂಗಳೂರು. ಸಚಿ ಕಿಡ್ನಿ ಮತ್ತು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತ ದಾನ ನೆಡೆಸಲಾಗುವುದು.
ಶಿಬಿರದಲ್ಲಿ ಹೃದಯ ಸಂಬದಿತ ಸಮಸ್ಯೆ. ನರರೋಗ. ಕಿಡ್ನಿ. ಹಾಗೂ ಇತರೆ ಸಂಬಂಧ ಕಾಯಿಲೆಗೆ ತಜ್ಞ ವೈದ್ಯರು ತಪಾಸಣೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಇದರ ಜೋತೆಯಲ್ಲಿ ಶಾಸಕರ ನಿಧಿಯಿಂದ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಮತ್ತು ವಿಕಲಚೇತನರಿಗೆ ಮೋಟಾರ್ ಸೈಕಲ್ ಹಾಗೂ ದಾನಿಗಳ ಸಹಾಯದಿಂದ ಕೌವ್ ಲಿಪ್ಟ್. ಹಾಲು ಕರೆಯುವ ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನ. ತುಮುಲ್ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ. ಹಾಗೂ ಸವಲತ್ತು ಗಳನ್ನು ವಿತರಣೆ ಮಾಡಲಾಗುತ್ತದೆ.ಎಂದು ತಿಳಿಸಿದರು
ತಜ್ಞ ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಉಚಿತವಾಗಿ ಬಿ. ಪಿ./ ಇ. ಸಿ. ಜಿ. 2ಡಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು ಹಾಗೂ ಹೃದಯ ರೋಗ,ನರರೋಗ, ಕ್ಯಾನ್ಸರ್,ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಹರಣಿಯ, ಫೈಲ್ಸ್, ಪಿತ್ತಕೋಶದಲ್ಲಿ ಕಲ್ಲು ಅಪೆಂಡಿ ಸೈಟಿಸ್ಸ್ ಸ್ತನ ಕ್ಯಾನ್ಸರ್, ಉಬ್ಬಿರುರುವ ರಕ್ತನಾಳ ಸ್ತ್ರೀರೋಗ ಸಮಸ್ಯೆ ಹಾಗೂ ಮಹಿಳೆಯರ ಗರ್ಭಕೋಶದ ಉಚಿತ ಶಸ್ತ್ರಚಿಕಿತ್ಸೆ ಕೀಲು ಮತ್ತು ಮೂಳೆ ಕಿವಿ ಮೂಗು ಮತ್ತು ಗಂಟಲು ಮತ್ತು ಥೈರಾಯಿಡ್ ಗೆ ಉಚಿತ ಶಸ್ತ್ರಚಿಕಿತ್ಸೆ ನಿಡುವ ಜೋತೆಗೆ ಯಶಸ್ವಿನಿ ಕಾರ್ಡು ಹಾಗೂ ಬಿ, ಪಿ, ಎಲ್, ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುವುದು. ಉಚಿತವಾಗಿ ಕಣ್ಣಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು ಆದ್ದರಿಂದ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು. ರೈತರು.ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಹಾಲು ಒಕ್ಕೂಟ ದ ಗುಬ್ಬಿ ತಾಲೂಕು ಮುಖ್ಯ ಸ್ಥರಾದ ಶಂಕರ್ ನಾಗ್. ವಿಸ್ತರಣಾಧಿಕಾರಿ ಮಹೇಶ್. ಇತರ ಸಿಬ್ಬಂದಿ ಉಪಸ್ಥಿತರಿದ್ದರು.