ಶ್ರೀ ಸಿದ್ದಗಿರಿ ಶನೇಶ್ವರ ಸ್ವಾಮಿಯ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮ

ಶ್ರೀ ಸಿದ್ದಗಿರಿ ಶನೇಶ್ವರ ಸ್ವಾಮಿಯ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮ ಆಯೋಜನೆ

ಕಲ್ಪತರ ನಾಡು ಕಲಾವಿದರ ಬೀಡು ಎಂದು ಖ್ಯಾತಿ ಪಡೆದಿರುವ ತುಮಕೂರು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಶಿಕ್ಷಣ ಅನ್ನದಾಸೋಹ ರಂಗ ಚಟುವಟಿಕೆ ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಈ ಕ್ಷೇತ್ರದಲ್ಲಿ ರಂಗ ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಅನೇಕ ಕಾರ್ಯಕ್ರಮಗಳು ದಿನನಿತ್ಯ ಒಂದಲ್ಲ ಒಂದು ರೀತಿಯಾಗಿ ನಡೆಯುತ್ತಾ ಬಂದಿತ್ತು ಅದೇ ರೀತಿಯಾಗಿ ತುಮಕೂರು ತಾಲೂಕಿನ ಬೊಮ್ಮನಹಳ್ಳಿ ಕೆಸರುಮಡು ಗ್ರಾಮದಲ್ಲಿ ಶ್ರೀ ಸಿದ್ದಗಿರಿ ಶನೇಶ್ವರ ಸ್ವಾಮಿ ಚಾರಿಟಬಲ್ ರಿ ಶ್ರೀ ಭೈರವ ಕಲಾಸಂಘ ರಿ ಸದಾಶಿವನಗರ ತುಮಕೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ತುಮಕೂರು ಇವರುಗಳ ಸಂಯುಕ್ತಶ್ರಯದಲ್ಲಿ ದಿನಾಂಕ 11.05 2024ರ ಶನಿವಾರದಂದು ಶ್ರೀ ಸಿದ್ದಗಿರಿ ಶನೇಶ್ವರ ಸ್ವಾಮಿಯವರ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಸವ ಜಯಂತಿಯ ಪ್ರಯುಕ್ತವಾಗಿ ಶ್ರೀ ಶನೇಶ್ವರ ಸ್ವಾಮಿ ಸಭಾಂಗಣದಲ್ಲಿ ಸಂಜೆ ಆರು ಗಂಟೆಗೆ ಸರಿಯಾಗಿ ಶ್ರೀ ಭೈರವೇಶ್ವರ ಕಲಾಸಂಘ ರಿ ವತಿಯಿಂದ ಸುಗಮ ಸಂಗೀತ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೇಶ್ವರ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ ಜನಾರರ್ಧನ್ ರವರು ವಹಿಸಲಿದ್ದು ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಕಲಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಶ್ರೀ ಭೈರವ ಕಲಾಸಂಘದ ಕಾರ್ಯದರ್ಶಿಯಾದಂತಹ ಪುಟ್ಟ ಬೋರಯ್ಯನವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *