ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ಕೂಡಲೇ ನೂತನ ಬೋರ್ವೆಲ್ ಕೊರೆಸಿದ ಗುಬ್ಬಿ ತಾಲೂಕು ಆಡಳಿತ

 

ಗುಬ್ಬಿ ತಾಲೊಕು ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರೆಹಳ್ಳ ಕಾವಲ್ ನಲ್ಲಿ ಕಳೆದ 01 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಕೊಳವೆ ಬಾವಿಯಲ್ಲಿ ನೀರು ಬರದೇ ಇದ್ದ ವೇಳೆ ರೀ ಬೋರ್ವೆಲ್ ಕೊರೆಸಿದರೂ ಸಹ ನೀರು ಬರುತ್ತಿರಲಿಲ್ಲ. ಕೊರೆದಿದ್ದ ಕೊಳವೆ ಬಾವಿಯಲ್ಲಿ ಯಂತ್ರೋಪಕರಣಗಳು ಕಳಚ ಬಿದ್ದ ಕಾರಣ ಕುಡಿಯುವ ನೀರಿಗೆ ಬಿದರೆಹಳ್ಳ ಕಾವಲ್ ಗ್ರಾಮಸ್ಥರಿಗೆ ಸಮಸ್ಯೆಯಾದ ಹಿನ್ನೆಲೆ ಕುಡಿಯುವ ನೀರಿಗಾಗಿ ಹೊಸ ಕೊಳವೆ ಬಾವಿ ಹಾಕಿಸಿ ಕೊಡಬೇಕು ಎಂದು ಗ್ರಾಮಸ್ಥರು ರಸ್ತೆಗೆ ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿ
ನೂತನ ಕೊಳವೆ ಬಾವಿ ಹಾಕಿಸಿಕೊಡದೆ ಹೋದರೆ ಇಲ್ಲೇ ಕುಳಿತು ತೀವ್ರ ಸ್ವರೂಪದ ಪ್ರತಿಭಟನೆ ಮಾಡುತ್ತೇವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಳೆದ ಒಂದು ತಿಂಗಳಿನಿಂದ ಬಿದರೆಹಳ್ಳ ಕಾವಲ್ ನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಜಾನುವಾರುಗಳಿಗೂ ನೀರಿನ ಸಮಸ್ಯೆಯಾಗಿದ್ದು ಇದ್ದ ಕೊಳವೆ ಬಾವಿಗೆ ರಿ ಬೋರ್ವೆಲ್ ಮಾಡಿಸಿದರೂ ನೀರು ಬರುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ನೂತನ ಕೊಳವೆಬಾವಿ ಕೊರೆಸಿ ಜನರಿಗೆ, ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಕುಡಿಯುವ ನೀರು ಕಲ್ಪಿಸಬೇಕು. ಇಲ್ಲದೆ ಹೋದರೆ ಕುಡಿಯುವ ನೀರಿಗಾಗಿ ಹೋರಾಟ ಮಾಡಲಾಗುವುದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮುಖಂಡರು

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ.ಅವರು ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದ ನಂತರ ಎಇಇ ನಟರಾಜ್ ಇಓ ಪರಮೇಶ್ ಕುಮಾರ್ ಚರ್ಚೆ ನಡೆಸಿ ಸಮಸ್ಯೆಗೆ ಪರ್ಯಾಯ ಮಾರ್ಗಕ್ಕೆ ಪ್ರಯತ್ನ ಪಟ್ಟು, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ಸು ತೆಗೆದುಕೊಳ್ಳಲು ಮನವಿ ಮಾಡಿದರೂ ಸಹ ಜಗ್ಗದೇ ಇದ್ದ ವೇಳೆ ಈ ಹಿಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ಬಿದರಹಳ್ಳ ಕಾವಲ್ ನ ಕೊಳವೆ ಬಾವಿಗೆ ಎಸ್ ಡಿ ಆರ್ ಎಫ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗೆ ರಿ ಬೋರ್‌ವೆಲ್ ಮಾಡಲು ಅನುಮೋದನೆ ನೀಡಲಾಗಿದ್ದು, ಈಗ ರಿ ಬೋರ್ವೆಲ್ ಕೊರೆದರೂ ನೀರು ಬರುತ್ತಿಲ್ಲ. ಈ ಸಂಬಂಧ ಬಿದರೆಹಳ್ಳ ಕಾವಲ್ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರೂ ಬಗ್ಗದ ಪ್ರತಿಭಟನಾಕಾರರು ಕೊಳವೆ ಬಾವಿ ಕೊರೆಸಿದ ಬಳಿಕವಷ್ಟೇ ಪ್ರತಿಭಟನೆಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ ವೇಳೆ ಕಳೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ಸಮಸ್ಯೆ ಬಗ್ಗೆ ಚರ್ಚೆಗೆ ಬಂದಿದ್ದು, ಆದರೆ ಸದ್ಯದ ಪರಿಸ್ಥಿತಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿಲ್ಲ ಎಂದು ತಡೆ ಹಿಡಿಯಲಾಗಿದ್ದು, ಇದೀಗ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯೂ ಇದ್ದು, ಜಾನುವಾರುಗಳಿಗೂ ಸಮಸ್ಯೆ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ನೂತನ ಕೊಳವೆ ಬೋರ್ವೆಲ್ ಕೊರೆಸಲು ಬೋರ್ವೆಲ್ ಪಾಯಿಂಟ್ ಮಾಡುವ ಜಿಯಲಿಸ್ಟ್ ಅನ್ನು ಕರೆಸಿ ಪಾಯಿಂಟ್ ಮಾಡಿಸಿ ಕೂಡಲೆ ನೂತನ ಬೋರ್ವೆಲ್ ನ್ನು ಕೊರೆಸಿದ ಹಿನ್ನೆಲೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ವಾಪಸ್ ಪಡೆಸುವಲ್ಲಿ ಯಶಸ್ವಿಯಾದ ತಾಲೂಕು ಆಡಳಿತ.

ತಾಲೂಕಿನಲ್ಲಿ ಬರ ನಿರ್ವಹಣೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನು ನೀಡುವ ಮೂಲಕ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬರ ನಿರ್ವಹಣೆ ಕಾರ್ಯದಲ್ಲಿ ರೈತರೊಂದಿಗೆ ಸದಾ ಸನ್ನತವಾಗಿರುತ್ತದೆ ಎಂಬುದನ್ನು ತಾಲೂಕು ಆಡಳಿತ ತಿಳಿಸಿಕೊಟ್ಟಿದೆ.

 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ. ಇಓ ಪರಮೇಶ್ ಕುಮಾರ್, ಎಇಇ ನಟರಾಜ್, ಪಿಡಿಓ ತನುಜಾ, ಗ್ರಾಮಸ್ಥರಾದ ಬಿದರೆಹಳ್ಳಕಾವಲ್ ರವೀಶ್, ನಟರಾಜ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *