208 ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ

ತುಮಕೂರು : ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಜನವರಿ ೦೧ ರಂದು ಸಂಜೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ೨೦೮ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಅಮಾನಿಕೆರೆ ಉದ್ಯಾನವನದಲ್ಲಿರುವ ಯೋಧರ ಧ್ವಜ ಸ್ಥಂಭಕ್ಕೆ ಕ್ಯಾಂಡಲ್ ದೀಪ ಬೆಳಗಿಸಿ, ಪುಷ್ವರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಕೋರೆಗಾಂವ್ ಯುದ್ಧ. ಸಮಾನತೆ ಮತ್ತು ಸ್ವಾಭಿಮಾನದ ಅಮರ ಪ್ರತೀಕವಾಗಿದ್ದು ೧೮೧೮ರ ಜನವರಿ ೧ರಂದು ಭೀಮಾ ಕೋರೆಗಾಂವ್‌ನಲ್ಲಿ ನಡೆದ ಯುದ್ಧದಲ್ಲಿ ಐತಿಹಾಸಿಕ ವಿಜಯವು ಕೇವಲ ಸೈನಿಕ ಸಂಘರ್ಷದ ಫಲಿತಾಂಶವಾಗಿರಲಿಲ್ಲ, ಇದು ಶತಮಾನಗಳ ಅನ್ಯಾಯ, ದಮನ ಮತ್ತು ಅವಮಾನಗಳ ವಿರುದ್ಧ ಸ್ವಾಭಿಮಾನದಿಂದ ನಿಂತು ಹೋರಾಡಿದ ೫೦೦ ಮಹಾನ್ ಸೈನಿಕರ ಅಸಾಮಾನ್ಯ ಧೈರ್ಯ, ಶೌರ್ಯ ಮತ್ತು ತ್ಯಾಗದ ಸ್ಮರಣೀಯ ಅಧ್ಯಾಯವಾಗಿದೆ. ಅಂದು ಮನುಸಂವಿಧಾನವಿತ್ತು ರಾಜಪ್ರಭುತ್ವ ಇತ್ತು. ಮನುವಾದಿಗಳ ಕ್ರೂರ ಅಮಾನವೀಯ ಆಡಳಿತವಿರುತ್ತಿತ್ತು. ಆ ಅವ್ಯವಸ್ಥೆಯನ್ನು ಸರಿಮಾಡಲು ರಾಜನನ್ನು ಬದಲಾಯಿಸಲು ನಮ್ಮ ಕೊರೆಗಾಂವ್ ವೀರರಿಗೆ ಕತ್ತಿ, ಖಡ್ಗ, ಬಂದೂಕುಗಳನ್ನು ಹಿಡಿದು ಯುದ್ಧ ಮಾಡಬೇಕಾದ ಅನಿವಾರ್ಯವಿತ್ತು ಪ್ರಾಣ ತೆಗೆಯಬೇಕಿತ್ತು ಪ್ರಾಣ ಕಳೆದುಕೊಳ್ಳಬೇಕಿತ್ತು..! ಆದರೆ ಇಂದು ಬಾಬಾ ಸಾಹೇಬರು ಕೊಟ್ಟ ಸಂವಿಧಾನವಿದೆ. ಪ್ರಜಾಪ್ರಭುತ್ವವಿದೆ. ಈಗಲೂ ಮನುವಾದಿಗಳ ಕ್ರೂರ ಅಮಾನವೀಯ ಆಡಳಿತವಿದೆ..! ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ..! ಅರ್ಥಾತ್ ಭಾರತ ದೇಶವೇ ಅಪಾಯದಲ್ಲಿದೆ..! ಮನುವಾದಿಗಳ ಈ ಕ್ರೂರ ಮುಷ್ಠಿಯಿಂದ ದೇಶವನ್ನು ದೇಶದ ಮುಗ್ದ ಜನರನ್ನು ಉಳಿಸಿಕೊಳ್ಳಲು ಈಗ ನಾವು ಕತ್ತಿ ಖಡ್ಗ ಬಂದೂಕು ಬಾಂಬುಗಳಿಂದ ಯುದ್ಧ ಮಾಡಬೇಕಿಲ್ಲ, ಬಾಬಾ ಸಾಹೇಬರು ನೀಡಿರುವ ಪೆನ್ನು ಮತ್ತು ಓಟು ಎಂಬ ಎರಡಲಗಿನ ಕತ್ತಿಗಳನ್ನು ಸರಿಯಾಗಿ ಝಳುಪಿಸಿ ಬಳಸಬೇಕು ಶೋಷಿತ ಸಮುದಾಯಗಳು ಅಪಾಯದ ಅಂಚಿನಲ್ಲಿದೆ ಈ ಕುರಿತು ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಬೇಕೆಂದು ಅಖಿಲ ಭಾರತ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದರು.

