ಗುಬ್ಬಿ : ಸರಕಾರದ ಹಠ ಮಾರಿತನ ಹಾಗೂ ಅಹಂಕಾರ ದಿಂದ ಅಧಿಕಾರದ ದರ್ಪದಿಂದ ರೈತರ ವಿರುದ್ದ ಸರಕಾರ ಹೋದರೆ ನೀವೇ ಅನುಭವಿಸಬೇಕಾಗುತ್ತದೆ ಎಂದು ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗುಡುಗಿದರು.
ಗುಬ್ಬಿ ತಾಲೂಕಿನ ಸುಂಕಾಪುರದ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾಧ್ಯಮದ ಜೊತೆಯಲ್ಲಿ ಮಾತನಾಡಿದ ಅವರು ಇಲ್ಲಿ ನಡೆಯುತ್ತಿರುವಂತಹ ಕಾಮಗಾರಿಯೇ ಅವ್ಯ ಜ್ಞಾನಿಕವಾಗಿದ್ದು ಅದರ ಸ್ಥಿತಿಗತಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ ಯಾರೋ ಒಬ್ಬರಿಗಾಗಿ ತುಮಕೂರು ಜಿಲ್ಲೆಯ ನೀರನ್ನ ಕಿತ್ತುಕೊಳ್ಳುತ್ತಿರುವುದು ನಿಜವಾಗಿಯೂ ಅಕ್ಷಮ್ಯ ಅಪರಾಧವಾಗಿದೆ. ಎಲ್ಲರಿಗೂ ನೀರು ಬೇಕಿದೆ ಆದರೆ ಕಾಮಗಾರಿಯ ಮೂಲವನ್ನು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳ ಸರ್ವ ನಿಯೋಗವನ್ನು ಕರೆದು ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳಬೇಕು ನಿಮಗೆ ಬೇಕಾದಾಗೆ ತೀರ್ಮಾನವನ್ನ ತೆಗೆದುಕೊಂಡಲ್ಲಿ ನಿಮ್ಮ ಸರ್ಕಾರ ಬುಡಮೇಲೂ ಆಗುವುದು ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಹೋರಾಟವನ್ನು ಮಾಡಲು ಬಂದಿರುವಂತಹ ರೈತರ ಮೇಲೆ ಸ್ವಾಮಿಜಿಗಳ ಮೇಲೆ ತೀವ್ರ ಪ್ರಹಾರ ಮಾಡಿರುವಂತಹ ಸರಕಾರದ ವಿರುದ್ಧ ಗುಡುಗಿದ ಅವರು ಜೈಲಿಗೆ ಹಾಕಿರುವಂತಹ ರೈತರನ್ನು ಹೋರಾಟಗಾರರನ್ನ ಕೂಡಲೇ ಬಿಡುಗಡೆ ಮಾಡಬೇಕು.
ರೈತರನ್ನ ಮನ್ನಣೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಯೋಜನೆಯನ್ನು ನೀವು ಮಾಡಿದರೆ ಸರಕಾರದ ಬುಡ ಅಲ್ಲಾಡುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಚಾರದಲ್ಲಿ ಸರಿಯಾದ ಕ್ರಮವನ್ನ ತೆಗೆದುಕೊಳ್ಳಬೇಕು ರೈತರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಕ್ಕೆ ಚಾಟಿಯನ್ನು ಬೀಸಿದರು.
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ ರೈತರನ್ನ ಕತ್ತಲಿನಲ್ಲಿ, ಅಂತಕದಲ್ಲಿಟ್ಟು ಕೆಲಸ ಮಾಡಬೇಡಿ ಎಲ್ಲಿಗೆ ನೀರು ತೆಗೆದು ಕೊಂಡು ಹೋಗುತ್ತಿದ್ದೀರಾ ಎಂಬುದನ್ನ ರೈತರಿಗೆ ತಿಳಿಸಿ ನೀರಾವರಿ ಹೋರಾಟವನ್ನ ರಾಜಕೀಯ ಹೋರಾಟ ಎಂದು ಬಿಂಬಿಸಲು ಪ್ರಯತ್ನಿಸಬೇಡಿ ನೀರು ಬೆಂಕಿ ಯಾಗುವ ಮುಂಚೆ ಸರಿ ಪಡಿಸಿಕೊಂಡು ಅಧಿಕಾರ ಉಳಿಸಿಕೊಳ್ಳಿ ಯಾರಿಗೂ ಯಾವುದು ಶಾಶ್ವತವಲ್ಲ.
