ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತೋತ್ಸವ ಹಾಗೂ ಹುಟ್ಟುಹಬ್ಬ ಆಚರಣೆ

ತಿಪಟೂರು: ಬಸವ ಜಯಂತಿ ಅಂಗವಾಗಿ,ತಿಪಟೂರು ತಾಲೂಕು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಬಿ.ಟಿ. ಕುಮಾರ್ ಹುಟ್ಟು ಹಬ್ಬದ ಅಂಗವಾಗಿ

ಇವರ,ಸೇವಾರ್ಥದಲ್ಲಿ ಕ ಲಾಕೃತಿ (ರಿ,) ತಿಪಟೂರು ಇವರ ವತಿಯಿಂದ ನಿತ್ಯ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ತಿಪಟೂರು ನಗರದ ಕೆ.ಆರ್. ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮ ಮತ್ತು ಕೋಟೆಯ ಶ್ರೀ ಶಾರದಾಂಬ ಹಿರಿಯರ ಮನೆ (ವೃದ್ಧಾಶ್ರಮಕ್ಕೆ) ಊಟದ ವ್ಯವಸ್ಥೆ ಮಾಡಿ,ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ವಿಶೇಷವಾಗಿ ಜನ್ಮದಿನ ಆಚರಿಸಿಕೊಂಡರು.

ಹಿರಿಯ ಪತ್ರಕರ್ತ ತಿಪಟೂರು ಕೃಷ್ಣ,ಹುಚ್ಚಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಬಿ. ಬಸವರಾಜ್ ಮತ್ತು ಕಾರ್ಮಿಕ ಮುಖಂಡ ಗೋವಿಂದರಾಜ್ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲಾಕೃತಿಯ ಎಂ.ಆರ್.ನಿರಂಜನ್,ದಲಿತ ಮುಖಂಡ ನಾಗತಿಹಳ್ಳಿ ಕೃಷ್ಣಮೂರ್ತಿ,ಬೆಸ್ಕಾಂ ನರಸಿಂಹ ಮೂರ್ತಿ,ಸೋಮಶೇಖರ್, ಎಸ್ಡಿಎಂಸಿ ಅಧ್ಯಕ್ಷ ಜಗದೀಶ್, ಶಂಕರ್,ಸಂಘಟನೆಯ ಪದಾಧಿಕಾರಿಗಳಾದ ಸಿದ್ದೇಶ್, ಲೋಕೇಶ್,ಕವಿತಾ,ಧರಣೇಶ್ ಅನಿಲ್,ನವೀನ್,ಪತ್ರಕರ್ತರಾದ ಭಾನುಪ್ರಕಾಶ್,ಸಿದ್ಧೇಶ್, ಮಿಥುನ್,ರವಿ ಮತ್ತು ಸೋಮು ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಕಲಾಕೃತಿ ಸದಸ್ಯರುಗಳು, ವೃದ್ಧಾಶ್ರಮದ ಹಿರಿಯ ನಾಗರೀ
ಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *