ತುಮಕೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರ ರಾಜ್ಯಗಳ ಚುನಾವಣೆಗೆ ಎಸ್.ಸಿ.ಪಿ/ ಟಿ.ಎಸ್.ಪಿ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂದು ಜೆ ಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಪಾವಗಡ ಪಟ್ಟಣದ ಅಂಜಿನೇಯ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಜನರೊಂದಿಗೆ ಜನತಾದಳ ಮತ್ತು ಮಿಸ್ಡ್ ಕಾಲ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರಿದು ರಾಜ್ಯ ಸರ್ಕಾರದ ದುರಾಡಳಿತ, ದುರ್ನಡತೆಯಿಂದ ಸರ್ಕಾರದ ಮೇಲೆ ರಾಜ್ಯದ ಮೂಲೇ ಮೂಲೇಗಳಲ್ಲಿ ವಿರೋಧ ವಾಕ್ತವಾಗಿರೋದು ಇದೆ ಮೊದಲ ಬಾರಿ ಎಂದು ಭವಿಸುತ್ತೇನೆ ಎಂದು ಹೇಳಿದರು.
ಕೇವಲ ಚುನಾವಣಾ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳ ಹಣವನ್ನು ಬಿಡುಗಡೆ ಮಾಡಿ ಜನರನ್ನು ಮರುಳು ಮಾಡಿ ಚುನಾವಣೆಗಳನ್ನು ಗೆಲ್ಲುವ ತಂತ್ರವನ್ನು ರೂಪಿಸುತ್ತಿದ್ದಾರೆ. ಈ ತಂತ್ರವನ್ನು ಗ್ರಾಮೀಣ ಭಾಗದ ಜನರು ಸರ್ಕಾರದ ತಂತ್ರಗಾರಿಕೆಯನ್ನು ಅರಿತುಕೊಂಡು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ 2028 ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಕ ಪಾಠ ಕಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿ. 9964002028 ಗೆ ಮಿಸ್ಡ್ ಕಾಲ್ ಕೊಡುವುದರ ಮುಖೇನ ಜೆ ಡಿ ಎಸ್ ಪಕ್ಷದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಮಾತನಾಡಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಲದಲ್ಲಿ ಪಾವಗಡ ತಾಲೂಕಿಗೆ ಅತಿ ಹೆಚ್ಚು ಆದ್ಯತೆ ನೀಡಿ ಭದ್ರಾ ಮೇಲ್ದಂಡೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆಗೆ ವಿಶೇಷ ಅನುದಾನ ನೀಡಿ ತಾಲೂಕಿಗೆ ನೀರು ಬರುವಲು ಕ್ಷಮಿಸಿದ್ದಾರೆ. ಅಲ್ಲದೆ ಶೈಕ್ಷಣಿಕವಾಗಿ ಮುಂದುವರಿಯಲು ವಸತಿ ಶಾಲೆಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿ 10 ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿ ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂ ಎಲ್ ಸಿ ತಿಪ್ಪೇಸ್ವಾಮಿ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷ ರಶ್ಮಿ ರಾಮೇಗೌಡ, ತುಮಕೂರು ಜಿಲ್ಲಾಧ್ಯಕ್ಷ ಆರ್ ಸಿ ಅಂಜಿನಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್ ಎ ಈರಣ್ಣ, ನಗರ ಅಧ್ಯಕ್ಷ ಗಡ್ಡಂ ತಿಮ್ಮರಾಜು, ಎಸ್ ಕೆ ರೆಡ್ಡಿ, ಕೊತ್ತೂರು ನಾಗೇಶ್, ಸೊಗಡು ವೆಂಕಟೇಶ್, ಮಾಜಿ ಜೀಪಂ ಸದಸ್ಯರಾದ ಚನ್ನಮಲ್ಲಯ್ಯ, ಕೋಟಗುಡ್ಡ ಅಂಜಿನಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ತಾಹೀರ ಬಾನು, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಅಂಬಿಕಾ ರಮೇಶ್,
ಸುರೇಂದ್ರ ,ಸೇತುರಾಮ್,ಮನು ಮಹೇಶ್, ಕವಲಗೆರೆ ರಾಮಾಂಜಿ, ಆಪ್ ಬಂಡೆ ಗೋಪಾಲ್
ಕೆಂಚಗನಹಳ್ಳಿ ಗೋವಿಂದಪ್ಪ,ಬಿಮ್ಮನಕುಂಟೆ ಸತ್ಯಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ ಪಾವಗಡ: ಕೆ ಮಾರುತಿ ಮುರಳಿ