ಫ್ಲಾರೆನ್ಸ್ ನೇಟಿಂಗೆಲ್ ಜನ್ಮದಿನೋತ್ಸ ಆಚರಣೆ
ಟಿ.ಬೇಗೂರಿನ ಶ್ರೀ ಸಿದ್ಧಾರ್ಥ ಶುಶ್ರೂಷಕರ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಫ್ಲಾರೆನ್ಸ್ ನೇಟಿಂಗೆಲ್ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ವಿ.ಚಂದ್ರಶೇಖರ್ ಮಾತನಾಡಿ ರೋಗಿಗಳ ಮನೋಭಾವನೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಮಾಡಬೇಕಾಗಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸಿರುವುದು ಅವಿಸ್ಮರಣಿಯ, ರೋಗಿಗಳ ಲಾಲನೆ, ಪಾಲನೆ, ಎಲ್ಲಾ ಮೂಲ ಸೌಕರ್ಯಗಳ ಸಮೇತ ಹಾರೈಕೆ ಮಾಡಿರುವುದು ಇಂದಿಗೂ ಸಹ ನಮ್ಮ ಕಣ್ಣ ಮುಂದೆ ಇದೆ, ಫ್ಲಾರೆನ್ಸ್ ನೇಟಿಂಗೆಲ್‍ರವರ ಆದರ್ಶ ಗುಣಗಳನ್ನು ಶುಶ್ರೂಷಕ ವಿದ್ಯಾರ್ಥಿಗಳು…