ಪೋಲೀಸರು ಇರುವುದೇ ಸಾರ್ವಜನಿಕರ ರಕ್ಷಣೆಗಾಗಿ,ಪ್ರತಿ ಮನೆಯ ಮುಂದೆ ಸಿಸಿ ಕ್ಯಾಮರಾಹಾಕಿಸಿ ಪಿ.ಎಸ್.ಐ.ಪ್ರಸನ್ನಕುಮಾರ್

ತುಮಕೂರು:ಜಯನಗರ ಮಾರುಕಟ್ಟೆ ಪ್ರಾಂಗಣದ ಅಶ್ವತ್ಥಕಟ್ಟೆಯಲ್ಲಿ ಜಯನಗರ ಪೊಲೀಸ್ ಠಾಣೆಯಿಂದ ನಡೆದ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ.ಪ್ರಸನ್ನಕುಮಾರ್.ಕೆ ರವರು ನಾಗರೀಕರು ಪೋಲೀಸರೊಂದಿಗೆ ಸದಾ ಸಹಕರಿಸಬೇಕು,ಪೋಲೀಸರು ಇರುವುದೇ ನಾಗರೀಕ ಸಮಾಜದ ರಕ್ಷಣೆಗಾಗಿ,ಕೋಟ್ಯಾಂತರ ರೂಪಾಯಿ ವ್ಯಯಿಸಿ ಸ್ವಂತ ಮನೆ ಕಟ್ಟಿಸುತ್ತೀರಿ ಆದರೆ ಅದಕ್ಕೆ ಸಿಸಿ ಕ್ಯಾಮರಾ ಹಾಕಿಸಲು ಮೀನಮೇಷ ಎಣಿಸುತ್ತೀರಿ,ನಿಮ್ಮ ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು ಹಾಕಿಸಿ,ಮೆನಯಿಂದ ಹೆಚ್ಚು ದಿನ ಹೊರ ಹೋಗಬೇಕೆಂದರೆ ನಿಮ್ಮ ಬಡಾವಣೆಯ ಬೀಟ್ ಪೋಲೀಸರಿಗೆ ತಿಳಿಸಿ,ಬೆಲೆಬಾಳುವ ಒಡವೆ ವಸ್ತುಗಳನ್ನು ಪೋಲೀಸರಿಗೆ ಒಪ್ಪಿಸಿ ಹೊರ ಹೋಗಿ ಬಂದ ನಂತರ ನಿಮ್ಮ ಒಡವೆ,ವಸ್ತುಗಳನ್ನು ಪೋಲೀಸ್ ಠಾಣೆಯಿಂದ ಪಡೆಯಿರಿ,ನಿಮ್ಮ ರಕ್ಷಣೆಯೇ ನಮ್ಮ ಜವಾಬ್ದಾರಿ,ಉತ್ತಮ ನಾಗರೀಕ ಸಮಾಜಕ್ಕಾಗಿ ಪೋಲೀಸರು ಹೆಜ್ಜೆ ಇಡುತ್ತಿದ್ದೇವೆ ಪ್ರತಿ ನಾಗರೀಕರ ನೆಮ್ಮದಿಯೇ ನಮ್ಮ ಗುರಿ ಎಂದು ಜಯನಗರ ಪೋಲೀಸ್ ಠಾಣೆಯ ಪಿ.ಎಸ್.ಐ.ಪ್ರಸನ್ನಕುಮಾರ್.ಕೆ ರವರು ತಿಳಿಸಿದರು.

 

ಎ.ಎಸ್.ಐ.ದೇವರಾಜು ಮಾತನಾಡುತ್ತಾ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೋಲೀಸ್ ಠಾಣೆಗೆ ಮಾಹಿತಿ ನೀಡಿ,ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು,ಆನ್ ಲೈನ್ ಮೂಲಕ ಹಣ ಕದಿಯುವವರ ಬಗ್ಗೆ ಸದಾ ಎಚ್ಚರದಿಂದಿರಬೇಕು,ಏನೇ ಸಮಸ್ಯೆ ಇದ್ದರೆ ತಕ್ಷಣವೇ 112 ಗೆ ಉಚಿತ ಕರೆ ಮಾಡಿ,ಅಪರಿಚತರು,ಪರಿಚಯ ಇಲ್ಲದವರ ಬಳಿ ಸ್ನೇಹ ಮಾಡಬೇಡಿ ಸದಾ ಜಾಗೃತಿ ವಹಿಸಿ ಎಂದು ತಿಳಿಸಿದರು.

ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮಾತನಾಡುತ್ತಾ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಹಂಪ್ಸ್ ಗಳನ್ನು ಹಾಕಬೇಕು,ಮುಖ್ಯ ಸ್ಥಳಗಳಲ್ಲಿ ಸಿಸಿ ಕೆಮರಾ ಹಾಕಬೇಕು,ರಿಂಗ್ ರಸ್ತೆಯಲ್ಲಿ ವೀಲಿಂಗ್ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು,ಯುವಕ-ಯುವತಿಯರು ಕಾಲೇಜು ಬಿಟ್ಟು ಉದ್ಯಾನವನಗಳಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದು ಅವರ ಬಗ್ಗೆ ಪೋಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

 

ಅಧ್ಯಕ್ಷತೆ ವಹಿಸಿದ್ದ ಎಸ್.ಪುಟ್ಟೀರಪ್ಪನವರು ಮಾತನಾಡುತ್ತಾ ಪೋಲೀಸರು ಊಟ,ತಿಂಡಿ,ಮನೆ ಬಿಟ್ಟು ನಮಗಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟಿದ್ದಾರೆ ಅವರ ಶ್ರಮದಿಂದ ಇಂದು ಸಮಾಜದಲ್ಲಿ ನೆಮ್ಮದಿ ಇದೆ,ಅವರಿಗೆ ನಮ್ಮ ನಾಗರೀಕ ಸಮಿತಿಯಿಂದ ಧನ್ಯವಾದಗಳು,ಜನರು ಮುಂದಾಲೋಚನೆ ವಹಿಸಿಬೇಕು,ಎಲ್ಲರೂ ತಮ್ಮ ಮನೆ ಮುಂದೆ ಸಿಸಿ ಕ್ಯಾಮರಾ ಹಾಕಿಸಬೇಕು,ರಸ್ತೆಗಳನ್ನು ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೋಲೀಸರಿಗೆ ತಕ್ಷಣವೇ ತಿಳಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಯನಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ

ಬಿ.ವಿ.ದ್ವಾರಕನಾಥ್,ಮಹದೇವಯ್ಯ,ಗೋವಿಂದರಾಜು, ಪಿಎಸ್.ಐ.ಹನುಮಂತರಾಯಪ್ಪ.ಬಿ.ಕೆ,ಸಹಾಯಕ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ,ದೇವರಾಜು,ತಿರುಮಲೇಶ್,ಸಿಬ್ಬಂದಿಗಳಾದ ರಾಮಕೃಷ್ಣ,ಎಲ್.ಚಿಕ್ಕಮಣಿ,ಕರೀಂಪಾಷಾ,ಹೇಮಲತಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!