ಸಮಾನತೆ, ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿದ ಈ ಐತಿಹಾಸಿಕ ಹೋರಾಟವನ್ನು ಗೌರವದಿಂದ ಸ್ಮರಿಸಿ, ನ್ಯಾಯಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕಾಗಿದೆ, ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕಾಗಿದೆ, ಅದಕ್ಕೆ ಭೀಮ ಕೊರೆಗಾಂವ್ ಯುದ್ಧವನ್ನು ಪ್ರತಿಯೊಬ್ಬರೂ ಸ್ಪೂರ್ತಿಯಾಗಿ ತೆಗೆದುಕೊಂಡು ನಮ್ಮ ಹಕ್ಕುಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕಾಗಿದೆಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಯುವಘಟಕದ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಅಟ್ರಾಸಿಟಿ ಸದಸ್ಯರಾದ ಗೋವಿಂದರಾಜ್ ಮಾತನಾಡಿದರು.

ದಲಿತರ ಸ್ವಾಭಿಮಾನದ ಸಂಕೇತವಾಗಿ ಕೋಟ್ಯಂತರ ದಲಿತ ಚಳವಳಿಗಳು ಬಹುದೊಡ್ಡ ಶಕ್ತಿಯಾಗಿದೆ. ಶೋಷಿತರಿಗೆ ಆತ್ಮಗೌರವದ ಹಾದಿಯನ್ನು ತೋರಿಸಿಕೊಟ್ಟ ಈ ಭೀಮ ಕೊರೆಗಾಂವ್ ಯುದ್ಧವು, ಸಮಾನತೆಯ ಭಾರತವನ್ನು ಕಟ್ಟುವಲ್ಲಿ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಪತ್ರಕರ್ತರು ಹಾಗೂ ಕೆ.ಯು.ಡಬ್ಲ್ಯೂ.ಜೆ. ಜಿಲ್ಲಾ ಘಟಕದ ನಿರ್ದೇಶಕರಾದ ಯೋಗೀಶ್ ಮೆಳೆಕಲ್ಲಹಳ್ಳಿ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್. ಕೆ. ನಿಧಿ ಕುಮಾರ್, ಜಿಲ್ಲಾ ಅಟ್ರಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜ್ ಕೆ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಎಸ್, ತುಮಕೂರು ನಗರ ಅಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ತಾಲ್ಲೂಕು ಕಾರ್ಯಧ್ಯಕ್ಷರಾದ ವಿನಯ್, ಅಲ್ಪಸಂಖ್ಯಾತರ ಯುವಘಟಕದ ಜಿಲ್ಲಾಧ್ಯಕ್ಷರು ಮೋಹಿನ್ ಅಹ್ಮದ್, ತುಮಕೂರು ಉಪ ವಿಭಾಗ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರು ಮೇಳೇಕಲ್ಲಹಳ್ಳಿ ಯೋಗೀಶ್, ಕರ್ನಾಟಕ ಮಾದಿಗ ಸಮಾಜ ಜಿಲ್ಲಾ ಅಧ್ಯಕ್ಷರಾದ ರಾಜೇಶ್ ಹೆಚ್.ಬಿ, ಲಿಡ್ಕರ್ ನಾಮ ನಿರ್ದೇಶಿತ ಸದಸ್ಯರಾದ ಶಿವರಾಜ್ (ಆಟೋ ಶಿವರಾಜ್), ಪದಾಧಿಕಾರಿಗಳಾದ ಕಿರಣ್ ವೈ.ಎಸ್, ಮನು.ಟಿ, ರವಿಕುಮಾರ್ ಎನ್, ಇಲ್ಲಾಸ್ ಅಹ್ಮದ್, ಮಾರ್ಕೆಟ್ ಮಣ್ಣೆಪ್ಪ, ಹನುಮನರಸಯ್ಯ, ಚೆಲುವರಾಜ್, ರಂಗಸ್ವಾಮಯ್ಯ, ಕೊತ್ತಿಹಳ್ಳಿ ಶಿವಣ್ಣ, ಸೇರಿದಂತೆ ಇನ್ನು ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!