ವೈ.ಎ.ನಾರಾಯಣಸ್ವಾಮಿ ಶಿಕ್ಷಕರ ನಂಬಿಕೆಗೆ ಅರ್ಹರಾದವರಲ್ಲ ಲೋಕೇಶ್ ತಾಳಿಕಟ್ಟೆ

ಶಿಕ್ಷಕರು ಅಧಿಕಾರಕ್ಕೆ ಬಂದರೆ ಮಾತ್ರ ಶಿಕ್ಷಕರ ಅಭಿವೃದ್ಧಿ ಸಾಧ್ಯ –  ದಿನೇ ದಿನೇ ಶಿಕ್ಷಕರ ಸ್ತಿತಿ ಶೋಚನೀಯವಾಗುತ್ತಿದೆ. ಈ ಬಾರಿ ನಡೆಯುತ್ತಿರುವ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನೆಡೆಯುತ್ತಿದೆ ಎಂದ ಲೋಕೇಶ್ ತಾಳಿಕಟ್ಟೆ

ತಿಪಟೂರು ನಗರದ ಖಾಸಗಿ ಹೋಟೆಲ್ ಕಲ್ಪತರು ಗ್ರಾಂಡ್ ನಲ್ಲಿ ಆ ಯೋಜನೆ ಮಾಡಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಿರುದ್ಧ ಹರಿ ಹಾಯಿದರು. ಮೂರು ಬಾರಿ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ ನಾರಾಯಣಸ್ವಾಮಿ ಶಿಕ್ಷಕರ ನಂಬಿಕೆಗೆ ಅರ್ಹರಾದವರಲ್ಲ.

ನಾರಾಯಣಸ್ವಾಮಿಗೆ ಶಿಕ್ಷಕರು ಮತ ಹಾಕಿ ಮೋಸ ಹೋಗಿದ್ದೇವೆ.ಶಿಕ್ಷಕರ ಕುಂದು ಕೊರತೆ ಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದಾರೆ. ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಕಣಕ್ಕೆ ಇಳಿದಿದ್ದು,ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೋವಿಡ್ ಬಂದಂತಹ ಸಂದರ್ಭದಲ್ಲಿ ಸರಕಾರಿ ಶಾಲಾ ಶಿಕ್ಷಕರಿಗೆ ಕಿಟ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒತ್ತಾಯಿಸಿದ್ದೆ.

ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ, ಬಿ.ಎಸ್.ಯಡಿಯೂರಪ್ಪನವರುಸರಕಾರಿ ನೌಕರರು ಹಾಗೂ ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಆದರೆ ದುರಾದೃಷ್ಟ ನಾವು ರಾಜಕೀಯ ವ್ಯಕ್ತಿಯನ್ನು ಗೆಲ್ಲಿಸಿ ಮೋಸ ಹೋದೆವು. ನಾರಾಯಣಸ್ವಾಮಿಗೆ ಶಿಕ್ಷಕರ ಬಗ್ಗೆ ಕೊಂಚವೂ ಆಸಕ್ತಿ ಇಲ್ಲ. ಸರಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿಯನ್ನು ಉಂಟಾಗಿದ್ದು, ನಾನೊಬ್ಬ ಶಿಕ್ಷಕನಾಗಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನಿಷ್ಠ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಗಳನ್ನು ಮುಚ್ಚಬಾರದು. ಪರಿಷತ್ತಿನ ಈ ಸದಸ್ಯರು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಕರ್ನಾಟಕವನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು.

 

 

ಪ್ರತಿ ಸರ್ಕಾರಗಳು ಅಧಿಕಾರಕ್ಕೆ ಬಂದಂತ ಸಂದರ್ಭದಲ್ಲಿ ಕನಿಷ್ಠ 20,000 ಶಿಕ್ಷಕರನ್ನು ನೇಮಕ ಮಾಡಿಕೊಂಡು ಬಂದಿದ್ದರೆ, ರಾಜ್ಯದಲ್ಲಿ ಅಲ್ಪ ಪ್ರಮಾಣದ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿತ್ತು. ಶಿಕ್ಷಕರ ಹಿತ ಕಾಯುವುದರ ಜೊತೆ ಜೊತೆಗೆ ಬಡವರಿಗೆ ಆಸರೆಯಾಗಿರುವ ಒಂದಷ್ಟು ಸರಕಾರಿ ಶಾಲೆಗಳನ್ನ ಮುಚ್ಚುವಂತಹ ಸ್ಥಿತಿ ಬರುತ್ತಿರಲಿಲ್ಲ. ಶಿಕ್ಷಕರ ಕ್ಷೇತ್ರದಿಂದ ಗೆದ್ದು ಅಧಿಕಾರವನ್ನು ಉಂಡು ತನ್ನ ಗೆಲುವಿಗೆ ಕಾರಣಕರ್ತರಾದ ಶಿಕ್ಷಕರನ್ನು ಸಂಪೂರ್ಣವಾಗಿ ಕಡೆಗಣಿಸಿ ರುವುದು, ಮತದಾರ ಶಿಕ್ಷಕರಿಗೆ ಬಹಳಷ್ಟು ನೋವನ್ನು ಉಂಟು ಮಾಡಿದೆ.

 

 

ಈ ಬಾರಿ ನಡೆಯುವ ಚುನಾವಣೆಯು ಸತ್ಯ ಅಸತ್ಯ ಮತ್ತು ಧರ್ಮ ಅಧರ್ಮದ ಯುದ್ಧವಾಗಿದೆ.ಬಹುತೇಕ ಶಿಕ್ಷಕರು ಬಹಳಷ್ಟು ವರ್ಷಗಳಿಂದ ನನ್ನ ಹೋರಾಟವನ್ನು ಗಮನಿಸಿ ತುಂಬು ಅಭಿಮಾನದಿಂದ ನನ್ನನ್ನು ಚುನಾವಣೆಗೆ ಸ್ಪರ್ಧಿಸಲು ಬೆಂಬಲಿಸಿದ್ದಾರೆ, ಈ ಬಾರಿ ರಾಜಕೀಯ ವ್ಯಕ್ತಿಯನ್ನು ಹೊರತುಪಡಿಸಿ ಒಬ್ಬ ಶಿಕ್ಷಕ ಗೆಲುವು ಸಾಧಿಸುವುದು ಖಚಿತ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.

 

 

ಇದೇಸಂದರ್ಭದಲ್ಲಿ ಕೃಷ್ಣಮೂರ್ತಿ, ಮಲ್ಲೇಶ್, ರೇಣುಕಯ್ಯ ಮತ್ತು ಲೋಕೇಶ್ ತಾಳಿ ಕಟ್ಟೆ ಬೆಂಬಲಿಗರು ಉಪಸ್ಥಿತರಿದ್ದರು.

ವರದಿ: ಸೋಮನಾಥ್

Leave a Reply

Your email address will not be published. Required fields are marked *