ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯ :: ಡಾ.ಶಶಿಧರ್*

ತುರುವೇಕೆರೆ: ಕಾಯಕವೇ ಕೈಲಾಸ ಎಂದು ಕಾಯಕದಲ್ಲಿ ಭಗವಂತನ ಕಂಡ ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯವಾದು ಎಂದು ವೈದ್ಯ

ಡಾ. ಎಂ.ಶಶಿಧರ್ ತಿಳಿಸಿದರು.

ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿನ ಬೆಂಗಳೂರು ಕ್ಲಿನಿಕ್ ನಲ್ಲಿ ಆಯೋಜಿಸಿದ್ದ 891ನೇ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ಭಾರತದ 12ನೇ ಶತಮಾನದ ಕನ್ನಡದ ಮಹಾ ತತ್ವಜ್ಞಾನಿಗಳು. ವಚನಗಳ ಮೂಲಕ ಜಾತಿ, ಮತ, ಪಂಥ, ಧರ್ಮಗಳ‌ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಾಮಾಜಿಕ ಸುಧಾರಕರು. ಅವರ ಬದುಕು, ಕಾಯಕ ನಿಷ್ಠೆ, ವಚನಗಳು ನಮ್ಮ ಬದುಕಿಗೆ ಹೊಸ ಚೈತನ್ಯ, ದಾರಿದೀಪ, ಸ್ಪೂರ್ತಿ ಎಂದರು.

ಬಿ.ಜಿ.ನಗರದ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಸಂಶೋಧನಾ ಆಸ್ಪತ್ರೆ ವೈದ್ಯ ಡಾ.ಪಿ. ಶ್ರೀನಿವಾಸ್ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಕಾಯಕವೇ ಕೈಲಾಸ ಎಂಬ ಸಿದ್ಧಾಂತದಂತೆ ನಡೆಯಬೇಕು ಎಂದರು.

ವೈದ್ಯೆ ಡಾ. ಶ್ವೇತಾ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆಂದರೆ ಅದಕ್ಕೆ ತಳಪಾಯ ಹಾಕಿದವರು ಬಸವಣ್ಣನವರು. ಮಹಿಳಾ ಸಬಲೀಕರಣ, ಸಮಾನತೆಯಲ್ಲಿ ಬಸವಣ್ಣನವರ ‌ಪಾತ್ರ ಮತ್ತು ಸಾಮಾಜಿಕ ಸುಧಾರಿಕೆಯಲ್ಲಿ ಅತ್ಯಂತ ‌ ಪ್ರಮುಖವಾದದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷ್ಣ ಮೆಡಿಕಲ್ ಸ್ಟೋರ್ ಮಾಲೀಕ ಮಂಜಣ್ಣ, ಆಸ್ಪತ್ರೆಯ ಸಿಬ್ಬಂದಿಗಳಾದ ಶಕುಂತಲಾ, ಲಾವಣ್ಯ, ಮೇಘ, ಸೇರಿದಂತೆ ಮುಂತಾದವರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Leave a Reply

Your email address will not be published. Required fields are marked *