163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮ

 

ಕರ್ನಾಟಕ ಆರ್ಟ್ಸ್ ಫೌಂಡೇಶನ್ ದಿಂದ 163ನೇ ವಿವೇಕಾನಂದ ಜಯಂತೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಬೆಂಗಳೂರು: 163ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರದ ಕೆಂಗೇರಿ ಉಪನಗರದಲ್ಲಿರುವ ರಾಮಕೃಷ್ಣ ಸ್ಕೂಲ್, ಕೆಹೆಚ್ ಬಿ, ನೇತಾಜಿ ಬಡಾವಣೆಯಲ್ಲಿ ಇದೇ ಸೋಮವಾರ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅಧ್ಯಕ್ಷರಾದ ಶ್ರೀಮತಿ ಸರೋಜರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೇಶವ ಪ್ರಸಾದ್‌, ಘನ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀ ಸುಧೀಂದ್ರ ಕುಮಾರ್, ಮುಖ್ಯ ಅತಿಥಿಗಳಾಗಿ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ರ. ಅಂಜಿನಪ್ಪ, ಶ್ರೀ ವಿ.ವಿ. ಸತ್ಯನಾರಾಯಣ, ರಾಜ್ಯ ಬಿಜೆಪಿ ವಕ್ತಾರ ಹಾಗೂ ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷರಾದ ಶ್ರೀ ಆತ್ಮಾನಂದ ಎಚ್.ಎ, ಸಮಾಜ ಸೇವಕ ಶ್ರೀ ಎಂ.ಬಿ. ಶಿವಕುಮಾರ್, ಅಂತಾರಾಷ್ಟ್ರೀಯ ಜನಪದ ಕಲಾವಿದ ಶ್ರೀ ಅಪ್ಪಗೆರೆ ತಿಮ್ಮರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ, ಸಹಾಯಕ ನಿರ್ದೇಶಕ, ಶ್ರೀ ಆರ್.ಚಂದ್ರಶೇಖರ್ ಮತ್ತಿತರರು ಭಾಗವಹಿಸುವವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ವಿವೇಕಾನಂದ ಜಯಂತೋತ್ಸವ ಅಂಗವಾಗಿ ವಿವೇಕಾನಂದ ಯುವ ಪ್ರಶಸ್ತಿಯನ್ನು ಕೆಂಗೇರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಶ್ರೀಮತಿ ಸುರೇಖರವರು, ಟೊಯೋಟಾ ಕಿರ್ಲೋಸ್ಕರ್ ನೌಕರರ ಅಧ್ಯಕ್ಷ ಶ್ರೀ ದೀಪಕ್ ಮತ್ತು ಸಂಶೋಧನಾ ವಿದ್ಯಾರ್ಥಿ (ಪಿಎಚ್.ಡಿ) ಶ್ರೀ ಈಶ್ವರ್ ಇವರುಗಳಿಗೆ ನೀಡಲಾಗುವುದೆಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅಧ್ಯಕ್ಷರಾದ ಶ್ರೀಮತಿ ಸರೋಜರವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!