ಕೆರೆ ಹೂಳು ತೆಗೆಯಲು ಮಾಹಿತಿ ಪತ್ರ ಕಡ್ಡಾಯ. ಸಿ ಇ ಓ ಜಿ ಪ್ರಭು

ತುಮಕೂರು: ರೈತರು ತಮ್ಮ ಜಮೀನುಗಳಿಗೆ ಕೆರೆಯಿಂದ ಮಣ್ಣು ತೆಗೆಯುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಕಡ್ಡಾಯವಾಗಿ ಮಾಹಿತಿ ಪತ್ರವನ್ನು ಸಲ್ಲಿಸಿರಬೇಕು. ಮಾಹಿತಿ ಪತ್ರ ಸಲ್ಲಿಸಿದವರಿಗೆ ಮಾತ್ರ ಕೆರೆ ಮಣ್ಣು ತೆಗೆಯಲು ಅನುಮತಿ ನೀಡಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

oplus_2

ಜಿಲ್ಲೆಯ ವಿವಿಧ ಕೆರೆಗಳ ಹೂಳು ತೆಗೆಯುವ ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಎಲ್ಲ ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ರೈತರ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೂಳು ತೆಗೆಯಬೇಕು. ಕೆರೆಯ ಏರಿಯ ತಳಭಾಗದಿಂದ 10 ಮೀಟರ್ ಅಂತರವನ್ನು ಕಾಯ್ದಿರಿಸಿ ನಂತರದ ಜಾಗದಲ್ಲಿ ಹೂಳು ತೆಗೆಯಲು ಹಾಗೂ ಕೆರೆಯ ಮೇಲ್ಮೈ ಭಾಗದ 3 ಅಡಿ ಮಾತ್ರ ಹೂಳು ತೆಗೆಯಲು ಅವಕಾಶ ನೀಡಬೇಕು ಎಂದರು.

oplus_2

ನಿಯಮಗಳನ್ನು ಉಲ್ಲಂಘಿಸಿ ಕೆರೆಗಳಿಂದ ಹೂಳು/ಮಣ್ಣು ತೆಗೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರಲ್ಲದೆ ಈಗಾಗಲೇ ನರೇಗಾ ಯೋಜನೆಯಡಿ ಅಮೃತ ಸರೋವರ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಕೆರೆ ಅಭಿವೃದ್ಧಿ, ಹೂಳು ತೆಗೆಯುವುದು, ಹಸಿರೀಕರಣ, ಫೀಡರ್ ಕಾಲುವೆಗಳ ಅಭಿವೃದ್ಧಿ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *