ವಿಜೃಂಭಣೆಯಿಂದ ನಡೆದ ಎಲೇರಾಂಪುರ ಜಾತ್ರಾ ಮಹೋತ್ಸವ

ತಾಲೂಕಿನ ಕೋಳಾಲ ಹೋಬಳಿಯ ಎಲೇರಾಂಪುರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಹಗಲು ಮತ್ತು ರಾತ್ರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು

.ಹಾಗೂ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ  ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಗಳನ್ನು ವಿಶೇಷವಾಗಿ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು ಜಾತ್ರೆಯಲ್ಲಿ ವಿಶೇಷವಾಗಿ ವೀರಭದ್ರ ಕುಣಿತ. ಕರಡಿ ವಾದ್ಯ. ಕಿಲುಕುದುರೆ. ತಮಟೆ. ವಾದ್ಯ. ಡೋಲು. ಹರೇ. ಸಿಡಿಮದ್ದು. ಹೆಣ್ಣು ಮಕ್ಕಳ ತ್ರಿಶೂಲ ಕುಣಿತ. ಜಾನಪದ ಕಲಾತಂಡ. ಆರ್ಕೆಸ್ಟ್ರಾ. ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದವು.

ಎನ್.ಎಸ್.ಆರ್. ನಂಜುಂಡ ಆರಾಧ್ಯ ಮಾತನಾಡಿ :- ಕೋಳಾಲ ಹೋಬಳಿಯ ಭಾಗದ ನಮ್ಮ ಹಳ್ಳಿ ದೊಡ್ಡದಾಗಿದ್ದು ನಮ್ಮ ಗ್ರಾಮದಲ್ಲಿ ಯಾವುದೇ ವೈಶ್ಯಮ್ಯ. ತೊಡಕುಗಳು ಇಲ್ಲದೆ ಎಲ್ಲರೂ ಒಟ್ಟಾಗಿ ಸೇರುವ ಮೂಲಕ  ಅದ್ದೂರಿಯಾಗಿ ಜಾತ್ರೆ ಮಾಡಲಾಗುತ್ತದೆ ಎಂದು ತಿಳಿಸಿದರು.

 

 

ವಿಶೇಷವಾಗಿ ಹೂವಿನ ಅಲಂಕಾರ ಭಕ್ತರ ಕಣ್ಣು ಮನ ಸೆಳೆಯುತ್ತಿತ್ತು. ಸುಮಾರು ನಮ್ಮ ಊರಿಗೆ 100 ವರ್ಷಗಳ ಇತಿಹಾಸವಿದ್ದು. ಬಹಳ ಅರ್ಥ ಪೂರ್ಣವಾಗಿ ವಿಜ್ರ್ಮಣೆಯಿಂದ ಜಾತ್ರೆ ನಡೆದಿದ್ದು ಹಿಂದಿನ ಕಾಲದ ನಮ್ಮ ಪೂರ್ವಿಕರಾದ ಹಿಂದೂಪುರ ಸೇಟು ಶಿವರುದ್ರಪ್ಪ. ಬೆಂಗಳೂರು ಸೇಟು ವೀರಭದ್ರಪ್ಪ. ನರಸೇಗೌಡ. ಉಗ್ರೇಗೌಡ ಹಾಗೂ ಹಲವಾರು ಕುಟುಂಬದವರು ಹಲವಾರು ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ಮಾಡಿಕೊಂಡು ಬಂದಿದ್ದು. ಇದೀಗ ಶೆಟ್ಟರು. ಯಜಮಾನರು. ಗೌಡರು. ಕೈವಾಡದವರು. ಊರಿನ ಜನರ ಸಹಕಾರದೊಂದಿಗೆ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ. ಆಂಜನೇಯ. ಮಾರಮ್ಮ. ಬಸವೇಶ್ವರ. ಹಾಗೂ ನಾಡ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಆರ್ ಎಸ್ ರಾಜಣ್ಣ ಆರ್ ಆರ್ ರಾಜಣ್ಣ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹನುಮಂತರಾಜು ಕಾಂತರಾಜು ಆರ್ ವಿ ಎಸ್ ನಟರಾಜು ಮಂಜುನಾಥ್ ಯುವ ಮುಖಂಡರಾದ ಹೇಮಂತ್ ಸುಮಂತ್ ಚೇತನ್ ವಿನಯ್ ಮುಂತಾದವರು ಹಾಜರಿದ್ದರು

 

 

“ಆರ್.ಎಸ್. ರಾಜಣ್ಣ ಮಾತನಾಡಿ:- ವಿಶೇಷವಾಗಿ ನಾಡಮ್ಮ ನಾಡ ಮಾರಮ್ಮ ದೇವಿಯನ್ನು 3 ವರ್ಷಕ್ಕೊಮ್ಮೆ ಶಿಲೆಯನ್ನು ಸ್ಥಾಪಿಸಿ ಮಾರಮ್ಮ ದೇವಿಯ ಗದಿಗೆಯಿಂದ ಮೆರವಣಿಗೆ ಮೂಲಕ ಊರಿನ ಶಾಂತಿ ಗೋಸ್ಕರ ಬೀದಿ ಬೀದಿಗಳಲ್ಲಿ ಹಲವಾರು ಭಕ್ತರು ದಾರಿ ಉದ್ದಕ್ಕೂ ತೆಂಗಿನಕಾಯಿ ಒಡೆಯುವ ಹಾಗೂ ಕೋಳಿ ಎಸೆಯುವ ಮೂಲಕ ಮಾರಮ್ಮ ದೇವಿಯನ್ನು ಸಾಗಿಸಿ ಊರಿನ ಹೊರಗಡೆ ಬೇವಿನ ಮರದ ಹತ್ತಿರ ಇಡಲಾಗುತ್ತದೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *