ಗುಬ್ಬಿ ಸುದ್ದಿ
ಸಿ ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ ಎಸ್ ಪುರ ನಾಡ ಕಚೇರಿಯಲ್ಲಿ ರೈತ ನಾಗರಾಜ್ ಬಳಿ 10ಸಾವಿರ ಹಣವನ್ನು ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರಾಪ್ ಮಾಡಲಾಗಿದೆ.
2023 ರಲ್ಲಿ ತುಮಕೂರು ಟೂಡದಲ್ಲಿ ಕಂದಾಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದ್ದ ಅಧಿಕಾರಿ ಇಂದು ತಾಲೂಕಿನ ಸಿ ಎಸ್ ಪುರ ನಾಡ ಕಚೇರಿಯಲ್ಲಿ ಗದ್ದೆಹಳ್ಳಿ ರೈತ ನಾಗರಾಜ್ ಅವರ ಬಳಿ 10 ಸಾವಿರ ಹಣವನ್ನು ಬೇಡಿಕೆ ಇಟ್ಟಿದ್ದರು. ಉಂಗ್ರ ಗ್ರಾಮದ ಸರ್ವೆ 201/1 ರ ಜಮೀನನ್ನು ಚಿಕ್ಕಯಲ್ಲಯ್ಯ ತನ್ನ ಪುತ್ರ ನಾಗರಾಜ್ ಅವರಿಗೆ ಹಕ್ಕು ಖುಲಾಸೆ ಮಾಡಿಕೊಡಲು ಮೂರು ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದ ವೇಳೆ ಹಣದ ಬೇಡಿಕೆ ಇಡುವ ಜೊತೆಗೆ ಸ್ಥಳ ಮಾಜರ್ ಮಾಡಬೇಕು ಎಂದು ಹೇಳಿದ ಹಿನ್ನೆಲೆ ಇಂದು ಮಧ್ಯಾಹ್ನ ವೇಳೆ ನಾಡ ಕಚೇರಿಗೆ ಆಗಮಿಸಿದ ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಬಂದ ವೇಳೆ ನಾಗರಾಜ್ ಅವರು 10 ಸಾವಿರ ಹಣವನ್ನು ನೀಡುವ ವೇಳೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಿಡಿದು ತಮ್ಮ ವಶಕ್ಕೆ ಪಡೆಯಲಾಯಿತು.
ಇಂದು ಮದ್ಯಾಹ್ನದ ವೇಳೆಗೆ ಟ್ರಾಪ್
ಎರಡನೇ ಬಾರಿಗೆ ಲೋಕಾಯುಕ್ತರಿಗೆ ಬಲಿಯಾದ ಕಂದಾಯ ನಿರೀಕ್ಷಕ
ಗದ್ದೆಹಳ್ಳಿ ನಾಗರಾಜ್ ತಂದೆಯಿಂದ ಪೌತಿ ಖಾತೆ ವಿಚಾರವಾಗಿ ಸಿ ಎಸ್ ಪುರ ನಾಡ ಕಛೇರಿಗೆ ಅರ್ಜಿ ಸಲ್ಲಿಸಿ ಕಂದಾಯ ನೀರಿಕ್ಷಕ ನರಸಿಂಹ ಮೂರ್ತಿ ಯವರ ಬಳಿ ಜಮಿನಿನ ಖಾತೆ ಮಾಡಿಕೋಡುವಂತೆ ಕೇಳಿಕೊಂಡಾಗ ಅತನು ಹಣಕ್ಕೆ ಬೇಡಿಕೆ ಇಟ್ಟು ಡಿಮ್ಯಾಂಡ್ ಮಾಡಿದ ಬಳಿಕ ಜಮೀನಿನ ಸ್ಥಳಕ್ಕೆ ತೆರಳಲು 10 ಸಾವಿರ ಡಿಮ್ಯಾಂಡ್ ಮಾಡಿದ್ದು, ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲು ಆಗಿದ್ದು ಇಂದು ಅದರ ದೂರಿನ ಆಧಾರದ ಮೇಲೆ ಮದ್ಯಾಹ್ನದ ವೇಳೆಗೆ ನಾಡ ಕಚೇರಿಯಲ್ಲಿ ಹಣ ಪಡೆಯುವ ವೇಳೆ ಮಾನ್ಯ ಎಸ್ ಪಿ ವಾಲೀಮ್ ಪಾಷಾ , ಡಿ ವೈ ಎಸ್ ಪಿ ಉಮಾಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಸುರೇಶ್ ಕೆ, ಮಹಮದ್ ಸಲೀಂ, ಮತ್ತು ಶಿವರುದ್ರಪ್ಪ ಮೇಟಿ ರವರ ತಂಡ ಕಾರ್ಯಪ್ರೌವೃತ್ತರಾಗಿ ಆರೋಪಿಯನ್ನು ಬಂದಿಸಿ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದ ಅಧಿಕಾರಿಗಳು.
ಗದ್ದೆಹಳ್ಳಿ ಗ್ರಾಮದ ರೈತ ನಾಗರಾಜ್ ಮಾತನಾಡಿ ಕಳೆದ ಮೂರು ದಿನದ ಹಿಂದೆ ತಮ್ಮ ತಂದೆ ನನಗೆ ಉಂಗ್ರ ಗ್ರಾಮದ ಸರ್ವೆ ನಂಬರ್ 201/1 ಜಮೀನನ್ನು ಹಕ್ಕು ಖುಲಾಸೆ ಮಾಡಿಸಿಕೊಳ್ಳಲು ಸಿ ಎಸ್ ಪುರ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ ವೇಳೆ ಆರ್ ಐ ಸ್ಥಳ ತನಿಖೆ ಮಾಡಬೇಕು ಎಂದು 10ಸಾವಿರ ಹಣವನ್ನು ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು ನಾಡ ಕಚೇರಿಗೆ ಆಗಮಿಸಿ 10 ಸಾವಿರ ಹಣ ನೀಡಿದ ಬಳಿಕ ಇನ್ನು 10 ಸಾವಿರ ಹಣವನ್ನು ನೀಡುವಂತೆ ಬೇಡಿಕೆ ಹಿಡುವ ವೇಳೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸ್ ತಕ್ಷಣವೇ ಅವರನ್ನು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಹಲವು ರೈತರ ಬಳಿ ಬೇಡಿಕೆ ಇಟ್ಟಿದ್ದರು, ಹಣ ನೀಡದೆ ಹೋದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿರಲಿಲ್ಲ ಎಂದು ಆರೋಪಿಸಿದರು.