ಗಣರಾಜೋತ್ಸವ ಹಾಗೂ ಸಂವಿಧಾನ ಸಮರ್ಪಣಾ ದಿನಕ್ಕೆ ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ರವರಿಂದ ಕಾರ್ಯಕ್ರಮಕ್ಕೆ ಚಾಲನೆ

ತುಮಕೂರು.ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಗಣರಾಜೋತ್ಸವ ಹಾಗೂ ಸಂವಿಧಾನ ಸಮರ್ಪಣಾ ದಿನವನ್ನು ಸಮಿತಿಗಳ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ನೇತೃತ್ವದಲ್ಲಿ ಆಚರಿಸಲಾಯಿತು.

 

ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು,ಇಂದು ೭೬ ನೇ ಗಣರಾಜೋತ್ಸವವನ್ನು ಆಚರಿಸುತಿದ್ದೇವೆ. ಇದಕ್ಕೆ ಮೂಲ ಕಾರಣಕರ್ತರು ನಮ್ಮ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.ಅವರು ಪ್ರತಿಪಾದಿಸಿದ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು,ಅವರು ತೋರಿದ ದಾರಿಯಲ್ಲಿ ನಡೆಯುವ ಮೂಲಕ ಮುನ್ನೆಡೆದರೆ,ದೇಶದ ಭವಿಷ್ಯ ಉಜ್ವಲವಾಗಲಿದೆ. ಈ ನಿಟ್ಟಿನಲ್ಲಿ ಯುವಜನತೆ ಹೆಚ್ಚು ಜಾಗೃತಗೊಳ್ಳಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ ಮಾತನಾಡಿ, ಭಾರತವನ್ನು ಗಣರಾಜ ದಿನವನ್ನಾಗಿ ಘೋಷಿಸಿದ ದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.ಇದಕ್ಕೆ ಕಾರಣಕರ್ತರಾದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಇಂದು ಸ್ಮರಿಸಬೇಕಾಗಿದೆ.ಧರ್ಮ,ಜಾತಿ, ಭಾಷೆಯಲ್ಲಿ ವಿವಿಧೆತೆಯನ್ನು ಹೊಂದಿರುವ ಭಾರತ ಇಂದು ಅಭಿವೃದ್ದಿಯ ಪಥದಲ್ಲಿದ್ದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ.ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಚನ್ನಾಗಿದ್ದೇವೆ. ಕೆಲವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ ಬಂದಾಗ ಶೇ೧೨ರಷ್ಟಿದ್ದ ಭಾರತದ ಸಾಕ್ಷರತೆ ಇಂದು ಶೇ೮೨ರಷ್ಟಿದೆ.ಇದು ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.ಇದರ ಹಿಂದೆ ಅನೇಕ ಮಹನೀಯರ ಶ್ರಮವಿದೆ.ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಇಂದು ನಾವೆಲ್ಲರೂ ೭೬ನೇ ಗಣರಾಜೋತ್ಸವ ದಿನವನ್ನು ಆಚರಿಸುತ್ತಿದ್ದೇವೆ.ಒಂದು ವೇಳೆ ಬಾಬಾ ಸಾಹೇಬರು ಹುಟ್ಟದೆ, ಸಂವಿಧಾನ ರಚನೆಯಾಗದಿದ್ದರೆ, ಈ ದೇಶದ ದಲಿತರು, ಹಿಂದುಳಿದ ವರ್ಗಗಳ ಜನರು ನಾಯಿ, ನರಿಗಿಂತಲೂ ಕೀಳಾದ ಜೀವನ ನಡೆಸಬೇಕಾಗಿತ್ತು.ಅಧುನಿಕ ಭಾರತದಲ್ಲಿ ಸಂವಿಧಾನ ಸಮಾನತೆ, ಸ್ವಾತಂತ್ರ, ಭಾತೃತ್ವ,ನ್ಯಾಯವನ್ನು ಬಿತ್ತಿದೆ.ದಲಿತರು, ದಮನಿತರು, ಮಹಿಳೆಯರ ಪರವಾಗಿ ಹೆಚ್ಚು ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ.ದೇಶದ ಎಲ್ಲ ಜನರು ಸಾಮಾಜಿ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ.ಸ್ವಾತಂತ್ರ ಭಾರತದಲ್ಲಿ ಕೆಲವು ವರ್ಷಗಳಿಂದ ಯುವಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದು,ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಯುವ ಪೀಳಿಗೆ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಕಡೆಗೆ ದುಡಿಯಬೇಕಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಮುಖಂಡರಾದ ಕಾಲ ಬಾಬಣ್ಣ, ಅಕ್ಷರ ದಾಸೋಹ ಶಿವಣ್ಣ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ,ಪ್ರಧಾನ ಕಾರ್ಯದರ್ಶಿ ದರ್ಶನ್.ಬಿ.ಆರ್, ಅಟ್ರಾಸಿಟಿ ಸಮಿತಿ ಸದಸ್ಯರಾದ ಗೋವಿಂದರಾಜು ಕೆ ,ವೆಂಕಟೇಶಾಚಾರ್,ದಂಡುಕುಮಾರ್,ಸುರೇಶ್.ಟಿ.ಸಿ, ಅಗಲಕೋಟೆ ನರಸಿಂಹಮೂರ್ತಿ,ಟೈಲರ್ ಜಗದೀಶ್, ಗೂಳೂರು ರಾಜಣ್ಣ, ಛಲವಾದಿ ಶೇಖರ್,ಕೆಸ್ತೂರು ನರಸಿಂಹಮೂರ್ತಿ,ಕಂಬತ್ತನಹಳ್ಳಿ ನರಸಿಂಹಮೂರ್ತಣ್ಣ, ಗೋವಿಂದರಾಜು ಕೊತ್ತಿಹಳ್ಳಿ, ಶ್ರೀನಿವಾಸ್ ದಿಬ್ಬೂರು, ಹನುಮನರಸಯ್ಯ ಜೆಬಿ ನೇಶನ್. ಗಂಗಾಧರ್ ಜಿ ಆರ್. ಮಾದೇವ್. ಇಮ್ರಾನ್. ಗಗನ್ ಡಿ. ಬಿ. ಭಾರತ್ ಮಾತಾ ಶಿವಣ್ಣ. ರಂಗ ಸೋಮಯ್ಯ ಕೆ ಎಸ್. ಶಿವಣ್ಣ ಕೋತಿಹಳ್ಳಿ ಒಕ್ಕೋಡಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!