ಕೊರಟಗೆರೆ:- ತಾಲೂಕಿನ ಕೋಳಾಲ ಹೋಬಳಿ ಎಲೆೇರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕದಲ್ಲಿರುವ ಸೀಗೆ ಕಟ್ಟೆಯಲ್ಲಿ ಸುಮಾರು 30 ವರ್ಷಗಳಿಂದ ಇದೇ ಗ್ರಾಮದಲ್ಲಿ 8 ರಿಂದ 10 ಮನೆಗಳಿದ್ದು ಎಲೆೇರಾಂಪುರ ಗ್ರಾಮ ಪಂಚಾಯಿತಿಯ ಕರೆದುಗನಹಳ್ಳಿ ಹಾಗೂ ಹನುಮಂತಯ್ಯನಪಾಳ್ಳ ಈ ಒಂದೇ ಬೋರಿನಿಂದ ಗ್ರಾಮಗಳಿಗೆ ಬೋರ್ವೆಲ್ ನಲ್ಲಿ ಮೂರು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಾ ಇದ್ದು ಪಕ್ಕದ 8 ರಿಂದ 10 ಮನೆಗಳಿಗೆ ಇದೇ ಮಾರ್ಗವಾಗಿ ಹಲವಾರು ವರ್ಷಗಳಿಂದ ನೀರು ಬಿಡುತ್ತಿದ್ದರು.
ಕಳೆದ 20 ದಿನಗಳಿಂದ ರಾಜಕೀಯ ವೈಶ್ಯಮದಿಂದ ನೀರನ್ನು ಬಿಡುತ್ತಿಲ್ಲ ಎಂದು ಜನರ ಗೋಳಾಟ. ತಾಲೂಕಿನ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಸಕ್ರೆಟರಿ ಸುರೇಶ್ ಅವರಿಗೆ ದೂರವಾಣಿ ಮುಖಾಂತರ ಹೇಳಿ ಹಲವಾರು ಅಧಿಕಾರಿಗಳು ಅರಸಾಹಸ ಪಟ್ಟರು ಕೂಡ ಈ ಗ್ರಾಮಕ್ಕೆ ನೀರು ಸಿಗುತ್ತಿಲ್ಲ ಪಂಚಾಯತಿ ಅಧಿಕಾರಿ ಮಳೆ ಇಲ್ಲದ ಕಾರಣ ಬೋರ್ವೆಲ್ ನಲ್ಲಿ ನೀರು ಕಡಿಮೆ ಆಗಿದೆ ಎಂದು ಉಡಾಫೆ ಉತ್ತರ ನೀಡಿ ಕಣ್ಣ ಮುಚ್ಚಾಲೆ ಆಟ ಶುರು ಮಾಡಿದ್ದು ರೈತರು ಎಷ್ಟು ಸಾರಿ ದೂರವಾಣಿ ಕರೆ ಮಾಡಿದರು ನೀರು ಬಿಡುತ್ತಿಲ್ಲ.
ಈ ಊರಿನಲ್ಲಿ ರೈತರು ಹೆಚ್ಚಿದ್ದು ದನ ಕರುಗಳು ಮೇಕೆ ಮುಂತಾದ ಪ್ರಾಣಿಗಳಿಗೆ ದಿನನಿತ್ಯ ನೀರು ಅತ್ಯವಶ್ಯಕ ವಾಗಿದ್ದು ಜನರಿಗೆ ನೀರಿಲ್ಲದಂತಾಗಿದೆ ಅಕ್ಕ ಪಕ್ಕದ ತೋಟಗಳಿಗೆ ಹೋಗಿ ಎರಡು ಮೂರು ಬಿಂದಿಗೆ ನೀರು ತೆಗೆದುಕೊಂಡು ಬರುವ ಹೆಣ್ಣು ಮಕ್ಕಳಿಗೆ ದಿನನಿತ್ಯ ನೀರು ತರುವುದೇ ದೊಡ್ಡ ವಿಷಯವಾಗಿದೆ ಈ ಗ್ರಾಮ ವಜ್ಜಿನಕುರಿಕೆ ಗ್ರಾಮ ಪಂಚಾಯತಿಯ ಮಾರಗೋಂಡನಗುಣಿ ಮುಜುರೆ ಗ್ರಾಮವಾಗಿದ್ದು. ಎರಡು ಪಂಚಾಯತಿಯವರು ಸೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.