ದಿನಾಂಕ : 04.04.2024ರ ಬೆಳಿಗ್ಗೆ.6.10ರ ಸಮಯದಲ್ಲಿ ಲಾರಿ ಸಂಖ್ಯೆ: KA010AL4437ರಲ್ಲಿ ಅನುಮಾನಸ್ಪದ ಸರಕು ಸಾಗಿಸುತ್ತಿರುವಾಗ ಶ್ರೀ.T.R.ಕೃಷ್ಣಕುಮಾರ್ , ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು ಇವರ ನಿರ್ದೇಶನದ ಮೇರಿಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ತುಮಕೂರಿನ ಶ್ರೀ.ನಾಗರಾಜ.C.ಗಂಗನಗೌಡರ್ & ಅವರ ತಂಡ (ನಾಗರಾಜು.S., CTO., & ಹರ್ಷಿತ.CTI.,) ರಂಗಾಪುರ-ಅಂತರಸಹಳ್ಳಿ ಸರ್ವೀಸ್ ರಸ್ತೆ ಹತ್ತಿರ ತಡೆ ಹಿಡಿದು ದಾಖಲಾತಿ ಪರಿಶೀಲಿಸಿದಾಗ ದಾಖಲಾತಿ ಸರಕಾದ Calcium Carbonate ಮತ್ತು ವಾಸ್ತವ ಸರಕಾದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಗಂಗಾವತಿಯಿಂದ ತುಂಬಿಕೊಂಡು ಸೇಲಂ ತಮಿಳುನಾಡಿಗೆ ಸಾಗಿಸುತ್ತಿದ್ದಾಗ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿ ನಂತರ, ಕೃಷಿ ಇಲಾಖೆಗೆ ಸ್ಪಷ್ಠೀಕರಣಕ್ಕಾಗಿ ಮಾಹಿತಿ ಕೋರಿಕೊಂಡಾಗ ದಾಖಲಾತಿಗಳನ್ನು ಪರಿಶೀಲಿಸಿ ಶ್ರೀ.ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-1), ತುಮಕೂರು ಇವರು ವಾಣಿಜ್ಯ ತೆರಿಗೆ ಇಲಾಖೆಗೆ ವಿವರಣೆ ನೀಡಿ, ಸದರಿ ಸಾಗಾಣಿಕೆದಾರರು, ಸರಬರಾಜುದಾರರು, ವಿತರಕರು ಮತ್ತು ಖರೀದಿದಾರರು ರಸಗೊಬ್ಬರ (ನಿಯಂತ್ರಣ) ಆದೇಶ 1985ರ ಕ್ಲಾಸ್ 25(1) & ರಸಗೊಬ್ಬರ ಸಾಗಾಣಿಕೆ (ನಿಯಂತ್ರಣ) ಆದೇಶ 1973ರ ಕ್ಲಾಸ್ 3 & 4 ಹಾಗೂ ಅಗತ್ಯ ವಸ್ತುಗಳ ಅಧಿನಿಯಮ 1955ರ ಕಲಂ.3ರ ಉಲ್ಲಂಘನೆ ಮಾಡಿ ಕೃಷಿ ಬಳಕೆಗೆ ಮೀಸಲಾದ ಸರ್ಕಾರದ ಸಹಾಯಧನದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು (45 ಕೆ.ಜಿ., ತೂಕದ 560 ಬ್ಯಾಗ್ ಗಳ ಅಂದಾಜು ಮೌಲ್ಯ 12.04 ಲಕ್ಷ ) ಕೈಗಾರಿಕಾ ಉದ್ದೇಶಕ್ಕೆ ಅಂತರರಾಜ್ಯ ಸಾಗಾಣಿಕೆ ನಿಷೇದವಿದ್ದರೂ ಸಹ ಸಾಗಾಣಿಕೆ ಮಾಡುತ್ತಿರುವುದನ್ನು ಹೆಚ್ಚಿನ ತನಿಖೆ ಕೈಗೊಳ್ಳುವ ಸಲುವಾಗಿ ಮತ್ತು ಸಂಬಂಧಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಇಲಾಖಾ ವಶಕ್ಕೆ ನೀಡಲು ಮನವಿ ಸಲ್ಲಿಸಿದ್ದರು. ತದ ನಂತರ ವಾಣಿಜ್ಯ ತೆರಿಗೆ ಇಲಾಖೆಯು GST & ದಂಡ ಶುಲ್ಕ ರೂ.100804/-(ರೂ.ಒಂದು ಲಕ್ಷದ ಎಂಟು ನೂರ ನಾಲ್ಕು ಮಾತ್ರ) ಲಾರಿ ಮಾಲೀಕರಿಂದ ಪಾವತಿಸಿದ ನಂತರ ದಿನಾಂಕ : 03.05.2024ರಂದು ಕೃಷಿ ಇಲಾಖೆ ವಶಕ್ಕೆ ಹಸ್ತಾಂತರ ಮಾಡಿರುತ್ತಾರೆ. ಸದರಿ ದಿನದಂದು ಲಾರಿ ಸಹಿತ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ತುಮಕೂರಿನ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ ಕಾರಣ ಮೊಕದ್ದಮೆ ಸಂಖ್ಯೆ : FIR 110/24 ದಾಖಲಾಗಿದ್ದು, ಪೋಲೀಸ್ ಇಲಾಖೆಯು ಹೆಚ್ಚಿನ ತನಿಖೆ ಕೈಗೊಳ್ಳಲಿದ್ದಾರೆ.
ಶ್ರೀ.ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ-1), ಜಂಟಿ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ರವರು ದೂರು ನೀಡಿದ್ದರ ಮೇರೆಗೆ ಶ್ರೀ.ಮೋಹನ್, ಠಾಣಾಧಿಕಾರಿಗಳು (PSI), ತುಮಕೂರು ಗ್ರಾಮಾಂತರ ಠಾಣೆ ಮೊಕದ್ದಮೆ ಹೂಡಿರುತ್ತಾರೆ. ಜೈಪ್ರಕಾಶ್ ಮತ್ತು ನಾಗರಾಜ ಪೋಲೀಸ್ ಆರಕ್ಷಕರು, ಶ್ರೀ.ಅಶ್ವತ್ಥನಾರಾಯಣ.ವೈ., ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ-2) , ಶ್ರೀ.ರವಿಕುಮಾರ್, ಕಾರ್ಯದರ್ಶಿಗಳು, TAPCMS ತುಮಕೂರು ಮತ್ತು ಲಾರಿ ಚಾಲಕರು ಪಂಚನಾಮೆಯಲ್ಲಿ ಭಾಗವಹಿಸಿದ್ದರು.