ಕುಣಿಗಲ್ ರಸ್ತೆ ಸೇತುವೆಗೆ ತಡೆಗೋಡೆ ನಿರ್ಮಿಸಿ ಅಪಾಯ ತಡೆಯಲು ಆಯುಕ್ತರಿಗೆ ಇಕ್ಬಲ್ ಅಹ್ಮದ್ ಮನವಿ
ತುಮಕೂರು: ನಗರದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಮೇಲೆ ಎರಡೂ ಬದಿ ತಡೆಗೋಡೆಗಳಿಲ್ಲದೆ ಪ್ರಾಣಾಪಾಯ ಎದುರಾಗುವ ಸಾಧ್ಯತೆಗಳಿವೆ. ಕೂಡಲೇ ತಡೆಗೋಡೆಗಳನ್ನು ನಿರ್ಮಾಣ ಮಾಡಿ ನಾಗರೀಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರಿಗೆ ಮನವಿ ಮಾಡಿದ್ದಾರೆ. ಹಾಳಾಗಿದ್ದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಕೆಳ ರಸ್ತೆಯನ್ನು ಇತ್ತೀಚೆಗೆ ದುರಸ್ಥಿ ಮಾಡಲಾಗಿದೆ. ಆದರೆ ಸೇತುವೆ ಮೇಲ್ಭಾಗ ಎರಡೂ ಬದಿಯಲ್ಲಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ. ಸೇತುವೆ…