ಗುಬ್ಬಿ ಸುದ್ದಿ
ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದಲ್ಲಿ ನರಸಿಂಹ ಜಯಂತಿಯನ್ನು ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದು.
ಪ್ರತಿ ವರ್ಷದಂತೆ ಈ ಬಾರಿಯು ಶ್ರೀ ರಾಮಾನುಜ ಸೇವಾ ಸಮಿತಿಯು ನರಸಿಂಹ ಜಯಂತಿ ಅಂಗವಾಗಿ ಪುಣ್ಯಾಹ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಶಾಂತಿ ಹೋಮ, ನರಸಿಂಹ ಹೋಮ, ಗಣ ಹೋಮವನ್ನು ಲೋಕ ಕಲ್ಯಾಣಾರ್ಥಕ್ಕಾಗಿ ಅಪಾರ ಭಕ್ತರ ಸಮುಖದಲ್ಲಿ ನೆರವೇರಿಸಿ ನಂತರ ಪೂರ್ಣಹೂತಿಯೊಂದಿಗೆ ಹೋಮವನ್ನು ಮುಕ್ತಾಯ ಗೋಳಿಸಲಾಯಿತು.
ಅರಿಶಿನ ಅಲಂಕಾರದೊಂದಿಗೆ ಸ್ವಾಮಿಯವರು ಕಂಗೊಳಿಸುತ್ತಿದ್ದನ್ನು ಕಂಡ ಬಂದ ಭಕ್ತರು ಕಣ್ಮನ ಸೆಳೆಯಿತು. ಸ್ವಾಮಿಯವರನ್ನು ಮೆರವಣಿಗೆಯ ಮೂಲಕ ಗೋವಿಂದ ಗೋವಿಂದ ನಾರಾಯಣ ನಾರಾಯಣ ಎಂಬ ಜಪದೊಂದಿಗೆ ಬಂದ ಅಪಾರ ಭಕ್ತರು ಸ್ವಾಮಿಯವರ ಜೊತೆಗೆ ಬಿಸಿಲಿನ ದಗೆಯಲ್ಲೂ ಹೆಜ್ಜೆಯನ್ನು ಹಾಕುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಸ್ವಾಮಿಯವರಿಗೆ ವಿಶೇಷ ವಿವಿಧ ಹೂವಿನ ಅಲಂಕಾರದೊಂದಿಗೆ ಆಕರ್ಷಿಸುತ್ತಾ ಇರುವುದು ಭಕ್ತರ ಕಣ್ಣಿಗೆ ಹೊಳೆಯುತಾ ಇರುವುದು ಕಂಡು ಬಂತು. ನಂತರ ಸಾಮಿಯವರಿಗೆ ವಿವಿಧ ರೀತಿಯ ಆರತಿಯನ್ನು ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿ ಬಂದ ಭಕ್ತರಿಗೆ ತೀರ್ಥ ಪ್ರಸಾದವನ್ನು ನೀಡಲಾಯಿತು.
ಅರ್ಚಕರಾದ ಕೇಶವಮೂರ್ತಿ, ರಘುಶರ್ಮ, ದರ್ಶನ್, ಕೃಷ್ಣ, ನರಸಿಂಹನ್ ಶಾಸ್ತ್ರಿ,, ಅವರ ನೇತೃತ್ವದಲ್ಲಿ ಸ್ವಾಮಿಯವರ ಕೈಂಕರ್ಯಗಳನ್ನು ನಡೆಸಿಕೊಟ್ಟರು.