ನೀವು ಕೊತ್ವಾಲ್ ಅಲ್ಲ ತುಮಕೂರು ಜನ ಕೊತ್ವಾ ಲ್ ಗೆ ಹೆದರಲ್ಲ ಎಂದು ಅರ್ಥ ಮಾಡಿಕೊಳ್ಳಿ ಕೊಡಲೇ ಸಮಸ್ಯೆ ಬಗೆ ಹರಿಸಿ ಕೊಳ್ಳಲು
ರೈತರ ಜನ ಪ್ರತಿನಿದಿಗಳ ಸಭೆ ಕರೆಯಿರಿ.
ಪರಮೇಶ್ವರ್ ರವರೆ ನೀವು ಬ್ಲಾಕ್ ಮೇಲ್ ಗೆ ಹೆದರಬೇಡಿ ನಿಮ್ಮ ಜಿಲ್ಲೆ ಉಳಿಸಿಕೊಳ್ಳಿ ಜನರ ಆಕ್ರೋಶ ನಿಮ್ಮ ವಿರುದ್ಧ ತಿರುಗುವ ಮುನ್ನ ಸರಿಯಾದ ನಿರ್ಣಯ ತೆಗೆದುಕೊಳ್ಳಿ ನಿಮಗೆ ಅಧಿಕಾರ ಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಿ. ಜೈಲ್ ಬರೋ ಚಳುವಳಿಗೂ ಸಿದ್ದೀವಿದ್ದೇವೆ ಅದೆಷ್ಟು ಜನರನ್ನ ಜೈಲಿಗೆ ಹಾಕುತ್ತೀರಾ ನೋಡುತ್ತೀವಿ ಎಂದು ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರೈತರ ವಿರುದ್ಧ ಹೋಗಿರುವಂತಹ ಯಾವುದೇ ಸರಕಾರಗಳು ಸಹ ಉಳಿದಿಲ್ಲ ಈ ಯೋಜನೆ ನೋಡಿದರೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂಬುದು ಗೊತ್ತಾಗುತ್ತಿದ್ದು ಇಷ್ಟು ದೊಡ್ಡ ಹೋರಾಟ ನಡೆಯುತ್ತಿದೆ ಎಂದರೆ ಅವರಿಗೆ ನ್ಯಾಯ ಕೊಡಿಸುವುದು ನಿಮ್ಮೆಲ್ಲರ ಧರ್ಮ ಎಂದು ಅವರು ತಿಳಿಸಿದರು.
ಶಾಸಕ ಸುರೇಶ್ ಗೌಡ ಮಾತನಾಡಿ ಪರಮೇಶ್ವರ್ ಮಾತನಾಡುವಾಗ ನಮ್ಮನ್ನೆಲ್ಲ ಏನೋ ಕೇಳಿದ್ದೇವೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಕೂಡಲೇ ಅದಕ್ಕೆ ಉತ್ತರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್ ಜಿಲ್ಲಾಧ್ಯಕ್ಷ ಹೆಬ್ಬಾಕಾರವಿ, ಮುಖಂಡರಾದ ಎಸ್ ಡಿ ದಿಲೀಪ್ ಕುಮಾರ್, ಬಿಎಸ್ ನಾಗರಾಜು, ಚಂದ್ರಶೇಖರ ಬಾಬು, ಎನ್ ಸಿ ಪ್ರಕಾಶ್, ಪಂಚಾಕ್ಷರಿ, ಭೈರಪ್ಪ, ಸೇರಿದಂತೆ ಹಲವು ಮುಖಂಡರುಗಳು ಇದ್ದರು.