ಗುಬ್ಬಿ ಸುದ್ದಿ
ಕಳೆದ ರಾತ್ರಿ ಸುರಿದ ವರ್ಷಧಾರೆ ಕೃತಿಕಾ ಮಳೆಯ ಪರಿಣಾಮ ತಾಲೂಕಿನ ಹಲವು ಕಡೆ ಮನೆಗಳ ಗೋಡೆ ಧರೆಗೆ ಉರುಳಿದರೆ, ನಗರದಲ್ಲಿ ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಸಂಚಾರವು ಕೆಲವು ಕಾಲ ಸ್ಥಗಿತವಾಗಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ.
ವರ್ಷದ ಮೊದಲ ಮಳೆಯು ತಾಲೂಕಿನಲ್ಲಿ ಅಬ್ಬರಿಸಿದ ಪರಿಣಾಮ ಮನೆಗಳ ಗೋಡೆ ಕುಸಿತ, ರಸ್ತೆಗಳು ಕೆಲವು ಕಾಲ ಸ್ಥಗಿತವಾದ ಘಟನೆ ಕಳೆದ ರಾತ್ರಿ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ವರ್ಷಧಾರೆ ಮಳೆಯು ಗುಬ್ಬಿ ನಗರದಲ್ಲೇ 112 ಮಿಲಿ ಮೀಟರ್ ಮಳೆಯು ಅಬ್ಬರಿಸಿದೆ. ಇದರ ಪರಿಣಾಮ ಪಟ್ಟಣದಲ್ಲಿನ ರಸ್ತೆಗಳು ಜಲಾವೃತ್ತವಾಗಿ ಬೀದಿಬದಿ ವ್ಯಾಪಾರಿಗಳಿಗೆ ನಡುಕ ಹುಟ್ಟಿಸಿದರೆ, ತಾಲೂಕಿನ ಹಲವು ಕಡೆ ಮನೆಗಳ ಗೋಡೆ ಕುಸಿತವಾಗಿರುವ ಘಟನೆ ನಡೆದಿದೆ.ಕಳೆದ ನಾಲ್ಕೈದು ತಿಂಗಳಿನಿಂದ ನಿರಂತರವಾಗಿ ಬರಗಾಲದಲ್ಲಿ ತತ್ತರಿಸುತ್ತಿದ್ದ ತಾಲೂಕು ಇದೀಗ ಮುಂಗಾರು ಮಳೆ ಆರಂಭವಾಗಿರುವುದು ರೈತರಲ್ಲಿ ಹರ್ಷ ತಂದಿದ್ದರೆ, ಮಳೆಯ ಅಬ್ಬರಕ್ಕೆ ಮನೆಗಳ ಗೋಡೆ ಕುಸಿದಿದೆ.
ಕಳೆದ ರಾತ್ರಿ ಗುಬ್ಬಿ ನಗರದಲ್ಲಿ 112 ಮಿಲಿ ಮೀಟರ್ ಮಳೆಯಾಗಿದ್ದು, ಕಳೆದ ರಾತ್ರಿ ತಾಲೂಕಿನಲ್ಲಿ 207.8 ಮಿಲಿ ಮೀಟರ್ ಮಳೆಯಾಗಿದೆ ಅತಿ ಹೆಚ್ಚು ಮಳೆ ಕಸಬಾ ಹೋಬಳಿ ಆಗಿದೆ. ಕೆಲವು ಕಡೆ ಗಾಳಿಯ ರಭಸಕ್ಕೆ ಮರಗಳು ಬೆಂಡಾಗಿದ್ದರೆ, ದೊಡ್ಡ ದೊಡ್ಡ ಚರಂಡಿಯ ಮೇಲ್ಭಾಗದಿಂದ ರಸ್ತೆಯ ಮೇಲೆ ಮಳೆಯ ನೀರು ಹರಿದಿದೆ.ಕಸಬಾ ಗರಿಷ್ಠ 112 ಮಿ.ಮೀ. ಮಳೆಯಾದರೆ, ಕಡಬ ಕನಿಷ್ಠ 09 ಮಿ.ಮೀ. ಮಳೆಯಾಗಿದೆ. ಸಿ.ಎಸ್ ಪುರ 36, ಚೇಳೂರು 24, ನಿಟ್ಟೂರು 15.2ಮಿ.ಮೀ, ಅಂಕಸಂದ್ರ 11.6, ನಿನ್ನೆ ರಾತ್ರಿ ಒಂದೇ ದಿನ 207.8ಮಿ.ಮೀ. ಮಳೆ ಆಗಿದೆ.
ತಹಶೀಲ್ದಾರ್ ಆರತಿ ಬಿ. ಮಾತನಾಡಿ ಕಳೆದ ರಾತ್ರಿ ತಾಲೂಕಿನಲ್ಲಿ ವರುಣಾ ಆರ್ಭಟ ಜೋರಾಗಿದ್ದು ತಾಲೂಕಿನ ಕೆಲವು ಕಡೆ ಮನೆಗಳು ಧರೆಗೆ ಉರುಳಿದರೆ, ಮಳೆಯ ಅಬ್ಬರಕ್ಕೆ ಮಳೆಯ ನೀರು ಚರಂಡಿಯ ಮೇಲ್ಭಾಗ ಮೂಲಕ ರಸ್ತೆಗೆ ಹರಿದ ಪರಿಣಾಮ ಕೆಲವು ಕಾಲ ರಸ್ತೆಯಲ್ಲಿ ಸಾರ್ವಜನಿಕರು, ವಾಹನ ಸವಾರರು ಓಡಾಡಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ಬಳಿಕ ಸರಾಗವಾಗಿ ಮಳೆಯ ನೀರು ಹರಿದ ಕಾರಣ ರಸ್ತೆಯ ಮೇಲೆ ನೀರು ಹರಿಯುವುದು ನಿಂತು ಸಾರ್ವಜನಿಕರು ಓಡಾಡುವಂತಾಯಿತು. ರಾತ್ರಿ ಮಳೆರಾಯನ ಅಬ್ಬರಕ್ಕೆ ತಾಲೂಕಿನ ಕಡಬ ಹೋಬಳಿ ಕೆ. ಕಲ್ಲಹಳ್ಳಿ , ಕಸಬಾ ಹೋಬಳಿ ಸುರಿಗೆನಹಳ್ಳಿ, ನಿಟ್ಟೂರು ಹೋಬಳಿ ನೇರಳೆಕೆರೆ , ಹಾಗಲವಾಡಿ ಹೋಬಳಿ, ಅಪ್ಪಣ್ಣನಹಳ್ಳಿ ಗ್ರಾಮ ಒಟ್ಟು ನಾಲ್ಕು ಮನೆಗಳು ಧರೆಗೆ ಉರುಳಿದ್ದು, ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಕಂದಾಯ ನಿರೀಕ್ಷಕರ ವರದಿಯನ್ನು ಪಡೆದು ಪ್ರಕೃತಿ ವಿಕೋಪ ಸರ್ಕಾರದ ನಿಗದಿಯಂತೆ ಹಣವನ್ನು ನೀಡಲು ತಾಲೂಕು ಆಡಳಿತ ಮುಂದಾಗಿದ್ದು, ನಾಲ್ಕು ಸಂತ್ರಸ್ತರಿಗೆ ಪರಿಹಾರ ನೀಡಿದ್ದು, ಉಳಿದ ಮೂವರು ಸಂತ್ರಸ್ತರಿಗೆ ಇಂದು ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.