ಗುಬ್ಬಿ ಬ್ಲಾಕ್ ಕಾಂಗ್ರೇಸ್ ನ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನರಸಿಂಹಮೂರ್ತಿ.ಎ ನೇಮಕ

ಗುಬ್ಬಿ : ತಾಲ್ಲೂಕು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನರಸಿಂಹಮೂರ್ತಿ.ಎ ರವರನ್ನು ಗುಬ್ಬಿ ಬ್ಲಾಕ್ ಪರಿಶಿಷ್ಟ ಪಂಗಡದ (ಎಸ್.ಟಿ) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಪಟ್ಟಣದ ನಾಯಕ ಸಮುದಾಯದವರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹಮೂರ್ತಿ ಯವರು ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವರಾದ ಎಸ್. ಆರ್ ಶ್ರೀನಿವಾಸ್ ರವರು ಸಂಘಟನಾ ಶಕ್ತಿಯನ್ನು ಗುರುತಿಸಿ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಅಗತ್ಯವಿರುವ ಸೌಕರ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವೆ ಎಂದ ಅವರು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಕೆಲಸ ಮಾಡಲಾಗುವುದು. ಹಾಗೂ ಸುಮಾರು ವರ್ಷಗಳಿಂದ ಶಾಸಕರ ಜೊತೆಯಲ್ಲಿ ಇರುವುದರಿಂದ ನನಗೆ ಈ ಹುದ್ದೆಯನ್ನು ನೀಡರುವ ಶಾಸಕರಿಗೆ ನಾನು ಚಿರಋಣಿಯಾಗಿರುತ್ತೇನೆ. ಹಾಗೂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಎನ್.ಅಡವಿ ಸ್ವಾಮಿ ಮಾತನಾಡಿ ಸಮುದಾಯದ ಹಿರಿಯರಾದ ನರಸಿಂಹಮೂರ್ತಿಯವರ ಪ್ರಾಮಾಣಿಕತೆ ಹಾಗೂ ಸಂಘಟನಾಶಕ್ತಿಯನ್ನು ಗುರುತಿಸಿ ಶಾಸಕರ ಶಿಫಾರಸ್ಸಿನ ಮೇರೆಗೆ ತಾಲ್ಲೂಕು ಎಸ್ ಟಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಪ್ರಶಂಸನೀಯ.ಇಡೀ ಸಮುದಾಯ ಒಗ್ಗಟ್ಟಿನಿಂದ ಅವರ ಬೆನ್ನೆಲುಬಾಗಿ ನಿಂತು ಪಕ್ಷ ಹಾಗೂ ಸಮುದಾಯದ ಸಂಘಟನೆಗೆ ಒತ್ತು ನೀಡುವೆವು ಎಂದು ಹೇಳಿದರು.

 

ನಾಯಕ ಸಮಾಜದ ಕಾರ್ಯದರ್ಶಿ ಹೆಚ್.ಆರ್. ರಾಮಚಂದ್ರಯ್ಯ ಮಾತನಾಡಿ ಸಮುದಾಯದವರ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗುವ ನರಸಿಂಹಮೂರ್ತಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಮುದಾಯಕ್ಕೆ ಹೆಚ್ಚಿನ ಬಲ ತುಂಬಿದೆ.ಇದಕ್ಕೆ ಕಾರಣರಾಗಿರುವ ಜನಪ್ರಿಯ ಶಾಸಕರನ್ನು ಸಮುದಾಯದ ಪರವಾಗಿ ಅಭಿನಂದಿಸುವೆವು. ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಇದ್ದಲ್ಲಿ ಸಮುದಾಯಕ್ಕೆ ಅಗತ್ಯ ಇರುವ ಸೌಕರ್ಯಗಳನ್ನು ಪಡೆದು ರಾಜಕೀಯ ಮತ್ತು ಸಾಮಾಜಿಕವಾಗಿ ಬಲಗೊಳ್ಳಲು ಸಾಧ್ಯವಾಗುವುದು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಸಮುದಾಯದ ಯಜಮಾನರಾದ ಶಿವಣ್ಣ, ಮುಖಂಡರಾದ ವೆಂಕಟೇಶ್, ನಾರಾಯಣಪ್ಪ,ಸತೀಶ್, ಕೃಷ್ಣಪ್ಪ, ,ಗಂಗಾಧರ,ಯೋಗೀಶ್, ರಾಮಣ್ಣ, ,ಮಂಜುನಾಥ್, ರಂಗನಾಥ್, ಶಿವಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *