ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು.

ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿರುವುದನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಆರತಿ ಬಿ. ಅವರಿಗೆ ಮನವಿ ಪತ್ರ ಸಲ್ಲಿಸಿದ ಜೋಗಿಹಳ್ಳಿ ಗ್ರಾಮಸ್ಥರು.

ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರ ಜಮೀನನ್ನು ಮಳೆನಹಳ್ಳಿ ಹಾಗೂ ಕುಂಟರಾಮನಹಳ್ಳಿ ಗ್ರಾಮಕ್ಕೆ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡಲು ಮುಂದಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಜೋಗಿಹಳ್ಳಿ ಗ್ರಾಮಸ್ಥರು ಇಂದು ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಚಿಂತರನಹಳ್ಳಿ ಗ್ರಾಮ ಬೆಚಾರಕ್ ಗ್ರಾಮದ ಸರ್ವೆ ನಂ.25 ರಲ್ಲಿ ಮೂರು ಎಕರೆ ಏಳು ಗುಂಟೆ ಜಮೀನಿನಲ್ಲಿ ಪಕ್ಕದ ಗ್ರಾಮದ ನಿವೇಶನ ರಹಿತರಿಗೆ ಜಮೀನು ಹಂಚಿಕೆ ಮಾಡುವುದನ್ನು ನಿಲ್ಲಿಸುವಂತೆ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದು, ಈ ಜಮೀನಿನಲ್ಲಿ ಈಗಾಗಲೇ ಕೊಲ್ಲಾಪುರದಮ್ಮ ದೇವಸ್ಥಾನ ಹಾಗೂ ಪ್ಲೆಗಿನಮ್ಮ ದೇವಾಲಯ, ಬಸವಣ್ಣನ ಗುಡ್ಡೆ ಇದ್ದು, ಈ ಜಾಗ ದೇವರ ಶಕ್ತಿ ಕೇಂದ್ರಗಳಾಗಿದ್ದು, ಪ್ರತಿ ವರ್ಷವೂ ನಮ್ಮ ಗ್ರಾಮಸ್ಥರಿಂದ ಪೂಜಾ ಕೈಂಕರ್ಯ, ಆರತಿ, ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಬೇರೆ ಗ್ರಾಮದವರಿಗೆ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಗ್ರಾಮಸ್ಥರು ತಹಶೀಲ್ದಾರ್ ಬಳಿ ಮನವಿ ಮಾಡಿದರು.

ಪ್ರಸ್ತುತ ಜಮೀನಿನ ಮೇಲ್ಬಾಗದಲ್ಲಿ ಲಿಂಗಯ್ಯನ ಕಟ್ಟೆ ಇದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು ಅಶ್ರಯವಾಗಿದೆ. ಜೋಗಿಹಳ್ಳಿ ಸುತ್ತಮುತ್ತಲಿನ ಜಾನುವಾರುಗಳಿಗೆ ನೀರಿನ ಸೌಲಭ್ಯವಿದ್ದು, ಸದರಿ ಜಮೀನನ್ನು ಬೇರೆ ಗ್ರಾಮಸ್ಥರ ವಸತಿ ರಹಿತರಿಗೆ ಹಂಚಿಕೆ ಮಾಡಿದ್ದಲ್ಲಿ ನಮ್ಮ ಗ್ರಾಮದ ಜಾನುವಾರುಗಳಿಗೆ ಸಮಸ್ಯೆಯೂ ಉದ್ಭವಿಸಲಿದೆ. ಅಲ್ಲದೆ ಧಾರ್ಮಿಕ ಸಂಪ್ರದಾಯಗಳಿಗೆ  ಸಂಪ್ರದಾಯ ಆಚರಣೆಗೂ ಸಹ ಅಡಚನೆಯಾಗಲಿದೆ. ಅಲ್ಲದೆ ಈ ಗ್ರಾಮದಲ್ಲಿ ಬಹಳಷ್ಟು ಕುಟುಂಬಗಳು ಬಡತನ ರೇಖೆಯಲ್ಲಿದ್ದು, ಇವರು ಸಹ ನಿವೇಶನ ರಹಿತರಾಗಿದ್ದು, ಅವರಿಗೆ ನಿವೇಶನವನ್ನು ಮಂಜೂರು ಮಾಡಿಕೊಡಲೀ. ನೀಡಿರುವ ಆದೇಶವನ್ನು ವಾಪಸ್ಸು ಪಡೆದು ಈ ಹಿಂದೆ ಇದ್ದ ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಅನುವು ಮಾಡಿಕೊಡುವಂತೆ ತಹಶೀಲ್ದಾರ್ ಅವರಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು ಜೋಗಿಹಳ್ಳಿ ಗ್ರಾಮಸ್ಥರಲ್ಲಿ ಪ್ರಸ್ತುತ ಸ್ಥಿತಿಯ ಮನವರಿಕೆ ಮಾಡಿಕೊಟ್ಟು, ಈ ಬಗ್ಗೆ ಕಂದಾಯ ನಿರೀಕ್ಷಕರು ಹಾಗೂ ಸೆಕ್ರೇಟರಿಯನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಿಸಿ ವರದಿ ಪಡೆಯುತ್ತೇನೆ. ಬಳಿಕ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಹಿರಿಯ ಹಾಗೂ ಕಿರಿಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *