ಸಂವಿಧಾನ ಪಿತಾಮಹನಿಗೆ ಗೌರವ ನಮನ

 

 

ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿ ನಿಬ್ಬಾಣ ದಿನದ ಗೌರವ ಸಮರ್ಪಣೆ

ತುಮಕೂರು: ಭಾರತ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ. ಬಿ.ಆರ್ ಅಂಬೇಡ್ಕ‌ರ್. ಎಲ್ಲರೂ ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗೋಣ ಎಂದು ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್, ಕೆ ನಿಧಿಕುಮಾರ್ ಅವರು ತಿಳಿಸಿದ್ದಾರೆ.

ತುಮಕೂರು ನಗರದ ಅಮಾನಿಕೆರೆ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 69ನೇ ಪರಿ ನಿರ್ವಾಣ ದಿನದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.
ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗೆಗೆ ಏನು ಹೇಳಿ ಬಣ್ಣಿಸಿದರು ಕಡಿಮೆಯೇ. ವರ್ಷದ 365 ದಿನವು ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ನಾವು ತಿಳಿದುಕೊಂಡರು ಸಾಲದು ಹಾಗಾಗಿ ಸಂವಿಧಾನದ ಮಹತ್ವವನ್ನು ನಾವು ಎಲ್ಲರಿಗೂ ತಿಳಿ ಹೇಳಬೇಕು ಇಂತಹ ಅಂಬೇಡ್ಕರ್ ರವರು ಮತ್ತೆ ಮತ್ತೆ ಜನಿಸಿ ಬರಲಿ ಎಂದರು.

 

ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಗೋವಿಂದರಾಜು ಮಾತನಾಡಿ ಇಂದು 69ನೇ ಪರಿ ನಿರ್ವಾಣ ದಿನವನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸುದೈವ, ಈ ದಿನ ಬಹಳ ದುಃಖಕರವಾಗಿದೆ. ಅಂಬೇಡ್ಕರ್ ಅವರು ಇನ್ನೂ ಸ್ವಲ್ಪ ದಿನಗಳು
ನಮ್ಮೊಟ್ಟಿಗೆ ಇರಬೇಕಾಗಿತ್ತು. ನಮ್ಮ ದೇಶಕ್ಕೆ, ಜನತೆಗೆ ಅವರ ಅವಶ್ಯಕತೆ ಬಹಳ ಇತ್ತು. ಅವರು ಜಗತ್ತಿಗೆ. ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನಾವು ಇಂದು ನೆನಪು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಎಲ್ಲರು ಇಂದು ಸಮಾನತೆಯಿಂದ ಬದುಕುತ್ತಿದ್ದೇವೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ
ಸಮಾನತೆಯಿಂದಾಗಿ ಎಲ್ಲರೂ ಅವರಿಗೆ ಗೌರವವನ್ನು ನೀಡುವ ಮೂಲಕ ಪರಿನಿರ್ವಾಣ ದಿನವನ್ನು ಆಚರಿಸೋಣ ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಂಜನ್, ರಾಜೇಶ್ ಹಂಡನಹಳ್ಳಿ,ಕಾವ್ಯ, ಸುಮರಂಗನಾಥ್, ಲಕ್ಷ್ಮಿನಾರಾಯಣ್, ಕಿರಣ್, ಕೃಷ್ಣಮೂರ್ತಿ, ನರಸಿಂಹಮೂರ್ತಿ ಕೆಸ್ತೂರು, ಜಗದೀಶ್ ತ್ಯಾಗರಾಜು ಅಜಿತ್ ಕುಮಾರ್, ಸೇರಿದಂತೆ ಹಲವಾರು ಸಮುದಾಯದ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!