ತುರುವೇಕೆರೆ: 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಟ್ಟಣದ ಜೆ.ಪಿ. ಆಂಗ್ಲ ಪ್ರೌಢಶಾಲೆಗೆ ಶೇ.98.50 ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ತುಕಾರಾಮ್ ತಿಳಿಸಿದರು.
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಶಾಲೆಯಿಂದ 112 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 110 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 60 ಮಂದಿ ಪ್ರಥಮ, 22 ಮಂದಿ ದ್ವಿತೀಯ ಹಾಗೂ 5 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೆ.ಎ.ಗಾನವಿ(603), ಎಂ.ಜೆ. ಜಮುನಾ (603), ಎ.ಎನ್.ನಿಸರ್ಗ(602), ಎಲ್.ಎಸ್.ಸುಮನ್ (600), ನವ್ಯ ಸಿ.ಎಂ.(590), ನಂದೀಶ್ ಎಲ್.ಬಿ.(584), ಜಯಸುಧ(582), ರೋಹಿತ್(582), ಭೂಮಿಕ(578), ದಿವ್ಯ(578), ದುಶ್ಯಂತ್ ಕುಮಾರ್(568), ಇಂಚರ(568), ದರ್ಶನ್(554), ಲಕ್ಷ್ಮಿದೇವಿ (554), ಜಯಂತ್ (553), ಪುನೀತ್(552), ಅಕ್ಷತ(550), ಸಿಂಚನ(550), ಮೋನಿಷಾರಾಜ್(540), ಮೋನಿಕಾಗೌಡ(537), ಹೇಮಂತ್ ಗೌಡ(535), ಚಿನ್ಮಯ(533) ಅಂಕ ಗಳಿಸಿದ್ದಾರೆ.
ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳನ್ನು ಗೆಳೆಯರ ಬಳಗದ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ, ಶಾಲೆಯ ಶಿಕ್ಷಕ ವೃಂದ ಅಭಿನಂದಿಸಿದೆ ಎಂದು ತಿಳಿಸಿದ್ದಾರೆ.
- ವರದಿ: ಗಿರೀಶ್ ಕೆ ಭಟ್, ತುರುವೇಕೆರೆ