ಗುಬ್ಬಿ ತಾಲೂಕು ಡಿ ರಾಂಪುರ ಮಜುರೆ ಸುಂಕಾಪುರ ಗ್ರಾಮದ ಬಳಿ ನೆಡೆಯುತ್ತಿರುವ ಹೇಮಾವತಿ ಲಿಂಕ್ ಕ್ಯಾನಲ್ ಕಾಮಗಾರಿಯನ್ನು ಸ್ಥಗಿತಗೋಳಿ ನಮ್ಮ ನೀರು ನಮಗೆ ಉಳಿಸಿ ಎಂದು ನೆಡೆಯುತ್ತಿರುವ ಬೃಹತ್ ರೈತರ ಪ್ರತಿಭಟನೆಯಲ್ಲಿ ತುರುವೆಕೇರೆ ಶಾಸಕ ಎಂ ಟಿ ಕೃಷ್ಣಪ್ಫ ಮಾತನಾಡಿ ನಮ್ಮ ನೀರು ನಮ್ಮ ಹಕ್ಕು ನಮ್ಮ ಪಾಲನ್ನು ಕೇಳುವ ಅಧಿಕಾರ ನಮಗೆ ಇದೆ ಅದರೆ ನಮ್ಮ ರೈತರ ಅನುಮತಿ ಇಲ್ಲದೆ ಮಾಹಿತಿ ನೀಡದೆ ರೈತರ ಜಮೀನಿನಲ್ಲಿ ಹೇಮವತಿ ನೀರನ್ನು ಎಕ್ಸ್ಪ್ರೆಸ್ ಲಿಂಕ್ ಕ್ಯಾನಾಲ್ ಮೂಲಕ ಬೇರೆ ಕಡೆ ತೆಗೆದುಕೊಂಡು ಹೋಗುತ್ತಿರುವುದು ಸ್ಥಳೀಯ ರೈತರಿಗೆ ದ್ರೋಹ ಬಗೆಯುವ ಕೆಲಸವಾಗಿದೆ ಇದು ಖಂಡನೆಯ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಕಾನೂನನ್ನು ಪರಿಪಾಲನೆ ಮಾಡುವವರು ಆದರೆ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ರೈತರ ಜಮೀನಿನಲ್ಲಿ ಚಾನಲ್ ತೆಗೆದಿರುವುದು ಕಾನೂನು ಬಾಹಿರವಲ್ಲವೇ ಎಂದು ಪ್ರಶ್ನಿಸಿದರು.
ತುಮಕೂರು ಜಿಲ್ಲೆಯ ಜನತೆಗೆ ಮೋಸ ಮಾಡಿ ಕಳ್ಳತನದಿಂದ ತೆಗೆದಿರುವ ಹೇಮಾವತಿ ಲಿಂಕ್ ಕೆನಲ್ ಎಕ್ಸ್ಪ್ರೆಸ್ ಚಾನಲ್ ಅನ್ನು ನೀವು ಸ್ಥಗಿತಗೊಳಿಸದಿದ್ದರೆ ಅದನ್ನು ನಾವು ಮುಚ್ಚೆ ಮುಚ್ಚುತ್ತೇವೆ ಇದಕ್ಕೆ ಯಾರೇ ಅಡ್ಡಿ ಬಂದರೂ ನಾವು ಸಹಿಸುವುದಿಲ್ಲ ರೈತರು ಬೀದಿಗಳಿದು ಹೋರಾಟ ಮಾಡಿದರೆ ಯಾವ ಸರ್ಕಾರವು ಇರುವುದಿಲ್ಲ ಈ ಪ್ರಜಾಪ್ರಭುತ್ವದಲ್ಲಿ ಜನರಿಂದ ಜನರಿಗೋಸ್ಕರ ಜನರೇ ಮಾಡಿದ ಸರ್ಕಾರವೇ ಅಂತಿಮ ಅದನ್ನು ನೀವು ದುರುಪಯೋಗ ಪಡಿಸಿಕೊಂಡು ನಮ್ಮ ಹೋರಾಟವನ್ನು ಹತ್ತಿಕುವ ಕೆಲಸ ಮಾಡಬೇಡಿ ಎಂದರು.
ನಮ್ಮ ಹೋರಾಟಕ್ಕೆ ಬೆಂಬಲವಾಗಿ ಹಲವಾರು ಹರ ಗುರು ಚರಮೂರ್ತಿಗಳ ಆಶೀರ್ವಾದ ಹಾಗೂ ಬೆಂಬಲವಿದೆ ನಾವು ಈಗಾಗಲೇ ಸಿ ಎಸ್ ಪುರ ಭಾಗದ ಚಾನಲ್ ಅನ್ನು ಮುಚ್ಚಿದ್ದೇವೆ ಹೇಮಾವತಿ ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ಚಾನಲ್ ಅನ್ನು ಮುಚ್ಚಲು ಜೆಸಿಬಿಗೆ ಅವಕಾಶ ಕೊಡಲಿಲ್ಲವೆಂದರೆ ರೈತರೇ ಗುದ್ದಲಿ ಹಿಡಿದು ಮುಚ್ಚುತ್ತೇವೆ ಇದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಬೇಕು ನೀವು ರೈತರ ಪರ ಇರಬೇಕೆವನಃ ಕಳ್ಳರ ಪರವಿರಬಾರದು ಏಕೆಂದರೆ ನೀವು ಸಹ ರೈತರ ಮಕ್ಕಳಾಗಿ ಇಲ್ಲಿಗೆ ಬಂದಿದ್ದೀರಿ. ರೈತರ ಕಷ್ಟ ಏನು ಎಂಬುದನ್ನು ನೀವು ತಿಳಿದಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣ, ಹೆಚ್ ನಿಂಗಪ್ಪ, ಮಸಾಲೆ ಜಯರಾಮ್, ರೈತ ಹೋರಾಟಗಾರ ತಿಪಟೂರು ಶಾಂತಕುಮಾರ್, ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಹಲವಾರು ರೈತ ಮುಖಂಡರು, ಹಾಗೂ ತುಮಕೂರು ಜಿಲ್ಲೆಯ ಸಾವಿರಾರು ಭಾಗವಹಿಸಿದ್ದರು